- ಟಿ20 ಬ್ಲಾಸ್ಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಪಾಕ್ ಬೌಲರ್
- ಶಾಹೀನ್ ದಾಖಲೆಯ ಹೊರತಾಗಿಯೂ ಸೋಲುಂಡ ನಾಟಿಂಗ್ಹ್ಯಾಮ್ಶೈರ್
ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಮೈದಾನಕ್ಕಿಳಿದಿರುವ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, T20 ಬ್ಲಾಸ್ಟ್ ಲೀಗ್ನ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಬರ್ಮಿಂಗ್ಹ್ಯಾಮ್ ಬೇರ್ಸ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ನಾಟಿಂಗ್ಹ್ಯಾಮ್ಶೈರ್ ಪರವಾಗಿ ಮೊದಲ ಓವರ್ ಎಸೆದ ಅಫ್ರಿದಿ, ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ.
ಇಂಗ್ಲೆಂಡಿನ ಟ್ರೆಂಟ್ ಬ್ರಿಡ್ಜ್ನಲ್ಲಿ ಜೂ.30ರಂದು ನಡೆದ ಪಂದ್ಯದಲ್ಲಿ 23 ವರ್ಷದ ಎಡಗೈ ವೇಗಿ ಅಫ್ರಿದಿ, ಅಲೆಕ್ಸ್ ಡೇವಿಡ್ಸ್(0), ಕ್ರಿಸ್ ಬೆನ್ಜಮಿನ್(0), ಡ್ಯಾನ್ ಮೌಸ್ಲಿ(1) ಹಾಗೂ ಎಡ್ ಬೆರ್ನಾರ್ಡ್(0) ಅವರನ್ನು ಮೊದಲ ಓವರ್ನಲ್ಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.
ಅಲ್ಲದೇ, ಟಿ20 ಕ್ರಿಕೆಟ್ನಲ್ಲಿ ಮೊದಲ ಓವರ್ನಲ್ಲೇ 4 ವಿಕೆಟ್ ಕಬಳಿಸಿದ ವೇಗಿ ಎನ್ನುವ ವಿಶ್ವದಾಖಲೆಗೆ ಪಾಕ್ ಮೂಲದ ಶಾಹೀನ್ ಅಫ್ರಿದಿ ಭಾಜನರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಾಹನಗಳ ಸುರಕ್ಷಾ ನೋಂದಣಿ ಫಲಕ: ರಾಜ್ಯದಲ್ಲಿ ಜಾರಿಗೆ ಮುನ್ನವೇ 500 ಕೋಟಿ ಅಕ್ರಮದ ವಾಸನೆ!
ಶಾಹೀನ್ ಅಫ್ರಿದಿ ಮೊದಲ ಓವರ್ನಲ್ಲೇ ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರೂ ಕೂಡ, ನಾಟಿಂಗ್ಹ್ಯಾಮ್ಶೈರ್ ನೀಡಿದ್ದ 169 ರನ್ಗಳ ಗುರಿಯನ್ನು ತಲುಪುವಲ್ಲಿ ಸಫಲವಾಯಿತು.
ಫಿಟ್ನೆಸ್ ಸಮಸ್ಯೆಯಿಂದ ಕಳೆದ ಕೆಲ ತಿಂಗಳುಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಶಾಹೀನ್ ಅಫ್ರಿದಿ, ಲಂಕಾ ಪ್ರವಾಸಕ್ಕೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.