ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಭಾರತ-ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಪಾಕಿಸ್ತಾನ ದಿಢೀರ್ ಕುಸಿತ ಕಂಡು, ಕೇವಲ 191 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ತಂಡ 155 ರನ್‌ಗಳಿಸುವ ವೇಳೆ ಕೇವಲ ಮೂರು ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ಟೀಮ್ ಇಂಡಿಯಾದ ಮೊಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್ ಹಾಗೂ ಬುಮ್ರಾ ಬೌಲಿಂಗ್‌ಗೆ ತತ್ತರಿಸಿದ ಪಾಕಿಸ್ತಾನ, 42.5 ಓವರ್‌ಗಳಲ್ಲಿ ಕೇವಲ 191 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ. ಟೀಮ್ ಇಂಡಿಯಾಕ್ಕೆ ಗೆಲ್ಲಲು 192 ರನ್‌ಗಳ ಗುರಿ ನೀಡಿದೆ.
Pakistan collapse from 155-2!! https://t.co/TwRUZS5QcE | #INDvPAK | #CWC23 pic.twitter.com/oDGgcuJRfp
— ESPNcricinfo (@ESPNcricinfo) October 14, 2023
ಟೀಮ್ ಇಂಡಿಯಾ ಪರ ಬುಮ್ರಾ 19 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 50ಕ್ಕೆ 2 ವಿಕೆಟ್ ಹಾಗೂ ಜಡೇಜಾ 38ಕ್ಕೆ 2, ಕುಲ್‌ದೀಪ್ ಯಾದವ್ 35ಕ್ಕೆ 2 ಹಾಗೂ ಹಾರ್ದಿಕ್ ಪಾಂಡ್ಯ 34ಕ್ಕೆ 2 ವಿಕೆಟ್ ಪಡೆಯುವಲ್ಲಿ ಸಫಲರಾದರು.
ಪಾಕಿಸ್ತಾನದ ಪರ ಕಪ್ತಾನ 50, ಮೊಹಮ್ಮದ್ ರಿಝ್ವಾನ್ 49, ಇಮಾಮುಲ್ ಹಕ್ 36 ಹೆಚ್ಚು ರನ್ ಗಳಿಸಿದವರು.