ಟಿ20 ವಿಶ್ವಕಪ್ನಲ್ಲಿ ಇಂದು ನಡೆದ ಕೊನೆಯ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅದೃಷ್ಟ ಕೈಹಿಡಿದ ಪರಿಣಾಮ ಮೊದಲ ಬಾರಿಗೆ ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ. ಆ ಮೂಲಕ ರಶೀದ್ ಖಾನ್ ಬಳಗ ಇತಿಹಾಸ ಸೃಷ್ಟಿಸಿದೆ.
ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿತ್ತು.
ಬಾಂಗ್ಲಾದೇಶ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಬೇಕಿದ್ದಿದ್ದರೆ ಈ ಗುರಿಯನ್ನು 12.1 ಓವರ್ಗಳಲ್ಲಿ ತಲುಪಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶವು 17.5 ಓವರ್ಗಳಲ್ಲಿ ಕೇವಲ 105 ರನ್ ಗಳಿಸುವಷ್ಟರಲ್ಲಿ ಅಲೌಟ್ ಆಯಿತು.
8 ರನ್ನಿಂದ ಸೋಲುವುದರೊಂದಿಗೆ ಸೆಮಿಫೈನಲ್ ಅವಕಾಶ ಕೈತಪ್ಪಿಸಿಕೊಂಡಿತು. ಒಂದು ವೇಳೆ 12.1 ಓವರ್ಗಳಲ್ಲಿ ಗುರಿ ತಲುಪದೇ ಇದ್ದು, ಕೇವಲ ಪಂದ್ಯ ಗೆದ್ದಿದ್ದರೆ ರನ್ ರೇಟ್ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಲಿತ್ತು. ಅದೂ ಕೂಡ ಆಗಿಲ್ಲ.
ಅಫ್ಘಾನಿಸ್ತಾನ ಪಂದ್ಯವನ್ನು ಡಕ್ ವರ್ಥ್ ಲೂಯಿಸ್ ನಿಯಮದೊಂದಿಗೆ 8 ರನ್ಗಳಿಂದ ಗೆಲ್ಲುವುದರ ಜೊತೆಗೆ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ, ಇತಿಹಾಸ ನಿರ್ಮಿಸಿದೆ.
ಅಫ್ಘಾನಿಸ್ತಾನ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವುದರಿಂದ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಗೆ ಬಿದ್ದಿದೆ. ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧ ಸೋಮವಾರ ನಡೆದಿದ್ದ ಪಂದ್ಯದಲ್ಲಿ 24 ರನ್ಗಳಿಂದ ಸೋತಿತ್ತು.
