- ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿರುವ ನೀರಜ್ ತಾಯಿ ಸರೋದ್ ದೇವಿಯವರ ವಿಡಿಯೋ
- ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ನೀರಜ್ ಚೋಪ್ರಾ
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಜಯಿಸುವ ಮೂಲಕ ಮೊತ್ತ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದರು.
ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡು ದಾಖಲೆ ಬರೆದಿದ್ದರು.
ಈ ನಡುವೆ ಮಗನ ಸಾಧನೆಯ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಪತ್ರಕರ್ತನೋರ್ವ ಕೇಳಿದ್ದ ಪ್ರಶ್ನೆಗೆ ನೀರಜ್ ಚೋಪ್ರಾ ಅವರ ತಾಯಿ, ಸರೋಜ್ ದೇವಿ ನೀಡಿರುವ ಉತ್ತರವೊಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಅಥ್ಲೀಟ್ ಅರ್ಷದ್ ವಿರುದ್ಧ ತಮ್ಮ ಮಗನ ವಿಜಯದ ಬಗ್ಗೆ ತಾವೆಷ್ಟು ಭಾವುಕರಾಗಿದ್ದೀರಿ? ಎಂದು ಪತ್ರಕರ್ತ ಕೇಳಿದಾಗ, “ನೋಡಿ, ಎಲ್ಲರೂ ಮೈದಾನದಲ್ಲಿ ಆಡಲು ಬಂದಿದ್ದಾರೆ. ಆಟಗಾರ ಎಂದರೆ ಆತ ಆಟಗಾರನಷ್ಟೇ. ಒಬ್ಬರು ಅಥವಾ ಇನ್ನೊಬ್ಬರು ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗಾಗಿ, ಅಲ್ಲಿ ಪಾಕಿಸ್ತಾನ ಅಥವಾ ಹರಿಯಾಣದವರು ಎಂಬ ಪ್ರಶ್ನೆಯೇ ಇಲ್ಲ. ನೀರಜ್ ಗೆದ್ದಿರುವುದು ಬಹಳ ಸಂತೋಷವಿದೆ. ಪಾಕಿಸ್ತಾನದ ಆಟಗಾರ(ಅರ್ಷದ್ ನದೀಮ್) ಗೆದ್ದಿದ್ದರೂ ಕೂಡ ಅಷ್ಟೇ ಸಂತೋಷ ಇರುತ್ತಿತ್ತು” ಎಂದು ಹೇಳಿದ್ದಾರೆ.
ಸದ್ಯ ಅವರ ಉತ್ತರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದ್ದು, “ನೀರಜ್ ಚೋಪ್ರಾ ಚಿನ್ನ ಗೆದ್ದಿರುವುದು ಒಂದು ಸಾಧನೆಯಾದರೆ, ಅವರ ಕುಟುಂಬವೇ ಚಿನ್ನದಂತೆ ಇದೆ ನನಗೆ ಭಾಸವಾಗುತ್ತಿದೆ” ಎಂದು ರೋಶನ್ ರೈ ಎಂಬವರು ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
‘ಗೋದಿ ಮೀಡಿಯಾದ ಪತ್ರಕರ್ತ, ನೀರಜ್ ತಾಯಿಯ ಬಾಯಿಂದ ಪಾಕಿಸ್ತಾನದ ಹೆಸರನ್ನು ಎತ್ತಿ ದ್ವೇಷ ಹರಡಲು ಕೈ ಹಾಕಿದ್ದಾನೆ. ಆದರೆ ಅವರು ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಇದಕ್ಕಿಂತ ಸ್ಪಷ್ಟವಾದ ಉತ್ತರ ಇನ್ನೇನು ಬೇಕಿದೆ ಹೇಳಿ’ ಎಂದು ನೆಟ್ಟಿಗರೊಬ್ಬರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಇದು ಜಗತ್ತಿನ ಹಲವು ಆಟಗಾರರ ನಡುವೆ ನಡೆದ ಪೋಟಿಯೆಂದು ಆ ಸುದ್ದಿಗಾರನಿಗೆ ತಿಳಿದಿಲ್ಲವೇ ಎಂದು ಕೇಳಿ ಆತನನ್ನು ಬಯಲು ಮಾಡಬೇಕಿತ್ತು!
Brilliant News report!