ರಾಜ್‍ಕೋಟ್‍ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 434 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಭಾರತ ನೀಡಿದ 557 ರನ್ ಗುರಿಯನ್ನು ಬೆನ್ನಟ್ಟಿದ ಆಂಗ್ಲರು ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ಎರಡನೇ ಇನಿಂಗ್ಸ್‍ನಲ್ಲಿ39.4 ಓವರ್‍ನಲ್ಲಿ 122 ರನ್‍ಗಳಿಗೆ ಆಲೌಟ್ ಆದರು.
ರವೀಂದ್ರ ಜಡೇಜಾ 41/5,ಕುಲ್‍ದೀಪ್ ಯಾದವ್ 19/2, ಜಸ್‍ಪ್ರೀತ್ ಬೂಮ್ರಾ 18/1 ಹಾಗೂ ಆರ್ ಅಶ್ವಿನ್ 19/1 ವಿಕೆಟ್ ಕಬಳಿಸಿ ಭಾರತದ ಗೆಲುವಿನ ರೂವಾರಿಯಾದರು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.
ಎರಡನೇ ಇನಿಂಗ್ಸ್‍ನಲ್ಲಿ 196/4 ವಿಕೆಟ್‍ನೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ದ್ವಿಶತಕ 214, ಶುಭಮನ್ ಗಿಲ್ 91,ಸರ್ಫರಾಜ್ ಖಾನ್ 68 ರನ್ ಗಳಿಸಿ 430/4 ರನ್ ಕಲೆ ಹಾಕಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೈತಸ್ನೇಹಿ- ಚುನಾವಣಾ ಸಮಯದ ಗಿಮಿಕ್ ಆಗದಿರಲಿ
ಯಶಸ್ವಿ ಜೈಸ್ವಾಲ್ ಒಂದೇ ಸರಣಿಯಲ್ಲಿ ಎರಡು ದ್ವಿಶತಕ ಬಾರಿಸಿದ ಭಾರತದ ಮೂರನೇ ಆಟಗಾರರಾದರು. ಈ ಮೊದಲು ವಿನು ಮಕಂಡ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.
ಸತತ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ 200 ರನ್ ಬಾರಿಸಿದರು. 231 ಎಸೆತಗಳ ಅವರ ಆಟದಲ್ಲಿ 14 ಬೌಂಡರಿ ಹಾಗೂ 10 ಸ್ಫೋಟಕ ಸಿಕ್ಸರ್ ಗಳಿದ್ದವು.
ಭಾರತ ಮೊದಲ ಇನಿಂಗ್ಸ್‍ನಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರ ಶತಕದೊಂದಿಗೆ 445 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಬೆನ್ ಡಕೆಟ್ ಶತಕದೊಂದಿಗೆ 319 ರನ್ ಗಳಿಸಿತು.
ನಾಲ್ಕನೇ ಟೆಸ್ಟ್ ರಾಂಚಿಯಲ್ಲಿ ಫೆ.23 ರಂದು ಆರಂಭವಾಗಲಿದೆ