ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಅಭಿಮಾನಿಗಳ ಫೇವರೀಟ್ ತಂಡ ಆರ್ಸಿಬಿ, 60 ರನ್ಗಳ ಭರ್ಜರಿ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಪ್ಲೇ ಆಫ್ ತಲುಪುವ ಕನಸನ್ನು ಆರ್ಸಿಬಿ ಇನ್ನೂ ಕೂಡ ಜೀವಂತವಾಗಿರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿಯವರ ಸ್ಫೋಟಕ ಅರ್ಧಶತಕದ(92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸ್) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 241 ರನ್ಗಳನ್ನು ಪೇರಿಸುವ ಮೂಲಕ, ಪಂಜಾಬ್ ಗೆಲುವಿಗೆ 242 ರನ್ಗಳ ಬೃಹತ್ ಗುರಿಯನ್ನು ನೀಡಿತ್ತು. ಇದು ಧರ್ಮಶಾಲಾ ಸ್ಟೇಡಿಯಂನಲ್ಲಿ ಟಿ20ಯಲ್ಲಿ ದಾಖಲಾದ ಗರಿಷ್ಠ ಮೊತ್ತದ ಸ್ಕೋರ್ ಆಗಿತ್ತು.
– Defeated SRH by 35 runs.
– Defeated GT by 9 wickets.
– Defeated GT by 4 wickets.
– Defeated PBKS by 60 runs.4TH CONSECUTIVE VICTORY FOR FAF DU PLESSIS LED RCB – THE PLAYOFFS HOPES ARE ALIVE. 🏆 pic.twitter.com/qaYEOEOKsS
— Mufaddal Vohra (@mufaddal_vohra) May 9, 2024
ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಪಂಜಾಬ್ ತಂಡವು, 17 ಓವರ್ಗಳಲ್ಲಿ 181 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಪಂಜಾಬ್, ಮೊದಲ ಓವರ್ನಲ್ಲೇ ಪ್ರಭುಸಿಮ್ರಾನ್ ಸಿಂಗ್ ಅವರ ವಿಕೆಟ್ ಕಳೆದುಕೊಂಡಿತರಾದರೂ, ಬಳಿಕ ಕ್ರೀಸ್ಗೆ ಬಂದ ರೂಸ್ಸೋ, ಜಾನಿ ಬೈರ್ಸ್ಟೋವ್ ಜೊತೆಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಂಡರಿ, ಸಿಕ್ಸರ್ಗಳ ಮೂಲಕ ಆರ್ಸಿಬಿ ಬೌಲರ್ಗಳನ್ನು ಬೆದರಿಸಿದ ಈ ಜೋಡಿಯನ್ನು ಲಾಕಿ ಫರ್ಗೂಸನ್ ಬೇರ್ಪಡಿಸಿದರು. ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
Hot form continues… 🥵
FOUR in FOUR! 🙏#PlayBold #ನಮ್ಮRCB #IPL2024 #PBKSvRCB pic.twitter.com/kOuaVWaTCG
— Royal Challengers Bengaluru (@RCBTweets) May 9, 2024
ಔಟಾಗುವುದಕ್ಕೂ ಮುನ್ನ ಬೈರ್ಸ್ಟೋವ್ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ನ ನೆರವಿನಿಂದ 27 ರನ್ ಗಳಿಸಿದರು. ಬೈರ್ಸ್ಟೋವ್ ವಿಕೆಟ್ ಕಳೆದುಕೊಂಡರೂ ಕೂಡ ಎದೆಗುಂದದ ರೂಸ್ಸೋ, ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿದರು. 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಯ ನೆರವಿನಿಂದ 61 ರನ್ ಗಳಿಸಿದ್ದಾಗ, ಕರಣ್ ಶರ್ಮಾ ಎಸೆತದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ಆ ಬಳಿಕ ಕ್ರೀಸ್ಗೆ ಬಂದ ಜಿತೇಶ್ ಶರ್ಮಾ(5 ರನ್) ಹಾಗೂ ಸ್ಪೋಟಕ ಬ್ಯಾಟರ್ ಲಿವಿಂಗ್ಸ್ಟನ್ ಇಂದಿನ ಪಂದ್ಯದಲ್ಲಿ ಮಿಂಚಲು ಆಗಲಿಲ್ಲ. ಲಿವಿಂಗ್ಸ್ಟನ್ ಸ್ವಪ್ನಿಲ್ ಸಿಂಗ್ ಎಸೆತದಲ್ಲಿ ಕರಣ್ ಶರ್ಮಾಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.
ಪಂದ್ಯದ ಗತಿಯನ್ನೇ ಬದಲಿಸಿದ ವಿರಾಟ್ ಕೊಹ್ಲಿಯವರ ‘ವಂಡರ್ಫುಲ್ ರನೌಟ್’
ಕ್ರೀಸ್ನಲ್ಲಿದ್ದ ಬಂದ ಪಂಜಾಬ್ ನಾಯಕ ಸ್ಯಾಮ್ ಕರಣ್ ಹಾಗೂ ಶಶಾಂಕ್ ಸಿಂಗ್ ಜೋಡಿಯು ಉತ್ತಮ ಜೊತೆಯಾಟದ ಮುನ್ಸೂಚನೆ ನೀಡುತ್ತಿರುವಾಗಲೇ, 13.3 ಓವರ್ನ ವೇಳೆ ಎರಡು ರನ್ ಕದಿಯುವ ಭರದಲ್ಲಿ ವಿರಾಟ್ ಕೊಹ್ಲಿ ಎಸೆದ ಅನಿರೀಕ್ಷಿತ ಅದ್ಭುತವಾದ ಥ್ರೋಗೆ ಶಶಾಂಕ್ ಸಿಂಗ್ ಕೂದಲೆಳೆ ಅಂತರದಲ್ಲಿ ರನೌಟ್ ಆದರು. ಇದು ಪಂದ್ಯದ ಗತಿಯನ್ನೇ ಆರ್ಸಿಬಿ ಕಡೆಗೆ ವಾಲಿಸಿತು. ಶಶಾಂಕ್ ಸಿಂಗ್ 19 ಎಸೆತಗಳಲ್ಲಿ 37 ರನ್ ಗಳಿಸಿದರು.
He’s unfolding magic tonight 💫
First with the bat & now on the field with that outstanding direct hit 🎯
Watch the match LIVE on @StarSportsIndia and @JioCinema 💻📱#TATAIPL | #PBKSvRCB | @imVkohli | @RCBTweets pic.twitter.com/6TsRbpamxG
— IndianPremierLeague (@IPL) May 9, 2024
ಆ ಬಳಿಕ ಕ್ರೀಸ್ಗೆ ಬಂದ ಅಶುತೋಶ್ ಶರ್ಮಾ, ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಪಂಜಾಬ್ ನಾಯಕ ಸ್ಯಾಮ್ ಕರಣ್ 22 ರನ್ ಗಳಿಸಿ, ಲಾಕಿ ಫರ್ಗೂಸನ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಪಂಜಾಬ್ ತಂಡವು 17 ಓವರ್ಗಳಲ್ಲಿ 17 ಓವರ್ಗಳಲ್ಲಿ 181 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಆರ್ಸಿಬಿ ಪರವಾಗಿ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದರೆ, ಕರಣ್ ಶರ್ಮಾ, ಲಾಕಿ ಫರ್ಗೂಸನ್ ಹಾಗೂ ಸ್ವಪ್ನಿಲ್ ಸಿಂಗ್ ತಲಾ ಎರಡು ವಿಕೆಟ್ ಗಳಿಸುವಲ್ಲಿ ಸಫಲರಾದರು.
