ಈಗಾಗಲೇ 17ನೇ ಆವೃತ್ತಿಯ ಐಪಿಎಲ್ನ ಎಲ್ಲ ಲೀಗ್ ಪಂದ್ಯಗಳು ಕೊನೆಗೊಂಡಿದ್ದು, ಚಾಂಪಿಯನ್ ಪಟ್ಟಕ್ಕಾಗಿ ನಡೆಯಲಿರುವ ಫೈನಲ್ ಪಂದ್ಯ ಸೇರಿ ಒಟ್ಟು ನಾಲ್ಕು ಮಹತ್ವದ ಪಂದ್ಯಗಳಷ್ಟೇ ಬಾಕಿ ಇದೆ.
ಈಗಾಗಲೇ 70 ಲೀಗ್ ಪಂದ್ಯಗಳ ಪೈಕಿ 67 ಲೀಗ್ ಪಂದ್ಯಗಳು ಫಲಿತಾಂಶ ಕಂಡಿದ್ದರೆ, ಮಳೆಯಿಂದಾಗಿ ಮೂರು ಪಂದ್ಯಗಳು ರದ್ದಾಗಿದ್ದವು. ಗುಜರಾತ್-ಕೆಕೆಆರ್, ಲಕ್ನೋ-ಗುಜರಾತ್ ಮತ್ತು ಕೆಕೆಆರ್-ರಾಜಸ್ಥಾನ ತಂಡಗಳ ನಡುವೆ ನಡೆಯಬೇಕಿದ್ದ ಲೀಗ್ ಪಂದ್ಯಗಳು ಮಳೆಗಾಹುತಿಯಾಗಿತ್ತು.
ಲೀಗ್ ಪಂದ್ಯಗಳ ಬಳಿಕ ಒಟ್ಟು ನಾಲ್ಕು ತಂಡಗಳು ಪ್ಲೇ ಆಫ್ಗೆ ಪ್ರವೇಶಿಸಿದೆ. ಮೊದಲ ತಂಡವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಪ್ರವೇಶಿಸಿದ್ದರೆ, ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಮವಾಗಿ 2,3,4ನೇ ತಂಡವಾಗಿ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ.
WE’RE IN THE END GAME NOW…!!!
KKR will face SRH in the Qualifier 1 tonight at the Narendra Modi Stadium – the winner gets a straight ticket to the Final whereas the losers get one more shot. 🏆 pic.twitter.com/1dcRr5Cwjv
— Mufaddal Vohra (@mufaddal_vohra) May 21, 2024
ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಕಣಕ್ಕಿಳಿಯಲಿದೆ. ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡವು, ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯ ಹಾಗೂ ಎಲಿಮಿನೇಟರ್ ಎರಡೂ ಪಂದ್ಯಗಳು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಂದು (ಮೇ 21) ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದವರು ಫೈನಲ್ಗೆ ಹೋದರೆ, ಸೋತವರಿಗೆ ಮತ್ತೊಂದು ಅವಕಾಶ ಸಿಗಲಿದೆ. ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮಹತ್ವದ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
Heading into the #PlayoffsOnStar, the top two teams from the league stage face off in #Qualifier1!
The competition is fierce even off the field, with social buzz suggesting a slight edge for @SunRisers 🤯
📺 | Kolkata 🆚 Hyderabad | TOMORROW, 6:30 PM | #IPLOnStar pic.twitter.com/aIbvSmq7Zw
— Star Sports (@StarSportsIndia) May 20, 2024
ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತವರಿಗೆ ಮತ್ತೊಂದು ಅವಕಾಶ ಸಿಗಲಿದೆ. ನಾಳೆ(ಮೇ 22) ಇದೇ ಮೈದಾನದಲ್ಲಿ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದರಲ್ಲಿ ಜಯ ಗಳಿಸಿದವರು, ಮೇ 24ರಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡವನ್ನು ಎದುರಿಸಲಿದ್ದಾರೆ.
ಮಳೆಯ ಭೀತಿ ಇದೆಯೇ?
ಅಹಮದಾಬಾದ್ನಲ್ಲಿ ಪಂದ್ಯ ನಡೆಯುವ ಮಂಗಳವಾರ ಯಾವುದೇ ಮಳೆ ಇಲ್ಲ. ಪಂದ್ಯದ ವೇಳೆ ಅಹಮಾದಾಬಾದ್ನಲ್ಲಿ 31 ರಿಂದ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಆದರೆ, ಪಂದ್ಯದ ಎರಡನೇ ಇನಿಂಗ್ಸ್ನ ವೇಳೆ ಇಬ್ಬನಿ ಇರಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮೊದಲನೇ ಕ್ವಾಲಿಫೈಯರ್ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಪಡಿಸಿಲ್ಲ. ಒಂದು ವೇಳೆ ಅನಿರೀಕ್ಷಿತವಾಗಿ ಮಳೆಯಾಗಿ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಹೆಚ್ಚಿನ ಅಂಕಗಳನ್ನು ಕಲೆ ಹಾಕಿರುವ ತಂಡ ಫೈನಲ್ಗೆ ಪ್ರವೇಶಿಸಲಿದೆ. ಅಂದರೆ 20 ಅಂಕ ಕಲೆ ಹಾಕಿರುವ ಕೆಕೆಆರ್, 17 ಅಂಕ ಹೊಂದಿರುವ ಎಸ್ಆರ್ಎಚ್ ತಂಡವನ್ನು ಹಿಂದಿಕ್ಕಿ ಫೈನಲ್ಗೇರಲಿದೆ.
Presenting to you 𝙏𝙝𝙚 𝙁𝙞𝙣𝙖𝙡 𝙁𝙤𝙪𝙧 of #IPL2024! 🤌🏻#SRH toppled Punjab to seal the 2nd spot while rain denied #RR a top 2 finish! 💔 @KKRiders🆚@SunRisers & @RCBTweets 🆚 @rajasthanroyals: Which 2️⃣ teams do you think will come out on top? 👀
📺 | #KKRvSRH | TUE, May… pic.twitter.com/lOloYXOXg9
— Star Sports (@StarSportsIndia) May 19, 2024
2023ರಲ್ಲಿ ಪ್ಲೇ ಆಫ್ಗೇರಿದ್ದ 4 ತಂಡಗಳೂ ಈ ಬಾರಿ ಪ್ಲೇ-ಆಫ್ಗೇರಲು ವಿಫಲ!
2023ರ ಐಪಿಎಲ್ನಲ್ಲಿ ಪ್ಲೇ-ಆಫ್ ಪ್ರವೇಶಿದ್ದ 4 ತಂಡಗಳೂ ಈ ಬಾರಿ ಪ್ಲೇ-ಆಫ್ಗೇರಲು ವಿಫಲವಾಗಿದೆ. ಬೇರೆ 4 ತಂಡಗಳು ನಾಕೌಟ್ ಪ್ರವೇಶಿಸಿವೆ.
ಕಳೆದ ವರ್ಷ ಗುಜರಾತ್, ಚೆನ್ನೈ, ಲಕ್ನೋ ಹಾಗೂ ಮುಂಬೈ ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಿ ಪ್ಲೇ-ಆಫ್ಗೇರಿದ್ದವು. ಫೈನಲ್ನ ಗುಜರಾತ್ನ ಮಣಿಸಿ ಚೆನ್ನೈ ಚಾಂಪಿಯನ್ ಆಗಿತ್ತು.
After 7️⃣0️⃣ matches of hard-fought cricket, a final look at the #TATAIPL 2024 Points Table 🙌
Did your favourite team qualify for the Playoffs? 🤔 pic.twitter.com/s3syDvL6KH
— IndianPremierLeague (@IPL) May 19, 2024
ಈ ಬಾರಿ ಕೋಲ್ಕತಾ, ರಾಜಸ್ಥಾನ, ಹೈದರಾಬಾದ್ ಹಾಗೂ ಆರ್ಸಿಬಿ ಪ್ಲೇ-ಆಫ್ಗೇರಿವೆ. ಈ ಪೈಕಿ ಕೋಲ್ಕತಾ 2, ರಾಜಸ್ಥಾನ, ಹೈದರಾಬಾದ್ ತಲಾ 1 ಬಾರಿ ಪ್ರಶಸ್ತಿ ಗೆದ್ದಿದೆ. ಆರ್ಸಿಬಿ ತಂಡವು 2009, 2011 ಹಾಗೂ 2016ರಲ್ಲಿ ಸೇರಿ ಒಟ್ಟು ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ, ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ.
