ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನ ಟೀಮ್ ಇಂಡಿಯಾ ಹಿಡಿತ ಸಾಧಿಸಿದೆ. ಎರಡನೇ ಇನ್ನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿರುವ ಕಿವೀಸ್, ಟೀಮ್ ಇಂಡಿಯಾದ ಸ್ಪಿನ್ನರ್ಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಎರಡನೇ ದಿನದಾಟದ ಅಂತ್ಯದ ವೇಳೆಗೆ 171 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ ದಾಳಿಗೆ ಸಿಲುಕಿದ್ದ ಕಿವೀಸ್ ತಂಡ 235 ರನ್ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ, ಆರಂಭಿಕ ಆಘಾತಕ್ಕೆ ಸಿಲುಕಿತ್ತಾದರೂ, ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಅವರ ಅರ್ಧಶತಕದ ನೆರವಿನಿಂದ 263 ರನ್ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ 28 ರನ್ಗಳ ಮುನ್ನಡೆ ಸಾಧಿಸಿತ್ತು.
Stumps on Day 2 in Mumbai!
— BCCI (@BCCI) November 2, 2024
A fine bowling display from #TeamIndia as New Zealand reach 171/9 in the 2nd innings.
See you tomorrow for Day 3 action 👋
Scorecard – https://t.co/KNIvTEy04z#INDvNZ | @IDFCFIRSTBank pic.twitter.com/zJcPNgGWuJ
ಎರಡನೇ ದಿನದಾಟದಲ್ಲೇ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟಾಮ್ ಲ್ಯಾಥಮ್ ನೇತೃತ್ವದ ಕಿವೀಸ್ ತಂಡ, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ದಾಳಿಗೆ ಸಿಲುಕಿ, ಎರಡನೇ ದಿನದಾಟದ ಅಂತ್ಯದ ವೇಳೆಗೆ 171 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡಿದೆ. ಆ ಮೂಲಕ ಕೇವಲ 143 ರನ್ಗಳ ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್ನ ಆರಂಭದ ಓವರ್ನಲ್ಲೇ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವೇಗದ ಬೌಲರ್ ಆಕಾಶ್ ದೀಪ್, ಸಂಕಷ್ಟ ತಂದೊಡ್ಡಿದರು. ಬಳಿಕ ದಾಳಿಗಿಳಿದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನ್ಯೂಝಿಲ್ಯಾಂಡ್ ಬ್ಯಾಟರ್ಗಳನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಬಿಡಲಿಲ್ಲ.
ಇದನ್ನು ಓದಿದ್ದೀರಾ? 3ನೇ ಟೆಸ್ಟ್ | ಶತಕ ವಂಚಿತ ಶುಭಮನ್ ಗಿಲ್: ಟೀಮ್ ಇಂಡಿಯಾಕ್ಕೆ 28 ರನ್ ಮುನ್ನಡೆ
ಟೀಮ್ ಇಂಡಿಯಾದ ಸ್ಪಿನ್ ದಾಳಿಯ ಹೊರತಾಗಿಯೂ ಕೂಡ ಆತಿಥೇಯರ ಪರವಾಗಿ ವಿಲ್ ಯಂಗ್ ಓರ್ವರಷ್ಟೇ ಅರ್ಧಶತಕ ಗಳಿಸುವಲ್ಲಿ ಸಫಲರಾದರು. 100 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸ್ನ ನೆರವಿನಿಂದ 51 ರನ್ ಗಳಿಸಿದ ಯಂಗ್, ಅಶ್ವಿನ್ ಅವರ ಕ್ಯಾರಂ ಬಾಲ್ಗೆ ಬಲಿಯಾಗಿ, ಕಾಟ್ ಆ್ಯಂಡ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.
What a way to get the final wicket of the day 🙌
— BCCI (@BCCI) November 2, 2024
Make that 4⃣ for Ravindra Jadeja 👏👏
Scorecard – https://t.co/KNIvTEyxU7#TeamIndia | #INDvNZ | @IDFCFIRSTBank | @imjadeja pic.twitter.com/r6sTQSHgYf
ಉಳಿದಂತೆ ನ್ಯೂಜಿಲೆಂಡ್ ಪರವಾಗಿ ಫಿಲಿಪ್ಸ್ 26 ರನ್, ಡೆವೊನ್ ಕಾನ್ವೆ 22, ಡೇರೆಲ್ ಮಿಚೆಲ್ 21 ರನ್ ಗಳಿಸಿದರು.
ಎರಡನೆ ದಿನ ಟೀಮ್ ಇಂಡಿಯಾ ಪರವಾಗಿ ಕರಾರುವಕ್ಕಾದ ದಾಳಿ ನಡೆಸಿದ ರವೀಂದ್ರ ಜಡೇಜಾ 52ಕ್ಕೆ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ರವಿಚಂದ್ರನ್ ಅಶ್ವಿನ್ 63ಕ್ಕೆ 3 ವಿಕೆಟ್ ಗಳಿಸಿದ್ದಾರೆ. ಉಳಿದಂತೆ ಆಕಾಶ್ ದೀಪ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
ಸಂಕ್ಷಿಪ್ತ ಸ್ಕೋರ್ ವಿವರ:
ನ್ಯೂಜಿಲೆಂಡ್: ಮೊದಲ ಇನ್ನಿಂಗ್ಸ್ 235
ಟೀಮ್ ಇಂಡಿಯಾ: ಮೊದಲ ಇನ್ನಿಂಗ್ಸ್ 263
ನ್ಯೂಜಿಲೆಂಡ್: ಎರಡನೇ ಇನ್ನಿಂಗ್ಸ್ 171/9 ವಿಕೆಟ್
143 ರನ್ಗಳ ಮುನ್ನಡೆ
Ashwin takes a blinder to break the partnership 👏
— JioCinema (@JioCinema) November 2, 2024
Catch the thrilling end Day 2 of the 3rd #INDvNZ Test, LIVE on #JioCinema, #Sports18 and #ColorsCineplex!#IDFCFirstBankTestTrophy #JioCinemaSports pic.twitter.com/tcnqld02qr
