ವಿಶಾಖಪಟ್ಟಣದ ಡಾ. ವೈ ಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಸಫಲವಾಗಿದೆ.
Stumps on Day 1 of the 2nd Test.
Yashasvi Jaiswal batting beautifully on 179*
Scorecard – https://t.co/X85JZGt0EV #INDvENG @IDFCFIRSTBank pic.twitter.com/XlRqDI8Sgt
— BCCI (@BCCI) February 2, 2024
ಮೊದಲ ದಿನದಾಟ ಮುಕ್ತಾಯ ಕಂಡಿದ್ದು, 6 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ 336 ರನ್ ದಾಖಲಿಸುವಲ್ಲಿ ಸಫಲವಾಗಿದೆ. ಒಂದು ಕಡೆ ಇತರ ಬ್ಯಾಟ್ಸ್‌ಮನ್‌ಗಳು 35ರ ಮೇಲೆ ರನ್ ಬಾರಿಸದೆ ಇಂಗ್ಲೆಂಡ್ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದರೂ, ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿರುವ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಔಟಾಗದೆ 179 ರನ್ ಗಳಿಸಿದ್ದಾರೆ. 5 ರನ್ ಗಳಿಸಿರುವ ಆರ್ ಅಶ್ವಿನ್ ಅವರೊಂದಿಗೆ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದಿರಿಸಿಕೊಂಡಿದ್ದಾರೆ.
35 ರನ್‌ಗಿಂತ ಹೆಚ್ಚು ರನ್ ಬಾರಿಸದ ಇತರ ಬ್ಯಾಟರ್‌ಗಳು!
ಒಂದು ಕಡೆ ಯಶಸ್ವಿ ಜೈಸ್ವಾಲ್ ಔಟಾಗದೆ 179 ರನ್ ಗಳಿಸಿದ್ದರೂ ಕೂಡ ಇಂಗ್ಲೆಂಡ್ ಬೌಲರ್‌ಗಳು ಮೊದಲ ದಿನವೇ ಆರು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಕೆಟ್ ಒಪ್ಪಿಸಿರುವ ಎಲ್ಲ ಆರು ಬ್ಯಾಟರ್‌ಗಳು 35 ರನ್‌ಗಳಿಗಿಂತ ಹೆಚ್ಚು ರನ್ ಬಾರಿಸದಂತೆ ಕಟ್ಟಿ ಹಾಕುವಲ್ಲಿ ಆಂಗ್ಲರ ಪಡೆ ಯಶಸ್ವಿಯಾಗಿದೆ.
The second-highest score by an Indian on the first day of a home Test, behind Wasim Jaffer’s 192* vs Pakistan in 2007 at Eden Gardens 👏
Will Jaiswal make it a double tomorrow? #INDvENG pic.twitter.com/PDkzn5SZ85
— ESPNcricinfo (@ESPNcricinfo) February 2, 2024
41 ರನ್ ಎದುರಿಸಿ ರಕ್ಷಣಾತ್ಮಕ ಆಡವಾಡಿದ ನಾಯಕ ರೋಹಿತ್ ಶರ್ಮಾ ಕೇವಲ 14 ರನ್ ಗಳಿಸಿ, ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶೋಯೆಬ್ ಬಶೀರ್ ಬೌಲಿಂಗ್‌ನಲ್ಲಿ ಓಲಿ ಪೋಪ್‌ಗೆ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸಿದರು. ಉಳಿದಂತೆ ಶುಭಮನ್ ಗಿಲ್ 34(46 ಎಸೆತ, 5 ಬೌಂಡರಿ), ಶ್ರೇಯಸ್ ಅಯ್ಯರ್ 27(59 ಎಸೆತ, 3 ಬೌಂಡರಿ), ಈ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಜತ್ ಪಾಟೀದಾರ್ 32(72 ಎಸೆತ, 3 ಬೌಂಡರಿ) ಹಾಗೂ ತವರಿನಲ್ಲಿ ಟೆಸ್ಟ್ ಆಡುತ್ತಿರುವ ವಿಕೆಟ್ ಕೀಪರ್ ಕೆ ಎಸ್ ಭರತ್ 17(23 ಎಸೆತ, 2 ಬೌಂಡರಿ, 1 ಸಿಕ್ಸ್) ರನ್ ಗಳಿಸಿದರೆ, ಅಕ್ಷರ್ ಪಟೇಲ್ 51 ಎಸೆತಗಳಲ್ಲಿ 4 ಬೌಂಡರಿಯ ನೆರವಿನೊಂದಿಗೆ 27 ರನ್ ಗಳಿಸಿದರು.
ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಂತ ಜೈಸ್ವಾಲ್
ಇಂಗ್ಲೆಂಡ್‌ನ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಉತ್ತಮ ಪ್ರದರ್ಶನ ನೀಡಿದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 151 ಎಸೆತಗಳಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಶತಕ ಮೂಡಿಬಂತು. ಇದು ಅವರ ಎರಡನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕವಾಗಿದೆ.
94 ರನ್ ಗಳಿಸಿದ್ದಾಗ, ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಎರಡನೇ ಟೆಸ್ಟ್ ಶತಕ ಬಾರಿಸಿದರು.
That moment when @ybj_19 got to his second Test 💯
Watch 👇👇#INDvENG @IDFCFIRSTBank pic.twitter.com/Er7QFxmu4s
— BCCI (@BCCI) February 2, 2024
ಮೊದಲ ದಿನದಾಟದ ಮುಕ್ತಾಯದ ವೇಳೆ 257 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಐದು ಭರ್ಜರಿ ಸಿಕ್ಸರ್ ಹಾಗೂ 17 ಆಕರ್ಷಕ ಬೌಂಡರಿಗಳ ನೆರವಿನಿಂದ 179 ರನ್ ಗಳಿಸಿ, ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆ ಮೂಲಕ ಮೊದಲ ದ್ವಿಶತಕ ದಾಖಲಿಸುವ ಯೋಜನೆಯಲ್ಲಿದ್ದಾರೆ.
ಸಂಘಟಿತ ದಾಳಿ ನಡೆಸಿದ ಆಂಗ್ಲನ್ನರು
ಒಂದೆಡೆ ಜೈಸ್ವಾಲ್ ಶತಕದಾಟಿ ಮುಂದುವರಿಯುತ್ತಿದ್ದರೆ, ಇತರೆ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲದಂತೆ ಸಂಘಟಿತ ದಾಳಿ ನಡೆಸಿದ ಆಂಗ್ಲನ್ನರು, ಆರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಜೇಮ್ಸ್ ಆ್ಯಂಡರ್‌ಸನ್ ನೇತೃತ್ವದಲ್ಲಿ ಬೌಲಿಂಗ್ ದಾಳಿ ನಡೆಸಿದ ಆತಿಥೇಯರು, ಹೆಚ್ಚು ಜೊತೆಯಾಟ ನಡೆಯದಂತೆ ತಡೆಯುವಲ್ಲಿ ಸಫಲರಾದರು. ಆತಿಥೇಯರ ದಾಳಿಯ ನಡುವೆಯೂ ಕೂಡ ಜೈಸ್ವಾಲ್ ಹಾಗೂ ರಜತ್ ಪಾಟೀದಾರ್ 70 ರನ್‌ಗಳ ಜೊತೆಯಾಟ ನಡೆಸಿದರು.
Stuck at it and got our rewards 👏
Three wickets in the evening session to end Day One 💪
Match Centre: https://t.co/tALYxvMByx
🇮🇳 #INDvENG 🏴 | #EnglandCricket pic.twitter.com/ok2JVrOxU3
— England Cricket (@englandcricket) February 2, 2024
ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶೋಯೆಬ್ ಬಶೀರ್ ಎರಡು ವಿಕೆಟ್, ರೆಹಾನ್ ಅಹ್ಮದ್ 2 ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಆ್ಯಂಡರ್‌ಸರ್ ಹಾಗೂ ಟಾಮ್ ಹಾರ್ಟ್ಲಿ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗದರು.