ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಶುಭ್‌ಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ 161 ಎಸೆತಗಳಲ್ಲಿ ಐದನೇ ಟೆಸ್ಟ್ ಶತಕವನ್ನು ಗಳಿಸಿದರು. ಈ ಮೂಲಕ ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಮಯಾಂಕ್ ಅಗರ್ವಾಲ್ ಅವರ ನಾಲ್ಕು ಶತಕಗಳ ದಾಖಲೆಯನ್ನು ಹಿಂದಿಕ್ಕಿದರು.
ಇದನ್ನು ಓದಿದ್ದೀರಾ? ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್‌ಗೆ 12 ಲಕ್ಷ ರೂ. ದಂಡ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ಶತಕ ಸಿಡಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಇಲ್ಲಿಯವರೆಗೆ ಆಡಿರುವ 33 ಪಂದ್ಯಗಳಲ್ಲಿ ಒಂಬತ್ತು ಶತಕಗಳನ್ನು ಗಳಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ಭಾರತದ ಶತಕಗಳು
ರೋಹಿತ್ ಶರ್ಮಾ – 9 ಶತಕ
ಶುಭ್‌ಮನ್ ಗಿಲ್ – 5 ಶತಕ
ವಿರಾಟ್ ಕೊಹ್ಲಿ – 4 ಶತಕ
ಮಯಾಂಕ್ ಅಗರ್ವಾಲ್ – 4 ಶತಕ
ರಿಷಬ್ ಪಂತ್ – 4 ಶತಕ
A moment to savour for @ShubmanGill as he notches up his 5th Test CENTURY 👏👏
— BCCI (@BCCI) September 21, 2024
Live – https://t.co/fvVPdgXtmj… #INDvBAN @IDFCFIRSTBank pic.twitter.com/W4d1GmuukB
ಭಾರತ ಪರ 5 ಟೆಸ್ಟ್ ಶತಕ ಬಾರಿಸಿದ ಕಿರಿಯ ಆಟಗಾರ
19 ವರ್ಷ, 282 ದಿನಗಳು: ಸಚಿನ್ ತೆಂಡೂಲ್ಕರ್
22 ವರ್ಷ, 218 ದಿನಗಳು: ರವಿಶಾಸ್ತ್ರಿ
23 ವರ್ಷ, 242 ದಿನಗಳು: ದಿಲೀಪ್ ವೆಂಗ್‌ಸರ್ಕರ್
24 ವರ್ಷ, 3 ದಿನಗಳು: ಮೊಹಮ್ಮದ್ ಅಜರುದ್ದೀನ್
24 ವರ್ಷ, 73 ದಿನಗಳು: ಮನ್ಸೂರ್ ಅಲಿ ಖಾನ್ ಪಟೌಡಿ
24 ವರ್ಷ, 270 ದಿನಗಳು: ರಿಷಬ್ ಪಂತ್
24 ವರ್ಷ, 331 ದಿನಗಳು: ಸುನಿಲ್ ಗವಾಸ್ಕರ್
25 ವರ್ಷ, 13 ದಿನಗಳು: ಶುಭ್‌ಮನ್ ಗಿಲ್
25 ವರ್ಷ, 43 ದಿನಗಳು – ವಿರಾಟ್ ಕೊಹ್ಲಿ
25 ವರ್ಷ, 67 ದಿನಗಳು – ವೀರೇಂದ್ರ ಸೆಹ್ವಾಗ್
25 ವರ್ಷ, 293 ದಿನಗಳು – ಚೇತೇಶ್ವರ ಪೂಜಾರ
26 ವರ್ಷ, 44 ದಿನಗಳು – ರಾಹುಲ್ ದ್ರಾವಿಡ್
