ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಆಫ್ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮೊದಲ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಸರದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಎರಡನೇ ದಿನದಾಟದ ಪಂದ್ಯದಲ್ಲಿ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಝಾಕ್ ಕ್ರಾಲಿ ಅವರನ್ನು ತನ್ನ ಸ್ಪಿನ್ ಮಾಂತ್ರಿಕತೆಗೆ ಬೀಳಿಸಿದ ತಮಿಳುನಾಡಿನ ರವಿಚಂದ್ರನ್ ಅಶ್ವಿನ್, ಈ ಸಾಧನೆಯನ್ನು ಮಾಡಿದ್ದಾರೆ. ಅಶ್ವಿನ್ ಎಸೆದ ಎಸೆತವನ್ನು ಎದುರಿಸಿದ ಕ್ರಾಲಿ, ಸ್ವೀಪ್ ಮಾಡುವ ಮೂಲಕ ಬೌಂಡರಿಗೆ ಯತ್ನಿಸಿದರು. ಆದರೆ ವಿಫಲವಾಗಿ ಅದು ಟಾಪ್ ಎಡ್ಜ್ ಆದ್ದರಿಂದ ರಜತ್ ಪಾಟೀದಾರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆ ಮೂಲಕ ರವಿಚಂದ್ರನ್ ಅಶ್ವಿನ್ 500ನೇ ವಿಕೆಟ್ ಪಡೆದರು.
𝙏𝙝𝙖𝙩 𝙇𝙖𝙣𝙙𝙢𝙖𝙧𝙠 𝙈𝙤𝙢𝙚𝙣𝙩! 👏 👏
Take A Bow, R Ashwin 🙌 🙌
Follow the match ▶️ https://t.co/FM0hVG5pje#TeamIndia | #INDvENG | @ashwinravi99 | @IDFCFIRSTBank pic.twitter.com/XOAfL0lYmA
— BCCI (@BCCI) February 16, 2024
ಭಾರತದ ಪರ ಅತಿ ವೇಗವಾಗಿ 500 ವಿಕೆಟ್ ಸಾಧನೆ ಮಾಡಿದ ಎರಡನೇ ಬೌಲರ್ ಆಗಿ ಅಶ್ವಿನ್ ಗುರುತಿಸಿಕೊಂಡಿದ್ದಾರೆ. ಭಾರತದ ಸ್ಪಿನ್ ಮಾಂತ್ರಿಕ, ನಿವೃತ್ತ ಕ್ರಿಕೆಟಿಗರಾಗಿರುವ ಕನ್ನಡಿಗ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ.
500 and counting for Ashwin 🙌
How far up this list will he climb? pic.twitter.com/X9kVgqdoFv
— ESPNcricinfo (@ESPNcricinfo) February 16, 2024
ಈಗ 500 ವಿಕೆಟ್ ಪಡೆದ 37 ವರ್ಷದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, 500 ವಿಕೆಟ್ ಸಾಧನೆ ಮಾಡಿದ ಸಾಧಕರ 9ನೇ ಸ್ಥಾನದಲ್ಲಿದ್ದರೆ, ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇದುವರೆಗೂ ಆಡಿರುವ 98 ಟೆಸ್ಟ್ ಪಂದ್ಯಗಳ 184 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡುವ ಮೂಲಕ ಅತಿ ವೇಗವಾಗಿ ಈ ಸಾಧನೆ ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
From number 1⃣ to 5⃣0⃣0⃣!
R Ashwin’s momentous Test journey in 📸📸
Tell us your favourite one 👇#TeamIndia | #INDvENG | @ashwinravi99 | @IDFCFIRSTBank pic.twitter.com/MCj6eIQGkg
— BCCI (@BCCI) February 16, 2024
500ಕ್ಕಿಂತಲೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ಕ್ರಮವಾಗಿ ಆಸೀಸ್‌ನ ಶೇನ್ ವಾರ್ನ್(708), ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್‌ಸನ್ 695, ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 619, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 604, ಆಸೀಸ್‌ನ ಗ್ಲೆನ್ ಮೆಕ್‌ಗ್ರಾಥ್ 563, ವೆಸ್ಟ್ ಇಂಡೀಸ್ ಕರ್ಟ್ನಿ ವಾಲ್ಶ್ 519, ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 517 ವಿಕೆಟ್ ಪಡೆದಿದ್ದು, ಅಗ್ರ 10ರೊಳಗಿನ ಸ್ಥಾನದಲ್ಲಿದ್ದಾರೆ.
𝗠𝘁. 𝟱𝟬𝟬! 🫡 🫡
Only the second #TeamIndia cricketer to reach this landmark in Tests 🙌 🙌
Congratulations, @ashwinravi99 👏 👏#INDvENG | @IDFCFIRSTBank pic.twitter.com/bP8wUs6rd0
— BCCI (@BCCI) February 16, 2024
ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 500 ವಿಕೆಟ್‌ಗಳ ಗುರಿ ಮುಟ್ಟಿದ್ದರು. 500 ವಿಕೆಟ್ ಸಾಧನೆಗೈದ ಪಟ್ಟಿಯಲ್ಲಿ ಮೂರನೇ ಆಸೀಸ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ICC poster for Ravi Ashwin. pic.twitter.com/ocxEJMpA1t
— Mufaddal Vohra (@mufaddal_vohra) February 16, 2024
ಸದ್ಯ 500ಕ್ಕಿಂತಲೂ ಹೆಚ್ಚು ವಿಕೆಟ್ ಪಡೆದಿರುವವರ ಪಟ್ಟಿಯಲ್ಲಿರುವವ ಪೈಕಿ ಜೇಮ್ಸ್ ಆ್ಯಂಡರ್‌ಸನ್, ನಾಥನ್ ಲಿಯಾನ್ ಹಾಗೂ ಆರ್ ಆಶ್ವಿನ್ ಇನ್ನೂ ಕೂಡ ಕ್ರಿಕೆಟ್‌ನಲ್ಲಿದ್ದಾರೆ. ಉಳಿದವರೆಲ್ಲರೂ ನಿವೃತ್ತರಾಗಿದ್ದಾರೆ. ನಿವೃತ್ತರಾಗಿರುವವರ ಪೈಕಿ ಆಸ್ಟ್ರೇಲಿಯಾ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ 2022ರ ಮಾರ್ಚ್ 4ರಂದು ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಹೃದಯಾಘಾತದಿಂದ ನಿಧನರಾಗಿದ್ದರು.
500 ವಿಕೆಟ್ ಪಡೆದ ಸಾಧಕರ ಪಟ್ಟಿ ಹೀಗಿದೆ:
- ಮುತ್ತಯ್ಯ ಮುರಳೀಧರನ್(ಶ್ರೀಲಂಕಾ): 800 ವಿಕೆಟ್-133 ಪಂದ್ಯ-233 ಇನ್ನಿಂಗ್ಸ್
- ಶೇನ್ ವಾರ್ನ್(ಆಸ್ಟ್ರೇಲಿಯಾ): 708 ವಿಕೆಟ್-145 ಪಂದ್ಯ-273 ಇನ್ನಿಂಗ್ಸ್
- ಜೇಮ್ಸ್ ಆ್ಯಂಡರ್‌ಸನ್(ಇಂಗ್ಲೆಂಡ್): 696 ವಿಕೆಟ್-185* ಪಂದ್ಯ-344 ಇನ್ನಿಂಗ್ಸ್
- ಅನಿಲ್ ಕುಂಬ್ಳೆ(ಟೀಮ್ ಇಂಡಿಯಾ): 619 ವಿಕೆಟ್-132 ಪಂದ್ಯ-236 ಇನ್ನಿಂಗ್ಸ್
- ಸ್ಟುವರ್ಟ್ ಬ್ರಾಡ್(ಇಂಗ್ಲೆಂಡ್): 604 ವಿಕೆಟ್-167 ಪಂದ್ಯ-309 ಇನ್ನಿಂಗ್ಸ್
- ಗ್ಲೆನ್ ಮೆಕ್‌ಗ್ರಾಥ್(ಆಸ್ಟ್ರೇಲಿಯಾ): 563 ವಿಕೆಟ್-124 ಪಂದ್ಯ-243 ಇನ್ನಿಂಗ್ಸ್
- ಕರ್ಟ್ನಿ ವಾಲ್ಶ್(ವೆಸ್ಟ್ ಇಂಡೀಸ್): 519 ವಿಕೆಟ್-132 ಪಂದ್ಯ-242 ಇನ್ನಿಂಗ್ಸ್
- ನಾಥನ್ ಲಿಯಾನ್(ಆಸ್ಟ್ರೇಲಿಯಾ): 517 ವಿಕೆಟ್-127 ಪಂದ್ಯ-238 ಇನ್ನಿಂಗ್ಸ್
- ಆರ್. ಅಶ್ವಿನ್(ಟೀಮ್ ಇಂಡಿಯಾ): 500 ವಿಕೆಟ್-98* ಪಂದ್ಯ-184 ಇನ್ನಿಂಗ್ಸ್