ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

Date:

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹೈದರಾಬಾದ್​​ ನೀಡಿದ್ದ ಬೃಹತ್​​ ಟಾರ್ಗೆಟ್​​​ ಮುಟ್ಟಲಾಗದೆ ಸೋಲೊಪ್ಪಿಕೊಂಡಿದೆ.

ಹೈದರಾಬಾದ್​ ನೀಡಿದ್ದ 267 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​, 19.1 ಓವರ್‌ಗಳಲ್ಲಿ 199 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 67 ರನ್‌ಗಳಿಂದ ಸೋತಿತು.

ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್​ ಮಾಡಿದ ಜೇಕ್ ಫ್ರೇಸರ್-ಮೆಗರ್ಕ್ ಕೇವಲ 18 ಬಾಲ್​ನಲ್ಲಿ 65 ರನ್​ ಸಿಡಿಸಿ, ಮಿಂಚಿದರು. ಅದರಲ್ಲೂ ವಾಷಿಂಗ್ಟನ್ ಸುಂದರ್ ಎಸೆದ ಒಂದೇ ಓವರ್​ನಲ್ಲಿ 3 ಸಿಕ್ಸರ್​​, ಮೂರು ಬೌಂಡರಿ ಸಿಡಿಸಿ 30 ರನ್​ ಚಚ್ಚಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೈದರಾಬಾದ್​ ಬೌಲರ್​ಗಳ ಬೆಂಡೆತ್ತಿದ ಜೇಕ್ ಫ್ರೇಸರ್-ಮೆಗರ್ಕ್ ಬರೋಬ್ಬರಿ 7 ಸಿಕ್ಸರ್​​, 5 ಬೌಂಡರಿ ಸಿಡಿಸಿ ಸಿಡಿಸಿ, ಮಾರ್ಕಾಂಡೆಗೆ ವಿಕೆಟ್ ಒಪ್ಪಿಸಿದರು.

ಆ ಬಳಿಕ ಅಭಿಷೇಕ್​ ಕೇವಲ 22 ಬಾಲ್​ನಲ್ಲಿ 44 ರನ್​ ಸಿಡಿಸಿ, ಸ್ಟಂಪ್ ಔಟ್ ಆದರು.

 

ಪಂತ್​​ ಏಕಾಂಗಿ ಹೋರಾಟ ಮಾಡಲು ಯತ್ನಿಸಿದರು. ಆದರೆ, ಸ್ಫೋಟಕ ಬ್ಯಾಟಿಂಗ್​ ಮಾಡಲು ಅವರಿಂದ ಆಗಲಿಲ್ಲ. 35 ಎಸೆತಗಳಲ್ಲಿ ಕೇವಲ 44 ರನ್​ ಸಿಡಿಸಿದರಾದರೂ, ಸೋಲಬೇಕಾಯಿತು.‌ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್​ಗಳಲ್ಲಿ 199 ರನ್​ಗಳಿಗೆ ಆಲೌಟ್​ ಆಯಿತು.

ಹೈದರಾಬಾದ್ ಪರ ಬೌಲಿಂಗ್‌ನಲ್ಲಿ ನಟರಾಜನ್ 4, ಮಾರ್ಕಂಡೆ, ನಿತೀಶ್ ರೆಡ್ಡಿ ತಲಾ 2 ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಗಳಿಸಿದರು.

ಮೊದಲು ಟಾಸ್​ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ರಿಷಬ್​ ಪಂತ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​ ಮೊದಲು ಬ್ಯಾಟಿಂಗ್​ ಮಾಡಿತ್ತು.

ಹೈದರಾಬಾದ್​ ಪರ ಓಪನರ್​ ಆಗಿ ಬಂದ ಅಭಿಷೇಕ್​ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಭರ್ಜರಿ ಬ್ಯಾಟಿಂಗ್​ ಮಾಡಿದ್ದರು. ಹೆಡ್ 89, ಅಭಿಷೇಕ್ 49 ಹಾಗೂ ಆ ಬಳಿಕ ಶಾಬಾಝ್ ಅವರ 59 ರನ್‌ಗಳ ನೆರವಿನಿಂದ ಹೈದರಾಬಾದ್​ 20 ಓವರ್​ನಲ್ಲಿ 266 ರನ್​ ಪೇರಿಸಿತ್ತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2025ರ ಐಪಿಎಲ್‌ನಲ್ಲೂ ಎಂಎಸ್ ಧೋನಿ ಆಡುವುದು ಅವರಿಗೆ ಬಿಟ್ಟ ವಿಚಾರ: ಚೆನ್ನೈ ಸಿಇಓ ಕಾಸಿ ವಿಶ್ವನಾಥನ್

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ...

ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಐಪಿಎಲ್ ಮುಗಿಯುತ್ತಾ ಬಂತು, ಇನ್ನೇನಿದ್ದರೂ ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ವಿಶ್ವಕಪ್ ಹುಚ್ಚು...

ಈ ಬಾರಿಯ ಐಪಿಎಲ್‌ನಲ್ಲಿ ಸದ್ದೇ ಮಾಡದ ಮ್ಯಾಕ್ಸ್‌ವೆಲ್ ಬ್ಯಾಟ್‌: ಗಳಿಸಿದ್ದು ಕೇವಲ 52 ರನ್!

ಬುಧವಾರ ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಎಲಿಮಿನೇಟರ್...

ಸೋಲಿನೊಂದಿಗೆ ಐಪಿಎಲ್‌ಗೆ ವಿದಾಯ ಹೇಳಿದ ‘ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್’

17ನೇ ಆವೃತ್ತಿಯ ಫೈನಲ್ ತಲುಪುವ ಭರವಸೆ ಮೂಡಿಸಿದ್ದ ಅಭಿಮಾನಿಗಳ ಫೇವರೀಟ್ ತಂಡ...