ಪಂಜಾಬಿನ ಮುಲ್ಲನ್‌ಪುರ ಮೈದಾನದಲ್ಲಿ ಇಂದು ನಡೆದ ಐಪಿಎಲ್ ‘ಲೋ ಸ್ಕೋರಿಂಗ್ ಪಂದ್ಯ’ದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರೋಚಕವಾಗಿ ಗೆದ್ದು, ಇತಿಹಾಸ ಬರೆದಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಲಿವುಡ್ ನಟಿ ಪ್ರೀತಿಝಿಂಟಾ ಮಾಲೀಕತ್ವದ ಪಂಜಾಬ್ ತಂಡವು, ಕೆಕೆಆರ್ ತಂಡದ ಸ್ಪಿನ್ ಬೌಲರ್‌ಗಳ ವಿರುದ್ಧ ರನ್ ಗಳಿಸಲು ಪರದಾಡಿ ಕೇವಲ 111 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಹಾಲಿ ಚಾಂಪಿಯನ್ ಕೆಕೆಆರ್, 95 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿ, ವಿರೋಚಿತವಾಗಿ ಸೋಲಿಗೆ ಶರಣಾಯಿತು.
ಐಪಿಎಲ್ ಇತಿಹಾಸದಲ್ಲಿ ‘ಲೋ ಸ್ಕೋರಿಂಗ್ ಪಂದ್ಯವನ್ನು ಗೆದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ, 111 ರನ್ ಅನ್ನು ಡಿಫೆಂಡ್ ಮಾಡಿಕೊಂಡ ತಂಡ ಎಂಬ ಕೀರ್ತಿಗೆ ಪಾತ್ರವಾಯಿತು. ಇಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡ 16 ರನ್ ಅಂತರದಿಂದ ಗೆದ್ದುಕೊಂಡಿದೆ.
ಪಂಜಾಬ್ ತಂಡದ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಾಹಲ್ ಕೇವಲ 28 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಿತ್ತು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
