ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಆರೋಪದಲ್ಲಿ ನೇಪಾಳ ರಾಷ್ಟ್ರೀಯ ತಂಡದ ಕ್ರಿಕೆಟಿಗ ಸಂದೀಪ್ ಲಮಿಚನ್ನೆ ಅವರನ್ನು ದೋಷಿ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯನ್ನು ಜನವರಿ 12 ರಂದು ಪ್ರಕಟಿಸಲಾಗುತ್ತದೆ.
ಶಶೀರ್ ರಾಜ್ ಧಾಕಲ್ ನೇತೃತ್ವದ ಪೀಠ ಪೀಠ ಶುಕ್ರವಾರ(ಡಿಸೆಂಬರ್ 29) ಅಂತಿಮ ವಿಚಾರಣೆ ನಂತರ ತೀರ್ಪು ಪ್ರಕಟಿಸಿದೆ. ಜನವರಿ 12ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ.
ಕೆಲವು ತಿಂಗಳ ಹಿಂದೆ ಕಠ್ಮಂಡು ಹೈಕೋರ್ಟ್ ಪ್ರಮುಖ ಷರತ್ತುಗಳೊಂದಿಗೆ 20 ಲಕ್ಷ ರೂ. ಬಾಂಡ್‌ನೊಂದಿಗೆ ಸಂದೀಪ್ ಲಮಿಚನ್ನೆ ಅವರಿಗೆ ಜಾಮೀನು ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
ಕಠ್ಮಂಡುವಿನ ಹೋಟಲ್‌ವೊಂದರಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಸಂದೀಪ್ ಲಮಿಚನ್ನೆ ಅವರನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು.
23 ವರ್ಷದ ಲಮಿಚನ್ನೆ ನೇಪಾಳ ರಾಷ್ಟ್ರೀಯ ತಂಡದ ಕ್ರಿಕೆಟಿಗನಾಗಿದ್ದು, ಐಪಿಎಲ್ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಮೊದಲ ಕ್ರಿಕೆಟಿಗನಾಗಿದ್ದಾನೆ. 2018ರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಲಮಿಚನ್ನೆ ಪಾದರ್ಪಣೆ ಮಾಡಿದ್ದರು.
ಲೆಗ್ ಸ್ಪಿನ್ನರ್ ಆಗಿರುವ ಸಂದೀಪ್ ಲಮಿಚನ್ನೆ ರಾಷ್ಟ್ರೀಯ ಟಿ20 ಕ್ರೀಡೆಗಳ ಜೊತೆಗೆ ಐಪಿಎಲ್, ಆಸೀಸ್ ಬಿಗ್ ಬ್ಯಾಷ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಬೌಲಿಂಗ್‌ನಲ್ಲಿ ಲಮಿಚನ್ನೆ 50 ವಿಕೆಟ್‌ಗಳನ್ನು ಕಬಳಿಸಿದ್ದಾರೆ.