ಪ್ಯಾರಿಸ್ ಒಲಿಂಪಿಕ್ಸ್ 2024 | ಭಾರತಕ್ಕೆ ಮೊದಲ ಪದಕ; 10 ಮೀಟರ್‌ ಏರ್‌ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್‌

Date:

Advertisements

ಪ್ಯಾರಿಸ್‌ ಒಲಿಂಪಿಕ್ಸ್‌ 2024 ರ ಎರಡನೇ ದಿನದಲ್ಲಿ ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಮನು ಭಾಕರ್‌ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

22 ವರ್ಷ ವಯಸ್ಸಿನ ಭಾಕರ್‌ ಫೈನಲ್‌ನಲ್ಲಿ 221.7 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದರು. ದಕ್ಷಿಣ ಕೊರಿಯಾದ ಒಯೇ ಜಿನ್‌ ಹಾಗೂ ಕಿಮ್‌ ಯೆಜಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿದರು.

WhatsApp Image 2024 07 28 at 4.11.56 PM
ಕಂಚಿನ ಪದಕ ಗೆದ್ದ ಖುಷಿಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ಮನು ಭಾಕರ್

ಭಾಕರ್‌ ಕ್ವಾಲಿಫಿಕೇಷನ್ಸ್ ಸುತ್ತಿನಲ್ಲಿ 580 ಸ್ಕೋರ್‌ ಗಳಿಸಿ ಮೂರನೇ ಸ್ಥಾನ ಗಳಿಸಿ ಮೊದಲ ಬಾರಿ ಪದಕ ಸುತ್ತಿಗೆ ಮುನ್ನಡೆದರು. ಹಂಗೆರಿಯ ಅನುಭವಿ ಶೂಟರ್ ವೆರೋನಿಕಾ ಮೇಜರ್‌ (582) ಮೊದಲ ಸ್ಥಾಣ ಗಳಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬರಾದ ರಿದಂ ಸಾಂಗ್ವಾನ್‌ 573 ಸ್ಕೋರ್‌ನೊಡನೆ 15ನೇ ಸ್ಥಾನ ಗಳಿಸಿದ್ದರು.

Advertisements

ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024: ಪಿ ವಿ ಸಿಂಧು ಸೇರಿ ಭಾರತದ ಆರು ಕ್ರೀಡಾಪಟುಗಳ ಶುಭಾರಂಭ

ಟೋಕಿಯೊದಲ್ಲಿ ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾಗ ಅವರಿಗೆ ಪಿಸ್ತೂಲ್‌ ಕೈಕೊಟ್ಟು, ಕಣ್ಣೀರು ಹಾಕಿದ್ದರು. ತಮ್ಮ ಅಮೋಘ ಸಾಧನೆಗಳ ಪಟ್ಟಿಯಲ್ಲಿ ಒಲಿಂಪಿಕ್‌ ಪದಕ ಸೇರಿಸುವ ಅವಕಾಶ ಅವರಿಗೆ ಈಗ ಒದಗಿದೆ. 20 ವರ್ಷಗಳಲ್ಲಿ ಈ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಶೂಟರ್‌ ಎಂಬ ಹಿರಿಮೆಗೆ ಪಾತ್ರವಾದರು.

ಹದಿಹರೆಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಮನು, ಈಗ ಟೋಕಿಯೊ ಒಲಿಂಪಿಕ್ಸ್‌ ಕಹಿನೆನಪನ್ನು ಅಳಿಸಿಹಾಕಿ, ಕ್ವಾಲಿಫಿಕೇಷನ್‌ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದರು.

ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ವಿಭಾಗದಲ್ಲಿ 10 ವರ್ಷದ ನಂತರ ಭಾರತಕ್ಕೆ ಪದಕ ಒಲಿದಿದೆ. ಇದಕ್ಕೂ ಮೊದಲು ರಾಜ್ಯವರ್ಧನ್‌ ಸಿಂಗ್‌ ರಾಥೋರ್(ಬೆಳ್ಳಿ , 2004ರ ಅಥೆನ್ಸ್  ಒಲಿಂಪಿಕ್ಸ್), ಅಭಿನವ್‌ ಬಿಂದ್ರ(ಚಿನ್ನ, 2008ರ ಬೀಜಿಂಗ್‌ ಒಲಿಂಪಿಕ್ಸ್),  ವಿಜಯ್‌ ಕುಮಾರ್‌(ಬೆಳ್ಳಿ, 2012ರ ಲಂಡನ್‌ ಒಲಿಂಪಿಕ್ಸ್ ) ಹಾಗೂ ಗಗನ್‌ ನರಾಂಗ್‌(ಕಂಚು, 2012ರ ಲಂಡನ್‌ ಒಲಿಂಪಿಕ್ಸ್) ಪದಕ ಗೆದ್ದಿದ್ದರು.

ಮಹಿಳೆಯರ ಶೂಟಿಂಗ್‌ ವಿಭಾಗದಲ್ಲಿ ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕ ಲಭಿಸಿದೆ. ಹರಿಯಾಣದ ಜಜ್ಜಾರ್‌ನವರಾದ ಮನು ಭಾಕರ್ ವಿಶ್ವಕಪ್‌ನಲ್ಲಿ 9 ಚಿನ್ನ, 2 ಬೆಳ್ಳಿ, ಯುವ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಂದು ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.

 

 

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X