ಧರ್ಮಶಾಲಾದಲ್ಲಿ ಇಂದು ವಿಶ್ವಕಪ್ ಕ್ರಿಕೆಟ್ ಕೂಟದ 27ನೇ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎಸೆತದ ತನಕ ಹೋರಾಟ ನಡೆಸಿದರೂ, ಕೇವಲ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು.
WHAT WAS THAT 🥵️
Incredible game. Incredible fight. Incredible win!
SCORECARD: https://t.co/JVpxwq9Re1 #CWC23 #AUSvNZ pic.twitter.com/AH3Fy7xPMY
— ESPNcricinfo (@ESPNcricinfo) October 28, 2023
ಗೆಲ್ಲಲು 389 ರನ್‌ಗಳ ಬೃಹತ್ ಗುರಿ ಪಡೆದಿದ್ದ ಕೀವೀಸ್, 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 383 ರನ್ ಗಳಿಸಿ, ಕೇವಲ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸೀಸ್, ನಿಗದಿತ 49.2 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 388 ರನ್ ದಾಖಲಿಸಿತ್ತು.
ನ್ಯೂಝಿಲ್ಯಾಂಡ್ ಪರ ಇನ್ನಿಂಗ್ಸ್ ಆರಂಭಿಸಿದ್ದ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಮೊದಲ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ನಡೆಸಿ, ಉತ್ತಮ ಆರಂಭ ಒದಗಿಸಿದ್ದರು.
A thriller in Dharamsala. Well played Australia. | https://t.co/BxDL70HXc6 #CWC23 pic.twitter.com/lwGL022N2j
— BLACKCAPS (@BLACKCAPS) October 28, 2023
ಬಳಿಕ ಕ್ರೀಸ್‌ಗೆ ಆಗಮಿಸಿದ ರಚಿನ್ ರವೀಂದ್ರ ತಾಳ್ಮೆಯ ಆಟವಾಡಿ ಇನ್ನಿಂಗ್ಸ್ ಕಟ್ಟಿದರು. 89 ಎಸೆತಗಳನ್ನು ಎದುರಿಸಿ, 9 ಬೌಂಡರಿ ಹಾಗೂ 5 ಸಿಕ್ಸ್‌ನ ನೆರವಿನಿಂದ 116 ರನ್ ಗಳಿಸಿ, ಔಟಾದರು.
ಕೊನೆಯಲ್ಲಿ ನ್ಯೂಝಿಲ್ಯಾಂಡ್ ಪರವಾಗಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಿಮ್ಮಿ ನೀಶಮ್, 39 ಎಸೆತಗಳಲ್ಲಿ 58 ರನ್ ಗಳಿಸಿ, ರನೌಟಾದರು.
ಕೊನೆಯ ಎರಡು ಎಸೆತಗಳಲ್ಲಿ ಗೆಲುವಿಗೆ 7 ರನ್ ಬೇಕಿದ್ದಾಗ, ಸ್ಟ್ರೈಕ್ ಕಾಯ್ದುಕೊಳ್ಳಲು ಜಿಮ್ಮಿ ನೀಶಮ್ ಯತ್ನಿಸಿದರು. ಬೌಂಡರಿ ಗೆರೆಯಿಂದ ಲ್ಯಾಬೂಶೈನ್ ಎಸೆದ ಥ್ರೋವನ್ನು ಆಸೀಸ್ ವಿಕೆಟ್ ಕೀಪರ್ ಇಂಗ್ಲಿಸ್ ಹಾರಿಕೊಂಡು ರನೌಟ್ ಮಾಡಿದ್ದರಿಂದ, ನ್ಯೂಝಿಲ್ಯಾಂಡ್ ಗೆಲುವಿನ ಆಸೆ ಕಮರಿತು. ಕೊನೆಯಲ್ಲಿ ನ್ಯೂಝಿಲ್ಯಾಂಡ್ 5 ರನ್‌ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.
💔 #CWC23 #AUSvNZ pic.twitter.com/plfekHFrhZ
— ESPNcricinfo (@ESPNcricinfo) October 28, 2023
ಆಸೀಸ್ ಪರ ಬೌಲಿಂಗ್‌ನಲ್ಲಿ ಆಡಂ ಝಾಂಪಾ 74ಕ್ಕೆ 3, ಜೋಶ್ ಹ್ಯಾಝಲ್‌ವುಡ್ 70ಕ್ಕೆ 2, ಕಮ್ಮಿನ್ಸ್ 66ಕ್ಕೆ 2 ಹಾಗೂ ಮ್ಯಾಕ್ಸ್‌ವೆಲ್ 62ಕ್ಕೆ 1 ವಿಕೆಟ್ ಪಡೆದುಕೊಂಡರು. ಧರ್ಮಶಾಲಾದ ಮೈದಾನದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಿಂದಾಗಿ 771 ರನ್‌ಗಳು ದಾಖಲಾಗುವ ಮೂಲಕ, ರನ್‌ಗಳ ಹೊಳೆಯೇ ಹರಿಯಿತು.
Australia overcame a resilient fight from their Trans-Tasman rivals New Zealand to take two crucial #CWC23 points in Dharamsala 🔥#AUSvNZ 📝: https://t.co/b25f3XwNH2 pic.twitter.com/ArttXrdCJb
— ICC Cricket World Cup (@cricketworldcup) October 28, 2023
ಆಸ್ಟ್ರೇಲಿಯಾ ಪರ ವಿಶ್ವಕಪ್‌ನ ಮೊದಲ ಪಂದ್ಯವನ್ನಾಡಿದ್ದ ಟ್ರಾವಿಸ್ ಹೆಡ್, ಶತಕ ಬಾರಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. 67 ಎಸೆತಗಳನ್ನು ಎದುರಿಸಿದ ಹೆಡ್ 10 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳೊಂದಿಗೆ 109 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.