- ಅತಿ ಹೆಚ್ಚು ಬಾರಿ ಶೂನ್ಯ ರನ್ಗೆ ವಿಕೆಟ್ ಒಪ್ಪಿಸಿದ ರೋಹಿತ್
- ಕ್ರಮಾಂಕ ಬದಲಿಸಿದರೂ ಬದಲಾಗದ ರೋಹಿತ್ ಶರ್ಮಾ ಲಕ್!
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಅನಗತ್ಯ ದಾಖಲೆ ಬರೆದಿದ್ದಾರೆ. ಐಪಿಎಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ (16) ಶೂನ್ಯ ರನ್ನಿಗೆ ವಿಕೆಟ್ ಒಪ್ಪಿಸಿದ ಬ್ಯಾಟರ್ ಎಂಬ ಕೆಟ್ಟ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ.
ಶನಿವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದ ರೋಹಿತ್, ತಾನೆದುರಿಸಿದ ಮೂರನೇ ಎಸೆತವನ್ನು ಸ್ಕೂಪ್ ಮಾಡುವ ಯತ್ನದಲ್ಲಿ, ಚಾಹರ್ ಬೌಲಿಂಗ್ನಲ್ಲಿ ಜಡೇಜಾಗೆ ಕ್ಯಾಚಿತ್ತು ನಿರ್ಗಮಿಸಿದರು.
ಆ ಮೂಲಕ ಐಪಿಎಲ್ನಲ್ಲಿ 16ನೇ ಬಾರಿಗೆ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ ಮೊದಲ ಬ್ಯಾಟರ್ ಎಂಬ ʻದಾಖಲೆʼ ಬರೆದರು.
ವಿಶೇಷವೆಂದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲೂ ಅತಿಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.
ಕ್ರಮಾಂಕ ಬದಲಿಸಿದರೂ ಬದಲಾಗದ ಲಕ್!
ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ಶರ್ಮಾ ಮೂರು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್, ಆರಂಭಿಕನ ಬದಲು ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದರು. ಆದರೂ ಸಹ ರೋಹಿತ್ ಲಕ್ ಬದಲಾಗಲಿಲ್ಲ. ಮತ್ತೆ ಶೂನ್ಯ ಸುತ್ತಿದರು.
ಐಪಿಎಲ್ನಲ್ಲಿ 5 ವರ್ಷ, 62 ಇನ್ನಿಂಗ್ಸ್ಗಳ ಬಳಿಕ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಶನಿವಾರ ತಮ್ಮ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿದ್ದರು.
ನಾಯಕನಾಗಿ ಐಪಿಎಲ್ನಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ನಿರ್ಗಮಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ (11) ಮತ್ತು ಗೌತಮ್ ಗಂಭೀರ್ (10) ದ್ವಿತೀಯ ಸ್ಥಾನದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಲಿಯೋನೆಲ್ ಮೆಸ್ಸಿಯನ್ನು ಅಮಾನತುಗೊಳಿಸಿದ ಪಿಎಸ್ಜಿ!
ಐಪಿಎಲ್ನಲ್ಲಿ ಅತಿಹೆಚ್ಚು ಶೂನ್ಯ ಸುತ್ತಿದ ಬ್ಯಾಟರ್ಗಳ ಪಟ್ಟಿ
- ರೋಹಿತ್ ಶರ್ಮಾ – 16
- ದಿನೇಶ್ ಕಾರ್ತಿಕ್ – 15
- ಮನದೀಪ್ ಸಿಂಗ್ – 15
- ಸುನಿಲ್ ನರೈನ್ – 15
- ಅಂಬಟಿ ರಾಯುಡು – 14