ನೂತನ ನಾಯಕ ಹಾರ್ದಿಕ್ ಪಾಂಡ್ಯಾ ನೇತೃತ್ವದಲ್ಲಿ 2024ರ ಐಪಿಎಲ್‌ನ ಅಭಿಯಾನ ಆರಂಭಿಸಿದ್ದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಸೋಲಿನಿಂದ ಅಭಿಯಾನ ಆರಂಭಿಸಿ, ಸೋಲಿನಿಂದಲೇ ಅಂತ್ಯಗೊಳಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನ ತಮ್ಮ ಪಾಲಿನ ಕೊನೆಯ ಪಂದ್ಯದಲ್ಲಿ 18 ರನ್‌ಗಳಿಂದ ಸೋತಿದೆ. ಆ ಮೂಲಕ ಲೀಗ್‌ನಲ್ಲಿ ಒಟ್ಟು ಆಡಿದ 14 ಪಂದ್ಯದಲ್ಲಿ 10 ರಲ್ಲಿ ಸೋತಿದ್ದು, ಕೇವಲ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ, ಅಂಕಪಟ್ಟಿಯನ್ನು 10ನೇ ಹಾಗೂ ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ.
ಕಳೆದ ಮಾರ್ಚ್ 24ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ವಿರುದ್ಧ ಮೊದಲ ಪಂದ್ಯವನ್ನಾಡುವ ಮೂಲಕ ಮುಂಬೈ ಇಂಡಿಯನ್ಸ್, 2024ರ ಅಭಿಯಾನ ಆರಂಭಿಸಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, 6 ರನ್‌ಗಳಿಂದ ಸೋಲು ಅನುಭವಿಸಿತ್ತು.
@LucknowIPL sign off on a high ✌️
A solid 1️⃣8️⃣-run win for KL Rahul & his men at the Wankhede 👏
Scorecard ▶️ https://t.co/VuUaiv4G0l #TATAIPL | #MIvLSG pic.twitter.com/CWUUUcIbff
— IndianPremierLeague (@IPL) May 17, 2024
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಲಕ್ನೋ ತಂಡವು, ನಿಕೊಲಸ್ ಪೂರನ್ ಅವರ ಸ್ಫೋಟಕ ಅರ್ಧಶತಕದ(75, 29 ಎಸೆತ,8 ಸಿಕ್ಸರ್, 5 ಬೌಂಡರಿ) ಹಾಗೂ ನಾಯಕ ಕೆ ಎಲ್ ರಾಹುಲ್ ಅವರ ಅರ್ಧಶತಕ(55 ರನ್, 41 ಎಸೆತ)ದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತ್ತು.
Last 7 overs mein saas bhi nahi le paaye 😳🔥 pic.twitter.com/EDNBNrgnOo
— Lucknow Super Giants (@LucknowIPL) May 17, 2024
ಈ ಗುರಿಯನ್ನು ಬೆನ್ನತ್ತಿದ ಹಾರ್ದಿಕ್ ಪಾಂಡ್ಯಾ ನೇತೃತ್ವದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 18 ರನ್‌ಗಳಿಂದ ಲಕ್ನೋ ವಿರುದ್ಧ ಸೋಲೊಪ್ಪಿಕೊಂಡಿತು.
UNBELIEVABLE FIELDING EFFORTS FROM KRUNAL PANDYA. 👌🔥pic.twitter.com/JYamNpDuFi
— Mufaddal Vohra (@mufaddal_vohra) May 17, 2024
ಮುಂಬೈ ಪರವಾಗಿ ಆರಂಭಿಕ ಆಟಗಾರ ರೋಹಿತ್ ಶರ್ಮಾ 68 ರನ್ ಹಾಗೂ ಕೊನೆಯಲ್ಲಿ ನಮನ್ ಧೀರ್ 62 ರನ್ ಗಳಿಸಿ, ಮಿಂಚಿದರು. ಲಕ್ನೋ ಪರ ಬೌಲಿಂಗ್‌ನಲ್ಲಿ ರವಿ ಬಿಷ್ಣೋಯ್ ಹಾಗೂ ನವೀನುಲ್ ಹಕ್ ಎರಡು ವಿಕೆಟ್ ಗಳಿಸಿದರೆ, ಕೃನಾಲ್ ಪಾಂಡ್ಯಾ ಹಾಗೂ ಮೊಹ್ಸಿನ್ ಖಾನ್ ತಲಾ ಒಂದೊಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.
Mumbai Indians fans today #MivLsg pic.twitter.com/yG1m6nhUVU
— Rajabets 🇮🇳👑 (@smileagainraja) May 17, 2024
6ನೇ ಸ್ಥಾನದಲ್ಲಿ ಉಳಿದುಕೊಂಡ ಲಕ್ನೋ
ಪ್ಲೇ ಆಫ್ ರೇಸ್‌ನಲ್ಲಿದ್ದ ಲಕ್ನೋ ತಂಡವು, ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಸೋತಿದ್ದರಿಂದ ಬಹುತೇಕ ಪ್ಲೇ ಆಫ್ ರೇಸ್‌ನಿಂದ ದೂರವಾಗಿತ್ತು. ಮುಂಬೈ ವಿರುದ್ಧದ ಕೊನೆಯ ಪಂದ್ಯದಲ್ಲಿ 18 ರನ್‌ಗಳಿಂದ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಆ ಮೂಲಕ 14 ಪಂದ್ಯಗಳಲ್ಲಿ 7 ಗೆಲುವು, 7 ಸೋಲಿನೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ.
Maybe we didn’t make you happy every time, but we tried our best till the end. 💙
We’ll see you in 2025, LSG Brigade 🫡 pic.twitter.com/kjEtnvhgg0
— Lucknow Super Giants (@LucknowIPL) May 17, 2024
