ಲಿಯೋನೆಲ್‌ ಮೆಸ್ಸಿಯನ್ನು ಅಮಾನತುಗೊಳಿಸಿದ ಪಿಎಸ್‌ಜಿ!

Date:

ಎರಡು ದಿನಗಳ ಸೌದಿ ಅರೆಬಿಯಾ ಭೇಟಿಗೆ ತೆರಳಿದ್ದ ವಿಶ್ವಕಪ್‌ ವಿಜೇತ ನಾಯಕ ಲಿಯೋನೆಲ್‌ ಮೆಸ್ಸಿಯನ್ನು ಪ್ಯಾರಿಸ್ ಸೇಂಟ್-ಜರ್ಮೈನ್ ಫುಟ್ಬಾಲ್ ಕ್ಲಬ್ ಅಥವಾ ಪಿಎಸ್‌ಜಿ ಎರಡು ವಾರಗಳ ಕಾಲ ಅಮಾನತು ಮಾಡಿದೆ.

ಕ್ಲಬ್‌ನ ಅನುಮತಿ ಪಡೆಯದೇ ಮೆಸ್ಸಿ ಸೌದಿ ಅರೆಬಿಯಾಗೆ ತೆರಳಿದ್ದಾರೆ ಮತ್ತು ತಂಡದ ಜೊತೆ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಿಲ್ಲ ಎಂಬ ಕಾರಣ ನೀಡಿ ಕ್ಲಬ್‌ ಅಮಾನತು ಮಾಡಿದೆ ಎಂದು ಪ್ರಮುಖ ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ.

ಅಮಾನತು ಅವಧಿಯಲ್ಲಿ ಪಂದ್ಯಗಳನ್ನು ಆಡುವುದಕ್ಕೆ ಮತ್ತು ತರಬೇತಿಯಲ್ಲಿ ಭಾಗವಹಿಸುವುದಕ್ಕೆ ಮೆಸ್ಸಿಗೆ ನಿರ್ಬಂಧ ವಿಧಿಸಲಾಗಿದೆ. ಈ ಅವಧಿಯಲ್ಲಿನ ಸಂಭಾವನೆ ಸಹ ಕಡಿತಗೊಳಿಸಲಾಗುವುದು ಎಂದು ಪ್ರಮುಖ ಫ್ರೆಂಚ್‌ ಕ್ರೀಡಾ ಪತ್ರಿಕೆ ಎಲ್‌ ಇಕ್ಯೂಪೆ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಕೊಹ್ಲಿ– ಗಂಭೀರ್‌ ನಡುವೆ ವಾಗ್ವಾದ; ಬಿಸಿಸಿಐನಿಂದ ಇಬ್ಬರಿಗೂ ಶೇ. 100 ದಂಡ

ಲೀಗ್ 1 ಟೂರ್ನಿಯಲ್ಲಿ ಪಿಎಸ್‌ಜಿ ತಂಡವನ್ನು ಪ್ರತಿನಿಧಿಸುತ್ತಿರುವ ಮೆಸ್ಸಿ, ಮುಂಬರುವ ಟ್ರೊಯೆಸ್ ಮತ್ತು ಅಜಾಸಿಯೊ ವಿರುದ್ಧದ ಪಂದ್ಯಗಳಿಂದ ಹೊರಗುಳಿಯಬೇಕಾಗಿದೆ. ಮೇ 21ರಂದು ಆಕ್ಸೆರೆ ವಿರುದ್ಧದ ಪಂದ್ಯಕ್ಕೆ ದಿಗ್ಗಜ ಆಟಗಾರ ಮರಳುವ ನಿರೀಕ್ಷೆಯಿದೆ.

ಈ ಋತುವಿನಲ್ಲಿ ಲೀಗ್ 1 ಟೂರ್ನಿಯಲ್ಲಿ ಈವರೆಗೆ 14 ಪಂದ್ಯಗಳನ್ನಾಡಿರುವ ಮೆಸ್ಸಿ 15 ಗೋಲು ಗಳಿಸಿದ್ದಾರೆ. 33 ಪಂದ್ಯಗಳಿಂದ 75 ಅಂಕಗಳೊಂದಿಗೆ ಪಿಎಸ್‌ಜಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಒಪ್ಪಂದ ನವೀಕರಿಸದಿರಲು ಕ್ಲಬ್‌ ನಿರ್ಧಾರ

ಲೀಗ್‌ 1 ಟೂರ್ನಿ ಜೂನ್‌ 3ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಮೆಸ್ಸಿ ಜೊತೆಗಿನ ಒಪ್ಪಂದ ನವೀಕರಿಸದಿರಲು ಪಿಎಸ್‌ಜಿ ಕ್ಲಬ್‌ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ನಡೆದ ಲೋರಿಯಂಟ್ ವಿರುದ್ಧದ ಪಂದ್ಯದಲ್ಲಿ ತವರು ಮೈದಾನದಲ್ಲೇ ಪಿಎಸ್‌ಜಿ 1-3 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಕುಟುಂಬ ಸಮೇತವಾಗಿ ಮೆಸ್ಸಿ, ಸೌದಿ ಅರೆಬಿಯಾದ ರಾಜಧಾನಿ ರಿಯಾದ್‌ಗೆ ಪ್ರಯಾಣ ಬೆಳೆಸಿದ್ದರು.

ಸೌದಿ ಅರೆಬಿಯಾದ ʻಪ್ರವಾಸೋದ್ಯಮ ರಾಯಭಾರಿʼಯಾಗಿರುವ ಮೆಸ್ಸಿ, ಇದಕ್ಕಾಗಿ ವಾರ್ಷಿಕವಾಗಿ ಸುಮಾರು 30 ಮಿಲಿಯನ್ ಯುರೋಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯಾ ಕಪ್ ಫೈನಲ್ | ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದ ಸಿರಾಜ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಸಿರಾಜ್ ಮ್ಯಾಜಿಕ್; 8ನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | 50 ರನ್‌ಗೆ ಆಲೌಟಾದ ಶ್ರೀಲಂಕಾ!

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಸಿರಾಜ್; ಲಂಕಾಗೆ ಆರಂಭಿಕ ಆಘಾತ

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...