ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ – ಆಸೀಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳು ಪಾರಮ್ಯ ತೋರಿದ್ದಾರೆ. ಒಂದೇ ದಿನ ಎರಡೂ ತಂಡಗಳಿಂದ 17 ವಿಕೆಟ್ ಪತನವಾಗಿದೆ.
ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಟೀಂ ಇಂಡಿಯಾದ ನಾಯಕ ಜಸ್‌ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ದುಕೊಂಡರು.
ಆದರೆ ನಾಯಕನ ನಿರೀಕ್ಷೆಗೆ ತಕ್ಕಂತೆ ಭಾರತದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಂತು ಉತ್ತಮ ಪ್ರದರ್ಶನ ನೀಡಲಿಲ್ಲ. ಆಸೀಸ್ ಬೌಲರ್‌ಗಳ ದಾಳಿಗೆ ನಡುಕಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 49.4 ಓವರ್‌ಗಳಲ್ಲಿ 150 ರನ್ ಗಳಿಸವಷ್ಟರಲ್ಲಿ ಆಲೌಟ್ ಆಯಿತು.
ಪಾದರ್ಪಣೆ ಪಂದ್ಯದಲ್ಲಿ ಭರವಸೆ ಹುಟ್ಟು ಹಾಕಿದ ನಿತೀಶ್‌ಕುಮಾರ್ ರೆಡ್ಡಿ 41 ರನ್ ಕಲೆ ಹಾಕುವ ಮೂಲಕ ಟೀಮ್ ಇಂಡಿಯಾ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ಉಳಿದಂತೆ ಕೆ ಎಲ್ ರಾಹುಲ್ (26) ಹಾಗೂ ರಿಷಬ್ ಪಂತ್(37) ಬಿಟ್ಟರೆ ಉಳಿದ ಆಟಗಾರರು ತಕ್ಕ ಪ್ರದರ್ಶನ ತೋರಲಿಲ್ಲ.
ಈ ಸುದ್ದಿ ಓದಿದ್ದೀರಾ? ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕನಾಗಿ ನೇಮಕ
ಆಸೀಸ್ ಪರ ಜೋಶ್ ಹೇಜಲ್ವುಡ್ 4 ವಿಕೆಟ್ ಕಬಳಿಸಿದರೆ, ಉಳಿದಂತೆ ಮಿಷಲ್ ಸ್ಟಾರ್ಕ್, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು.
ನಂತರ ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ದಿನಾದಾಂತ್ಯಕ್ಕೆ 27 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 67 ರನ್ ಗಳಿಸಿ 83 ರನ್ ಹಿನ್ನಡೆಯಲ್ಲಿದೆ. ಆಸ್ಟ್ರೇಲಿಯಾದ ಯಾವ ಬ್ಯಾಟರ್‌ಗಳು 20 ರನ್ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ತಂಡದ ಪರ ಅಲೆಕ್ಸ್ ಕ್ಯಾರಿ ಅತ್ಯಧಿಕ ಅಜೇಯ 19 ರನ್ಗಳು ಮಾತ್ರ ಗಳಿಸಿದರು.
ಅಮೋಘ ಪ್ರದರ್ಶನ ತೋರಿದ ನಾಯಕ ಜಸ್‌ಪ್ರೀತ್ ಬುಮ್ರಾ 17 ರನ್‌ಗೆ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ 17/ 2 ಹಾಗೂ ಹರ್ಷಿತ್ ರಾಣಾ 33/1 ವಿಕೆಟ್ ಕಿತ್ತು ಆಸೀಸ್ ಬ್ಯಾಟರ್‌ಗಳನ್ನು ಸರದಿ ಸಾಲಿನಲ್ಲಿ ಪೆವಿಲಿಯನ್‌ಗೆ ಅಟ್ಟಿದರು.
