ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಟಿ20 ವಿಶ್ವಕಪ್ 2024ರ ಸೂಪರ್ 8ರ ಘಟ್ಟದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾವು 24 ರನ್ಗಳ ರೋಚಕ ಗೆಲುವು ಸಾಧಿಸುವುದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಜೂನ್ 24ರಂದು ಸೈಂಟ್ ವಿನ್ಸೆಂಟ್ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಇನ್ನು ಉಳಿದ ಒಂದು ಸೆಮಿಫೈನಲ್ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಕುತೂಹಲಕಾರಿ ಪೈಪೋಟಿ ಆರಂಭಗೊಂಡಿದೆ. ಟೀಮ್ ಇಂಡಿಯಾ ಇದ್ದ ಗುಂಪಿನಲ್ಲಿ ಆಸ್ಟ್ರೇಲಿಯಾ-ಬಾಂಗ್ಲಾದೇಶ-ಅಫ್ಘಾನಿಸ್ತಾನ ಕೂಡ ಇದೆ. ಈಗ ಈ ಮೂವರಿಗೂ ಕೂಡ ಸೆಮಿಫೈನಲ್ ಅವಕಾಶವಿದೆ ಅಂದರೆ ನೀವು ನಂಬಲೇಬೇಕು.
ಸದ್ಯ ಈ ಗುಂಪಿನಲ್ಲಿ ಮೂರು ಪಂದ್ಯಗಳನ್ನಾಡಿರುವ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾವು ರನ್ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾವು ಈವರೆಗೆ ಆಡಿದ ಮೂರು ಪಂದ್ಯಗಳ ಪೈಕಿ ಬಾಂಗ್ಲಾದೇಶ ವಿರುದ್ಧ ಮಾತ್ರ ಗೆದ್ದಿತ್ತು. ಅಫ್ಘಾನಿಸ್ತಾನ ಹಾಗೂ ಟೀಮ್ ಇಂಡಿಯಾ ವಿರುದ್ಧ ಸೋತಿದೆ. ಹಾಗಾಗಿ, ಸದ್ಯ ರನ್ರೇಟ್ ಆಧಾರದಲ್ಲಿ ಒಂದು ಗೆಲುವು, ಎರಡು ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ.
Interesting Qualification Scenario:
– Bangladesh Qualifies if they win by more than 61 runs or chase in 13 overs.
– Australia Qualifies if Bangladesh wins by less than 61 runs.
– Afghanistan Qualifies if they beat Bangladesh.
— Mufaddal Vohra (@mufaddal_vohra) June 24, 2024
ಟೀಮ್ ಇಂಡಿಯಾ ವಿರುದ್ಧದ ಇಂದಿನ ಪಂದ್ಯದಲ್ಲಿ ಸೋತರೂ ಕೂಡ ಆಸ್ಟ್ರೇಲಿಯಾಗೂ ಕೂಡ ಸೆಮಿಫೈನಲ್ಗೆ ತೆರಳಲು ಅವಕಾಶವಿದೆ. ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಒಂದು ವೇಳೆ ಅಫ್ಘಾನಿಸ್ತಾನ ಸೋತಲ್ಲಿ, ರನ್ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾವು ಸೆಮಿಫೈನಲ್ ಪ್ರವೇಶಿಸಲಿದೆ.
ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದಲ್ಲಿ ಆಸ್ಟ್ರೇಲಿಯಾದ ಸೆಮಿಫೈನಲ್ ಕನಸಿಗೆ ತೆರೆ ಬೀಳಲಿದೆ. ಒಂದು ವೇಳೆ ಅಫ್ಘಾನಿಸ್ತಾನ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ, ಇತಿಹಾಸ ನಿರ್ಮಾಣವಾಗಲಿದೆ.
It’s going to the final match of the Super Eight 🍿 pic.twitter.com/Ea1p9S1qqM
— ESPNcricinfo (@ESPNcricinfo) June 24, 2024
ಬಾಂಗ್ಲಾದೇಶಕ್ಕೂ ಇದೆ ಒಂದು ಚಾನ್ಸ್
ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಸೆಮಿಫೈನಲ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ-ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲದೇ, ಬಾಂಗ್ಲಾದೇಶಕ್ಕೂ ಕೂಡ ಸೆಮಿಫೈನಲ್ಗೆ ಅರ್ಹತೆ ಪಡೆಯುವ ಅವಕಾಶವಿದೆ.
Bangladesh with ZERO wins in 2 matches have a chance to qualify for the Semis Finals:
– Win by more than 61 runs or chase in 13 overs. pic.twitter.com/GrfJAonaSe
— Mufaddal Vohra (@mufaddal_vohra) June 24, 2024
ಕುತೂಹಲಕಾರಿ ಅರ್ಹತೆಯ ಸನ್ನಿವೇಶ ಸದ್ಯ ನಿರ್ಮಾಣವಾಗಿದ್ದು, ಅಫ್ಘಾನ್ ವಿರುದ್ಧ ಬಾಂಗ್ಲಾದೇಶವು 61 ರನ್ಗಳಿಗಿಂತಲೂ ಹೆಚ್ಚು ರನ್ಗಳ ಅಂತರದಿಂದ ಗೆದ್ದರೆ ಅಥವಾ 13 ಓವರ್ಗಳಲ್ಲಿ ಚೇಸ್ ಮಾಡಿದರೆ ಅರ್ಹತೆ ಪಡೆಯಲಿದೆ. ಬಾಂಗ್ಲಾದೇಶವು ಈವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿದೆ.
ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 61 ರನ್ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯಾ ಅರ್ಹತೆ ಪಡೆಯುತ್ತದೆ. ಬಾಂಗ್ಲಾದೇಶವನ್ನು ಸೋಲಿಸಿದರೆ ಅಫ್ಘಾನಿಸ್ತಾನ ಅರ್ಹತೆ ಪಡೆಯುತ್ತದೆ. ಅದೃಷ್ಟ ಯಾರ ಕೈ ಹಿಡಿಯಲಿದೆ ಎಂದು ಕಾದುನೋಡಬೇಕಿದೆ. ಅದೃಷ್ಟ ಕೈ ಹಿಡಿದು ಸೆಮಿಫೈನಲ್ ಪ್ರವೇಶಿಸುವ ತಂಡವು ಜೂನ್ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಬೇಕಿದೆ.
ಬಾಂಗ್ಲಾದೇಶ-ಅಫ್ಘಾನ್ ಪಂದ್ಯದ ಮೇಲೆ ಎಲ್ಲರ ಕಣ್ಣು
ಉಳಿದಿರುವ ಒಂದೇ ಒಂದು ಸೂಪರ್ 8ರ ಘಟ್ಟದ ಪಂದ್ಯ ಎಂದರೆ ಅದು ಬಾಂಗ್ಲಾದೇಶ-ಅಫ್ಘಾನ್ ಪಂದ್ಯ. ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮಂಗಳವಾರ ಬೆಳಗ್ಗೆ 6 ಗಂಟೆ(ಭಾರತೀಯ ಕಾಲಮಾನ)ಗೆ ಈ ಪಂದ್ಯವು ಆರಂಭವಾಗಲಿದೆ. ಕಿಂಗ್ಸ್ಟನ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
Come on now #AfghanAtalan let’s secure our spot in the semi finals by beating Bangladesh…🤞💪🏻🇦🇫#AFGvBAN pic.twitter.com/675rfHbgBh
— Wazhma Ayoubi 🇦🇫 (@WazhmaAyoubi) June 24, 2024
