ಕೊನೆಯ ಓವರ್‌ನ ಕೊನೆಯ ಬಾಲ್ ತನಕ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು ರೋಚಕವಾಗಿ 2 ರನ್‌ಗಳ ಅಂತರದಿಂದ ಗೆದ್ದು ಬೀಗಿತು.
ಗೆಲ್ಲಲು 214 ರನ್‌ಗಳ ಗುರಿಯನ್ನು ಪಡೆದಿದ್ದ ಚೆನ್ನೈ ತಂಡವನ್ನು ಮತ್ತೊಮ್ಮೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕವಾಗಿ ಸೋಲಿಸುವ ಮೂಲಕ ಬೌಲರ್ ಯಶ್ ದಯಾಳ್ ಮತ್ತೊಮ್ಮೆ ಹೀರೋ ಎನಿಸಿಕೊಂಡರು. 2024 ಪ್ಲೇ ಆಫ್‌ಗೇರಬೇಕಿದ್ದ ಪಂದ್ಯದಲ್ಲಿ ಕೂಡ ಆರ್‌ಸಿಬಿಯನ್ನು ಗೆಲ್ಲಿಸುವ ಮೂಲಕ ಯಶ್ ದಯಾಳ್ ಹೀರೋ ಆಗಿದ್ದರು.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಇಂದು ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡವು ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಆ ಮೂಲಕ ಪ್ಲೇ ಆಫ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿದೆ.