ಐಪಿಎಲ್ 2025ನ ಎರಡು ಮತ್ತು ಮೂರನೇ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಜತ್ ಪಾಟಿದಾರ್ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದವು. ಉಪ್ಪಳದ ರಾಜೀವಗಾಂಧಿ ಕ್ರೀ ಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಎಸ್‌ಆರ್‌ಎಚ್ ರನ್‌ಗಳ ಹೊಳೆಯನ್ನೇ ಹರಿಸಿದರೆ, ಮತ್ತೊಂದು ಪಂದ್ಯದಲ್ಲಿ ಮುಂಬೈ ನೀಡಿದ 155 ರನ್‌ಗಳ ಸವಾಲನ್ನು ಚೆನ್ನೈ ಸುಲಭವಾಗಿ ಗುರಿ ಮುಟ್ಟಿತು.
ಇಶಾನ್ ಕಿಶನ್ ಸ್ಫೋಟಕ ಶತಕದಿಂದ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 45 ಎಸೆತಗಳಲ್ಲಿ ಶತಕ ಹೊಡೆದ ಇಶಾನ್ ಮತ್ತು 31 ಎಸೆತಗಳಲ್ಲಿ 67 ರನ್ ಸಿಡಿಸಿದ ಟ್ರಾವಿಸ್ ಹೆಡ್ ಅವರ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 286 ರನ್ ಗಳಿಸಿತು. ಐಪಿಎಲ್‌ನಲ್ಲಿ ಇದು ಎರಡನೇ ಗರಿಷ್ಠ ಮೊತ್ತವಾಗಿದೆ. ಅತಿ ಹೆಚ್ಚಿನ ಮೊತ್ತದ (287) ದಾಖಲೆಯೂ ಸನ್‌ರೈಸರ್ಸ್ ಹೆಸರಿನಲ್ಲಿಯೇ ಇದೆ.
ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ (66; 37ಎ, 4X7, 6X4) ಮತ್ತು ಧ್ರುವ ಜುರೇಲ್ (70; 35ಎ, 4X5, 6X6) ಅವರ ಅಬ್ಬರದ ಹೊರತಾಗಿಯೂ ಜಯಗಳಿಸಲು ಸಾಧ್ಯವಾಗಲಿಲ್ಲ. 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 242 ರನ್ ಗಳಿಸಿದ ರಾಯಲ್ಸ್ 44 ರನ್‌ಗಳಿಂದ ಸೋಲನ್ನೊಪ್ಪಿಕೊಂಡಿತು.
ಈ ಸುದ್ದಿ ಓದಿದ್ದೀರಾ? ಐಪಿಎಲ್ ಅಖಾಡದಲ್ಲಿದ್ದಾರೆ 13 ಕನ್ನಡಿಗ ಆಟಗಾರರು: ‘ಆರ್‌ಸಿಬಿ’ಯಲ್ಲಿ ಯಾರ್‍ಯಾರಿದ್ದಾರೆ?
ಅಭಿಷೇಕ್ ಶರ್ಮಾ (24) ಮತ್ತು ಟ್ರಾವಿಸ್ ಹೆಡ್ (67) ನಿತೀಶ್ ಕುಮಾರ್ ರೆಡ್ಡಿ (30) ಹೆನ್ರಿಚ್ ಕ್ಲಾಸೆನ್ (34; 14ಎ) ಅಬ್ಬರಿಸಿ ದಾಖಲೆ ಮೊತ್ತಕ್ಕೆ ಕಾರಣರಾದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾತಸ್ಥಾನ್ ರಾಯಲ್ಸ್ ತಂಡವು ಸುಲಭವಾಗಿ ಸೋಲಲಿಲ್ಲ.
ಆರಂಭಿಕ ಯಶಸ್ವಿ ಜೈಸ್ವಾಲ್ (1 ರನ್) ಮತ್ತು ರಿಯಾನ್ ಪರಾಗ್ (4 ರನ್) ಅವರಿಬ್ಬರೂ ಸಿಮರ್ಜೀತ್ ಸಿಂಗ್ ಹಾಕಿದ ಎರಡನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ಸಂಜು ಬ್ಯಾಟ್ ಬೀಸಿದರು. ನಿತೀಶ್ ರಾಣಾ (11 ರನ್) ಕೂಡ ನಿರ್ಗಮಿಸಿದರು. ಸಂಜು ಜೊತೆಗೂಡಿದ ಜುರೇಲ್ 4ನೇ ವಿಕೆಟ್ ಜೊತೆಯಾಟದಲ್ಲಿ 111 ರನ್ ಸೇರಿಸಿದರು. ಸಂಜು ಮತ್ತು ಜುರೇಲ್ ಔಟಾದ ನಂತರವೂ ಶಿಮ್ರಾನ್ ಹೆಟ್ಮೆಯರ್ ಮತ್ತು ಶುಭಂ ದುಬೆ ಅವರು ತಲಾ 4 ಸಿಕ್ಸರ್ ಹೊಡೆದರು. ಆದರೆ ಅವರ ಪ್ರಯತ್ನಗಳಿಗೆ ಫಲ ಸಿಗಲಿಲ್ಲ
ಚೆನ್ನೈ ಗೆಲ್ಲಿಸಿದ ರಚಿನ್ ರವೀಂದ್ರ
ಮುಂಬೈ ವಿರುದ್ಧದ ಪಂದ್ಯದಲ್ಲಿ ರಚಿನ್ ರವೀಂದ್ರ(65) ಅಜೇಯ ಅರ್ಧಶತಕ ಮತ್ತು ಋತುರಾಜ್ ಗಾಯಕವಾಡ(53) ಅವರ ಮಿಂಚಿನ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿತು. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 4 ವಿಕೆಟ್‌ಗಳಿಂದ ಜಯಿಸಿತು. ಆದರೆ ಮುಂಬೈ ತಂಡದಲ್ಲಿ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ (32ಕ್ಕೆ3) ಅವರ ದಾಳಿಯಿಂದಾಗಿ ಚೆನ್ನೈ ತಂಡಕ್ಕೆ ಸುಲಭ ಜಯ ಒಲಿಯಲಿಲ್ಲ.
ಚೆನ್ನೈನ ಎಡಗೈ ವೇಗಿ ಖಲೀಲ್ ಅಹಮದ್ (29ಕ್ಕೆ3) ಮತ್ತು ಅಫ್ಗಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ (18ಕ್ಕೆ4) ಅವರಿಬ್ಬರ ಬೌಲಿಂಗ್ ಮುಂದೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 155/9 ಸಾಧಾರಣ ಮೊತ್ತ ಗಳಿಸಿತು.