ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಮೈದಾನದಲ್ಲಿ ಫೀಲ್ಡಿಂಗ್ ವೇಳೆ ಚೆಂಡು ಮುಖಕ್ಕೆ ಬಡಿದು, ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
37ನೇ ಓವರ್‌ನಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರವೀಂದ್ರ, ಖುಷ್ದಿಲ್ ಶಾ ಮೈಕೆಲ್ ಬ್ರೇಸ್‌ವೆಲ್ ಅವರ ಎಸೆತದಲ್ಲಿ ಸಿಕ್ಸ್ ಬಾರಿಸಲು ಆನ್ ಸೈಡ್ ಕಡೆಗೆ ಸ್ವೀಪ್ ಮಾಡಿ, ಜೋರಾಗಿ ಬ್ಯಾಟ್ ಬೀಸಿದ್ದರು. ತನ್ನತ್ತ ಬಂದ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸಿಕೊಳ್ಳಲು ನಿಂತಿದ್ದ ರಚಿನ್ ರವೀಂದ್ರ ಅವರ ಮುಖಕ್ಕೆ ನೇರವಾಗಿ ಬಡಿದಿದ್ದರಿಂದ ಗಂಭೀರ ಸ್ವರೂಪದ ಗಾಯವಾಗಿದೆ.

ಹೊನಲು ಬೆಳಕಿನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಚೆಂಡನ್ನು ಕ್ಯಾಚ್ ಆಗಿ ಪರಿವರ್ತಿಸಲು ಯತ್ನಿಸಿದಾಗ ಅವರ ಹಣೆಯ ಮೇಲೆ ನೇರವಾಗಿ ಬಡಿದಿದೆ.
ಚೆಂಡು ಬಡಿಯುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸದರಾದರೂ ಅದು ಸಾಧ್ಯವಾಗಲಿಲ್ಲ.
ಮುಖಕ್ಕೆ ಚೆಂಡು ಬಡಿದ ಬಳಿಕ ನೆಲವನ್ನು ದಿಗ್ಭ್ರಮೆಗೊಂಡು ನೋಡುತ್ತಿದ್ದರು. ಈ ವೇಳೆ ರಕ್ತವು ಅವರ ಮುಖದ ಮೇಲೆ ಹರಿಯುತ್ತಿರುವುದನ್ನು ಗಮನಿಸಿದ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಧಾವಿಸಿದರು.
A tough moment on the field for Rachin Ravindra as an attempted catch turned into an unfortunate injury. 🤕
— FanCode (@FanCode) February 8, 2025
Get well soon, Rachin! pic.twitter.com/34dB108tpF
ಅಂತಿಮವಾಗಿ ಮೈದಾನದಲ್ಲಿದ್ದ ಪಾಕಿಸ್ತಾನ ತಂಡದ ವೈದ್ಯರು ಸಹ ಪ್ರಥಮ ಚಿಕಿತ್ಸೆ ನೀಡಲು ಧಾವಿಸಿದರು. ಕೆಲವು ನಿಮಿಷಗಳ ಚಿಕಿತ್ಸೆ ಪಡೆಯುತ್ತಾ ನೆಲದ ಮೇಲೆ ಮಲಗಿದ ನಂತರ, ರವೀಂದ್ರ ವೈದ್ಯಕೀಯ ಸಿಬ್ಬಂದಿಯ ಸಹಾಯದಿಂದ ಎದ್ದು, ತಲೆಗೆ ಟವಲ್ ಹಿಡಿದು ಮೈದಾನದಿಂದ ಹೊರನಡೆದರು.
ಪಂದ್ಯವನ್ನು ಕಣ್ತುಂಬಿಸಿಕೊಳ್ಳಲೆಂದು ಗದ್ದಾಫಿ ಕ್ರೀಡಾಂಗಣಕ್ಕೆ ಬಂದಿದ್ದ ಕ್ರೀಡಾಭಿಮಾನಿಗಳು ಈ ಘಟನೆಯಿಂದ ತಬ್ಬಿಬ್ಬಾದದಲ್ಲದೇ, ಇಡೀ ಮೈದಾನದಲ್ಲಿ ಮೌನ ಆವರಿಸಿತ್ತು. ರಚಿನ್ ರವೀಂದ್ರ ಎದ್ದು ವೈದ್ಯಕೀಯ ಸಿಬ್ಬಂದಿಯ ಜೊತೆಗೆ ಮೈದಾನದಿಂದ ಹೊರ ನಡೆಯುತ್ತಿದ್ದಂತೆಯೇ ಚಪ್ಪಾಳೆ ತಟ್ಟಿದರು. ಆ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸೇರಿಸಲಾಗಿದೆ.
ಲಾಹೋರಿನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲ್ಯಾಂಡ್, ಗ್ಲೆನ್ ಫಿಲಿಪ್ಸ್ ಅವರ ಶತಕದ ನೆರವಿನಿಂದ ಪಾಕಿಸ್ತಾನಕ್ಕೆ 330 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ತಲುಪಲು ತಲುಪಲು ವಿಫಲವಾದ ಪಾಕ್ ತಂಡವು, 78 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
