ಮೇ 16ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ನಿರ್ಣಾಯಕ ಪಂದ್ಯವು ನಿರಂತರ ಮಳೆಯಿಂದಾಗಿ ರದ್ದುಗೊಂಡಿದೆ.
ಪಂದ್ಯ ರದ್ದಾದರೂ ಕೂಡ, ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇ-ಆಫ್ ಪ್ರವೇಶಿಸಿದೆ. ಆ ಮೂಲಕ ಮೂರನೇ ತಂಡವಾಗಿ ಪ್ಲೇ-ಆಫ್ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ-ಆಫ್ ಪ್ರವೇಶಿಸಿದೆ.
SRH HAVE QUALIFIED FOR IPL 2024 PLAYOFFS. 🏆 pic.twitter.com/2agqomtbRW
— Mufaddal Vohra (@mufaddal_vohra) May 16, 2024
ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ 15 ಅಂಕಗಳೊಂದಿಗೆ ಐಪಿಎಲ್ 2024ರ ಪ್ಲೇಆಫ್‌ಗೆ ಪ್ರವೇಶಿಸಿದ ಮೂರನೇ ತಂಡವೆನಿಸಿತು. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದ್ದ ಗುಜರಾತ್ ಟೈಟನ್ಸ್ ತಂಡ ಲೀಗ್ ಹಂತದಲ್ಲಿ 12 ಅಂಕಗಳೊಂದಿಗೆ ಅಭಿಯಾನ ಮುಗಿಸಿತು. ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಮಳೆಯಿಂದಾಗಿ ರದ್ದಾದ ಎರಡನೇ ಪಂದ್ಯ ಇದಾಗಿದೆ. ಅದರಲ್ಲೂ ಗುಜರಾತ್ ತಂಡದ ವಿರುದ್ಧದ ಪಂದ್ಯವೇ ರದ್ದಾಗಿರುವುದು ವಿಪರ್ಯಾಸ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಕೆಆರ್ ವಿರುದ್ಧ ಮೇ 13ರಂದು ನಡೆಯಬೇಕಿದ್ದ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿತ್ತು.
𝙎𝙪𝙣𝙧𝙞𝙨𝙚𝙧𝙨 𝙃𝙮𝙙𝙚𝙧𝙖𝙗𝙖𝙙 are through to #TATAIPL 2024 Playoffs 🧡
Which will be the final team to qualify 🤔#TATAIPL | #SRHvGT | @SunRisers pic.twitter.com/6Z7h5kiI4o
— IndianPremierLeague (@IPL) May 16, 2024
ಹೈದರಾಬಾದ್‌ನಲ್ಲಿ ಗುರುವಾರದಂದು ಸತತವಾಗಿ ಮಳೆಯಾಗುತ್ತಿದ್ದು, ನಿರ್ಣಾಯಕ ಪಂದ್ಯಕ್ಕೆ ಮಳೆ ಭೀತಿ ಎದುರಾಗಿತ್ತು. ಅಂತಿಮವಾಗಿ, ಪಂದ್ಯದ ಅಂಪೈರ್‌ಗಳು ಉಭಯ ತಂಡಗಳ ನಾಯಕರನ್ನು ಕರೆದು, ಕೈ ಕುಲುಕಿಸಿ ಅವರ ಒಪ್ಪಿಗೆಯೊಂದಿಗೆ ಒಂದೂ ಎಸೆತ ಕಾಣದೆ ರದ್ದುಗೊಳಿಸಬೇಕಾಯಿತು.
We’re 𝗤𝗨𝗔𝗟𝗜-𝗙𝗜𝗥𝗘𝗗 up for the #IPL2024 playoffs! 🤩🔥#PlayWithFire pic.twitter.com/q5LScNRlCq
— SunRisers Hyderabad (@SunRisers) May 16, 2024
ಪಂದ್ಯ ಮಳೆಯಿಂದಾಗಿ ರದ್ದುಗೊಂಡ ನಂತರ, 13 ಪಂದ್ಯಗಳಿಂದ 15 ಪಾಯಿಂಟ್‌ಗಳನ್ನು ತಲುಪಿ ಐಪಿಎಲ್ 2024 ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಬೆಂಗಳೂರಿನಲ್ಲಿ ಶನಿವಾರ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡು ತಂಡಗಳಲ್ಲಿ ಒಂದು ತಂಡ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಆರ್‌ಸಿಬಿ ಕೇವಲ ಗೆದ್ದರೆ ಸಾಕಾಗುವುದಿಲ್ಲ. ಚೆನ್ನೈಗಿಂತ ಹೆಚ್ಚು ನೆಟ್ ರನ್ ರೇಟ್ ಗಳಿಸಬೇಕಿದೆ.