ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್‌ನ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೂರ್ಯ ಕುಮಾರ್ ಯಾದವ್ ಅವರ ಶತಕದಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಭರ್ಜರಿಯಾಗಿ ಸೋಲಿಸಿದೆ.
ಹೈದರಾಬಾದ್ ವಿರುದ್ಧ ಸೂರ್ಯಕುಮಾರ್ ಯಾದವ್ ಅಬ್ಬರದ ಶತಕ ಸಿಡಿಸಿ ಮುಂಬೈಗೆ ಗೆಲುವು ತಂದು ಕೊಟ್ಟರು. ಹೀಗಾಗಿ ಹೈದರಾಬಾದ್ ನೀಡಿದ 174 ರನ್ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 17.2 ಓವರ್‌ಗಳಲ್ಲಿ ಜಯ ದಾಖಲಿಸಿತು.
📸 That picture perfect moment for Mumbai Indians 💙
Suryakumar Yadav leads #MI to victory with another special innings from him 👌
Scorecard ▶️ https://t.co/iZHeIP3ZRx#TATAIPL | #MIvSRH pic.twitter.com/HJeeO0lmr3
— IndianPremierLeague (@IPL) May 6, 2024
ಹೈದರಾಬಾದ್ ನೀಡಿದ್ದ 174 ರನ್ ಗುರಿಯನ್ನು ಬೆನ್ನಟ್ಟಲು ಪ್ರಾರಂಭಿಸಿದಾಗ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಎಡವಿತ್ತು.
ಮುಂಬೈ ಪರ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 9 ರನ್‌ಗಳಿಸಿ ಮಾರ್ಕೊ ಜಾನ್ಸೆನ್ ಬೌಲಿಂಗ್‌ನಲ್ಲಿ ಔಟಾದರೆ, ಆ ಬಳಿಕ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಕೇವಲ 5 ರನ್‌ಗೆ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು.
Sublime Suryakumar Yadav 🥳
His 102*(51) electrifies Wankhede ⚡️#TATAIPL | #MIvSRH
— IndianPremierLeague (@IPL) May 6, 2024
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದ ನಮನ್ ಧೀರ್ ಕೂಡ ಶೂನ್ಯಕ್ಕೆ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಔಟ್ ಆಗಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಮುಂಬೈ 31 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಒಂದಾದ ಮುಂಬೈನ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಎಡಗೈ ಬ್ಯಾಟರ್ ತಿಲಕ್ ವರ್ಮಾ ಹೈದರಾಬಾದ್ ಬೌಲರ್‌ಗಳನ್ನು ಕಾಡಲು ಶುರುವಿಟ್ಟರು.
Time to regroup and go again on Wednesday. #PlayWithFire #MIvSRH pic.twitter.com/dchg71Gcm4
— SunRisers Hyderabad (@SunRisers) May 6, 2024
ಸೂರ್ಯಕುಮಾರ್ ಯಾದವ್, ತಾನು ಎದುರಿಸಿದ 51 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 102* ಶತಕ ಹೊಡೆದು ಸಂಭ್ರಮಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಅವರಿಗೆ ಸಾಥ್ ನೀಡಿದ್ದ ತಿಲಕ್ ವರ್ಮಾ ಅಜೇಯ 37 ರನ್ ಹೊಡೆದು ಮುಂಬೈ ಗೆಲುವಿಗೆ ಶ್ರಮವಹಿಸಿದರು. ಇವರಿಬ್ಬರ ಈ ಜೋಡಿಯು ಮುರಿಯದ ನಾಲ್ಕನೇ ವಿಕೆಟ್‌ಗೆ 143 ರನ್‌ಗಳ ಬೃಹತ್ ಜೊತೆಯಾಟ ನಡೆಸಿದರು.
ಹೈದರಾಬಾದ್ ಪರ ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.
– 2 teams with 16 Points.
– 3 teams with 12 Points.
– 1 team with 10 Points.
– 4 teams with 8 Points.THE IPL IS PEAKING AT THE RIGHT TIME. pic.twitter.com/FGqypzu2W3
— Mufaddal Vohra (@mufaddal_vohra) May 6, 2024
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು, ಹೈದರಾಬಾದ್ ವಿರುದ್ಧ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿತು.
ಈವರೆಗೆ ಒಟ್ಟು 11 ಪಂದ್ಯಗಳನ್ನು ಆಡಿರುವ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡವು, 6 ಗೆಲುವು ಹಾಗೂ 5 ಸೋಲಿನೊಂದಿಗೆ 4ನೇ ಸ್ಥಾನದಲ್ಲಿದ್ದರೂ ಪ್ಲೇ ಆಫ್‌ಗೆ ತಲುಪುವ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು, ಲಕ್ನೋ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್‌ಗೆ ಏರುವ ಕನಸು ಕಾಣುತ್ತಿದೆ. ಆದರೆ ಯಾರು ಪ್ರವೇಶಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
