ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಮಾರ್ಚ್‌ನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ.
ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಬಿಸಿಸಿಐ, ಮೊಹಮ್ಮದ್ ಶಮಿ ಜನವರಿಯ ಕೊನೆಯ ವಾರದಲ್ಲಿ ಇಮ್ಮಡಿ ಪಾದಕ್ಕೆ ಚುಚ್ಚುಮದ್ದು ಪಡೆದುಕೊಂಡಿದ್ದರು. ನಂತರದ ಮೂರು ವಾರಗಳಲ್ಲಿ ನಿಧಾನವಾಗಿ ಓಡಲು ಪ್ರಾರಂಭಿಸಿದರು. ಆದರೆ ಚುಚ್ಚುಮದ್ದು ಪ್ರಯೋಜನಕಾರಿಯಾಗಿಲ್ಲ. ಇದಕ್ಕೆ ಇರುವ ಪ್ರಮುಖ ಆಯ್ಕೆ ಶಸ್ತ್ರಚಿಕಿತ್ಸೆಯಾಗಿದೆ. ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಈ ಕಾರಣಕ್ಕಾಗಿ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿಸಲಾಗಿದೆ.
ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ 24 ವಿಕೆಟ್‌ಗಳನ್ನು ಕಬಳಿಸಿದ್ದರು. ಗಾಯಗೊಂಡಿದ್ದರೂ ವಿಶ್ವಕಪ್ ಟೂರ್ನಿಯಲ್ಲಿ ಹಲವು ಪಂದ್ಯಗಳನ್ನು ಗೆಲ್ಲಲು ಕಾರಣರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ
33 ವರ್ಷದ ಮೊಹಮ್ಮದ್ ಶಮಿ ಇಲ್ಲಿಯವರೆಗೂ ತಮ್ಮ ಒಂದು ದಶಕದ ಕ್ರಿಕೆಟ್ ವೃತ್ತಿ ಜೀವನದಲ್ಲಿ 229 ಟೆಸ್ಟ್, 195 ಏಕದಿನ ಹಾಗೂ 24 ಟಿ20 ವಿಕೆಟ್‌ಗಳನ್ನು ಕಿತ್ತಿದ್ದಾರೆ.
ಗಾಯಗೊಂಡಿರುವ ಶಮಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿ ಸೇರಿದಂತೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲೂ ಅಲಭ್ಯರಾಗಲಿದ್ದಾರೆ.ಆಸೀಸ್‌ನಲ್ಲಿ ನಡೆಯಲಿರುವ ಸರಣಿಯ ವೇಳೆ ಶಮಿ ಗುಣಮುಖರಾಗಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ
