ಟಿ20 ವಿಶ್ವಕಪ್‌ನ ಲೀಗ್ ಡಿ ಗ್ರೂಪ್ ಹಾಗೂ ಲೀಗ್ ಹಂತದ 16ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್‌ಲ್ಯಾಂಡ್ಸ್ ವಿರುದ್ಧ ಬಲಿಷ್ಠ ದಕ್ಷಿಣ ಆಫ್ರಿಕಾವು ಪರದಾಟ ನಡೆಸಿ, ಕೊನೆಗೂ ಗೆಲುವು ದಾಖಲಿಸಿಕೊಳ್ಳುವ ಮೂಲಕ ಮಾನ ಉಳಿಸಿಕೊಂಡಿದೆ.
ಶನಿವಾರ ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ನೀಡಿದ್ದ 104 ರನ್‌ಗಳ ಸುಲಭ ಗುರಿಯನ್ನು ತಲುಪಲು 6 ವಿಕೆಟ್‌ಗಳನ್ನು ಕಳೆದುಕೊಂಡು, ಕೊನೆಗೆ 18.5ನೇ ಓವರ್‌ನಲ್ಲಿ ಗುರಿ ತಲುಪಿತು.
ಡೇವಿಡ್ ಮಿಲ್ಲರ್ ಅರ್ಧಶತಕದ ನೆರವಿನಿಂದ ಯಶಸ್ವಿಯಾಗಿ ಚೇಸಿಂಗ್ ಮಾಡಿದ್ದರಿಂದ ದಕ್ಷಿಣ ಆಫ್ರಿಕಾ ಮಾನ ಉಳಿಸಿಕೊಂಡಿದೆ.
Netherlands got four wickets in the powerplay, but David Miller knuckled down to take South Africa to victory with support from Stubbs #NEDvSA #T20WorldCup
▶️ https://t.co/h3vCW9edN1 pic.twitter.com/3UaEEt7lGN
— ESPNcricinfo (@ESPNcricinfo) June 8, 2024
ಪಾರ್ಟ್ ಟೈಮ್ ವೃತ್ತಿಪರ ಆಟಗಾರರನ್ನೊಳಗೊಂಡಿರುವ ನೆದರ್‌ಲ್ಯಾಂಡ್ಸ್ ನೀಡಿದ 104 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಬಲಿಷ್ಠ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಖಾತೆ ತೆರೆಯದ ಕ್ವಿಂಟನ್ ಡಿ ಕಾಕ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಇದರ ಹಿಂದೆಯೇ ರೀಜಾ ಹೆಂಡ್ರಿಕ್ಸ್ ಕೂಡ ಕೇವಲ 3 ರನ್‌ಗಳಿಸ ಔಟ್ ಆದರೆ, ನಾಯಕ ಐಡೆನ್ ಮಾರ್ಕ್ರಾಮ್ ಮತ್ತೊಮ್ಮೆ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಬಳಿಕ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಸಹಾ 4 ರನ್‌ಗೆ ತಮ್ಮ ಆಟವನ್ನು ಮುಗಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಈ ಹಂತದಲ್ಲಿ ಹರಿಣಗಳ ಪಡೆ ಕೇವಲ 12 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಬಂದ ಯುವ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅನುಭವಿ ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟವಾಡಿದರು. ಈ ಮೂಲಕ ಕುಸಿದ ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಚಿಗುರೊಡೆಸಿದರು.
De Kock ❌
Hendricks ❌
Markram ❌
Klaasen ❌#NEDvSA #T20WorldCup▶️ https://t.co/h3vCW9eLCz pic.twitter.com/CHkWrnuEbI
— ESPNcricinfo (@ESPNcricinfo) June 8, 2024
ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 33 ರನ್‌ಗಳನ್ನು ಹೊಡೆದು ಔಟ್ ಆದರೆ, ನಂತರ ಬಂದ ಮಾರ್ಕೊ ಜಾನ್ಸೆನ್ 3 ರನ್‌ಗರೆ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಸೋಲಿನ ಸುಳಿಯಲ್ಲಿದ ದಕ್ಷಿಣ ಆಫ್ರಿಕಾ ತಂಡವನ್ನು ಡೇವಿಡ್ ಮಿಲ್ಲರ್ ಅರ್ಧಶತಕ ಬಾರಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
ಡೇವಿಡ್ ಮಿಲ್ಲರ್ ಎದುರುಸಿದ 51 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ನೆರವಿನಿಂದ ಅಜೇಯ 59 ರನ್ ಗಳಿಸಿದರು. ನೆದರ್‌ಲ್ಯಾಂಡ್ಸ್ ಪರ ಲೋಗನ್ ವ್ಯಾನ್ ಬೀಕ್ ಮತ್ತು ವಿವಿಯನ್ ಕಿಂಗ್ಮಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಬಾಸ್ ಡಿ ಲೀಡೆ ಒಂದು ವಿಕೆಟ್ ಪಡೆದರು.
104 ರನ್‌ಗಳ ಸಾಧಾರಣ ಗುರಿ ನೀಡಿದ್ದರೂ, ಸಂಘಟಿತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಒಂದು ಹಂತದಲ್ಲಿ ಭಯ ಮೂಡಿಸುವಂತೆ ಮಾಡಿದ ನೆದರ್‌ಲ್ಯಾಂಡ್ಸ್ ತಂಡಕ್ಕೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Not the result we wanted 💔
But what a fight from our players 🫡#Nordek #T20WorldCup #NedvSA #StrongerTogether pic.twitter.com/b60bSZlJl9
— Cricket🏏Netherlands (@KNCBcricket) June 8, 2024
2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು 13 ರನ್‌ಗಳಿಂದ ಸೋಲಿಸಿತ್ತು. ಆ ಬಳಿಕ 2023ರ ವಿಶ್ವಕಪ್‌ನಲ್ಲೂ ಕೂಡ ನೆದರ್‌ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು 38 ರನ್‌ಗಳಿಂದ ಸೋಲಿಸಿತ್ತು. ನ್ಯೂಯಾರ್ಕ್‌ನಲ್ಲಿ ಇಂದು ಅದೇ ಬಹುತೇಕ ಪುನರಾವರ್ತನೆಯಾಗಿತ್ತು. ಆದರೆ ಅದನ್ನು ಡೇವಿಡ್ ಮಿಲ್ಲರ್ ತಪ್ಪಿಸುವ ಮೂಲಕ, ಮೂರನೇ ಅವಮಾನವನ್ನು ತಪ್ಪಿಸಿದ್ದಾರೆ.
