ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ತಂಡದ ನಡುವೆ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್(WPL 2024) ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಸ್ಪಿನ್ ದಾಳಿಗೆ ಕುಸಿದ ಡೆಲ್ಲಿ, 114 ರನ್ಗಳ ಸಾಧಾರಣ ಸವಾಲು ನೀಡಿದೆ. ಆರ್ಸಿಬಿ ಫೈನಲ್ ಪಂದ್ಯವನ್ನು ಗೆದ್ದರೆ, ಈ ಬಾರಿ ಕಪ್ ನಮ್ದೇ ಆಗಲಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರ್ಸಿಬಿ ಆರಂಭದಲ್ಲಿ ಬೌಲಿಂಗ್ನಲ್ಲಿ ವಿಫಲವಾಯಿತಾದರೂ, ಎಂಟನೇ ಓವರ್ ಎಸೆದ ಆರ್ಸಿಬಿ ಬೌಲರ್ ಸೋಫಿ ಮೋಲಿನೆಕ್ಸ್, 4 ಎಸೆತಗಳಲ್ಲಿ ಮೂರು ವಿಕೆಟ್ ಕಿತ್ತ ಬಳಿಕ ಡೆಲ್ಲಿ 113 ರನ್ಗಳಿಗೆ ಆಲೌಟ್ ಆಗಿದೆ. 64 ರನ್ ವೇಳೆ ಶೂನ್ಯ ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ತಂಡ, 18.3 ಓವರ್ಗಳಲ್ಲಿ ಆಲೌಟ್ ಆಗಿದೆ.
RCB NEED 114 TO WIN THE WPL TITLE. 🏆 pic.twitter.com/ISfTD4zPpl
— Mufaddal Vohra (@mufaddal_vohra) March 17, 2024
ಆರ್ಸಿಬಿ ಸ್ಪಿನ್ ದಾಳಿಗೆ ಕುಸಿದ ಡೆಲ್ಲಿ ಪರವಾಗಿ ಶಫಾಲಿ ವರ್ಮಾ, 44 ರನ್ ಗಳಿಸಿ ಮಿಂಚಿದರು. ಬೌಲಿಂಗ್ನಲ್ಲಿ ಶ್ರೇಯಾಂಕ ಪಾಟೀಲ್ 4 ವಿಕೆಟ್, ಸೋಫಿ ಮೋಲಿನೆಕ್ಸ್ 3 ವಿಕೆಟ್ ಕಿತ್ತರೆ, ಆಶಾ ಶೋಭನ 2 ವಿಕೆಟ್ ಗಳಿಸುವಲ್ಲಿ ಸಫಲರಾದರು.
ಪಂದ್ಯ ತಿರುಗಿಸಿದ ಸೋಪಿ ಮೋಲಿನೆಕ್ಸ್ ಎಸೆದ 8ನೇ ಓವರ್
ಸೋಫಿ ಮೋಲಿನೆಕ್ಸ್ ಎಸೆದ ಎಂಟನೇ ಓವರ್ ಪಂದ್ಯವು ಆರ್ಸಿಬಿ ಪರವಾಗಿ ವಾಲಲು ನೆರವಾಯಿತು. ಮೊದಲ ಎಸೆತದ ಎದುರಿಸಿದ ದೆಹಲಿ ತಂಡದ ಶಫಾಲಿ ವರ್ಮಾ ಅವರು ದೊಡ್ಡ ಹೊಡೆತಕ್ಕೆ ಯತ್ನಿಸಿ, ಕ್ಯಾಚಿತ್ತು ನಿರ್ಗಮಿಸಿದರು. ಆ ಬಳಿಕ ಕ್ರೀಸ್ಗೆ ಬಂದ ಜೆಮೀಮಾ ರೋಡ್ರಿಗಸ್ ತಾನೆದುರಿಸಿದ ಎರಡನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರೀಸ್ಗೆ ಬಂದ ಕ್ಯಾಪ್ಸೆ ಕೂಡ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಆರ್ಸಿಬಿ ಬೌಲರ್ ಮೋಲಿನೆಕ್ಸ್, 4 ಎಸೆತಗಳಲ್ಲಿ ಮೂರು ವಿಕೆಟ್ ಕಿತ್ತು ದೆಹಲಿ ತಂಡಕ್ಕೆ ಆಘಾತ ನೀಡಿದರು.
Wow! DC are 90-7! #DCvRCB | #WPLFinal
— ESPNcricinfo (@ESPNcricinfo) March 17, 2024
ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಆರ್ಸಿಬಿ
ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಎಲಿಮಿನೇಟರ್ ಪಂಡ್ಯ ಆಡಿದ್ದ ಬೆಂಗಳೂರು ತಂಡ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಇದನ್ನು ಓದಿದ್ದೀರಾ? WPL ಫೈನಲ್ | 4 ಎಸೆತಗಳಲ್ಲಿ ಮೂರು ವಿಕೆಟ್ ಕಿತ್ತ ಆರ್ಸಿಬಿ ಬೌಲರ್ ಸೋಫಿ ಮೋಲಿನೆಕ್ಸ್
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಈ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಅಂದರೆ ಆರ್ಸಿಬಿ ತಂಡ ಡೆಲ್ಲಿ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆರ್ಸಿಬಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
