ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

Date:

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ ಅಷ್ಟು ಎತ್ತರಕ್ಕೆ ಬೆಳೆದರು, ತಮ್ಮ ಜೀವನದ ಅತ್ಯಂತ ನೋವಿನ ಘಳಿಗೆಯಲ್ಲೂ ಜವಾಬ್ದಾರಿಯನ್ನು ಮರೆಯದೆ ತಂದೆಯ ಕನಸನ್ನು ಹೇಗೆ ನನಸು ಮಾಡಿದರು ಎಂಬುದನ್ನು ತಿಳಿದುಕೊಳ್ಳಬೇಕು

- Advertisement -

ವಿರಾಟ್ ಕೊಹ್ಲಿ – ಈ ಹೆಸರು ಕೇಳಿದರೆ ಸಾಕು ಭಾರತೀಯ ಕ್ರಿಕೆಟ್ ಅಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ. ಮೈದಾನದಲ್ಲಿ ಅವರ ಆಕ್ರಮಣಕಾರಿ ಆಟ, ರನ್ ಗಳಿಸುವ ದಾಹ, ಸಾಧನೆ ಹಾಗೂ ಕ್ರಿಕೆಟ್ ಪ್ರಪಂಚದಲ್ಲಿ ಅವರು ಬೆಳೆದು ನಿಂತ ಎತ್ತರ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಅವರ ಬೆನ್ನ ಹಿಂದಿರುವ ‘ಜರ್ಸಿ ನಂಬರ್ 18’ರ ಹಿಂದಿನ ಭಾವನಾತ್ಮಕ ಹಾಗೂ ಅಸಾಧಾರಣ ಕಥೆ ಅನೇಕರಿಗೆ ಗೊತ್ತಿಲ್ಲ. ಈ 18ನೇ ನಂಬರ್ ಮತ್ತು ಕರ್ನಾಟಕ ರಣಜಿ ತಂಡಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಇಡೀ ದೇಶವೇ ಹೆಮ್ಮೆಪಡುವಂತಹ ಒಂದು ಅದ್ಭುತ ಸಾಧನೆಯ ಬೀಜ ಬಿತ್ತಿದ್ದೇ ಆ ಒಂದು ರೋಚಕ ಪಂದ್ಯದಲ್ಲಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ವಿರಾಟ್, ಅತ್ಯಂತ ಕಷ್ಟಪಟ್ಟು ಕ್ರಿಕೆಟ್ ತರಬೇತಿ ಪಡೆದು ದೆಹಲಿ ರಣಜಿ ತಂಡಕ್ಕೆ ಆಯ್ಕೆಯಾಗುತ್ತಾರೆ. ಆ ವೇಳೆ 2006ರಲ್ಲಿ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡಿಸೆಂಬರ್ 17 ರಂದು ದೆಹಲಿ ಹಾಗೂ ಕರ್ನಾಟಕ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿರುತ್ತದೆ. ಕರ್ನಾಟಕ ತಂಡದ ಮಾರಕ ದಾಳಿಗೆ ನಲುಗುವ ದೆಹಲಿ ತಂಡದ ಆಟಗಾರರು ಕೇವಲ ಒಂದೇ ದಿನದಲ್ಲಿ ಔಟ್ ಆಗಿ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗ ಆ ಯುವಕನ ಮೇಲೆ ಇಡೀ ತಂಡದ ಜವಾಬ್ದಾರಿ ಬಿದ್ದಿರುತ್ತದೆ. ಆತ ಕ್ರೀಸ್‌ನಲ್ಲಿ ನಿಂತು ಆಡಿದರೆ ಮಾತ್ರ ದೆಹಲಿ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದು ಅಥವಾ ಗೆಲ್ಲಬಹುದು, ಇಲ್ಲವಾದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಆ ಯುವಕ ರಾತ್ರಿ ಮಲಗಿರುವಾಗ, ಡಿ. 18 ರಂದು ಬೆಳಗಿನ ಜಾವ 3 ಗಂಟೆಗೆ ಆತನಿಗೆ ಒಂದು ಕರೆ ಬರುತ್ತದೆ. ಆತನ ತಾಯಿ ಸರೋಜಾ ಕೊಹ್ಲಿ ಕರೆ ಮಾಡಿ, “ನಿನ್ನ ತಂದೆ ತೀರಿಕೊಂಡಿದ್ದಾರೆ, ತಕ್ಷಣ ಮನೆಗೆ ಬಾ” ಎಂದು ಹೇಳುತ್ತಾರೆ. ಆ ಕ್ಷಣದಲ್ಲಿ ಆ ಹುಡುಗನ ಪ್ರಪಂಚವೇ ಬುಡಮೇಲಾದಂತಾಗುತ್ತದೆ. ಒಂದು ಕಡೆ ಮನೆಯಲ್ಲಿ ಪ್ರೀತಿಯ ತಂದೆಯ ಮೃತದೇಹ, ಇನ್ನೊಂದೆಡೆ ತಾನು ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಬೇಕು ಎಂಬ ತನ್ನ ತಂದೆಯ ದೊಡ್ಡ ಕನಸು ಹಾಗೂ ತನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ದೆಹಲಿ ತಂಡ. ಆತ ಒಂದು ಕ್ಷಣ ಆಳವಾಗಿ ಯೋಚಿಸುತ್ತಾನೆ – “ನನ್ನ ತಂದೆ ಈಗ ನನ್ನೊಂದಿಗಿಲ್ಲ, ಆದರೆ ಅವರ ಕನಸನ್ನು ನನಸು ಮಾಡುವ ಅತಿದೊಡ್ಡ ಜವಾಬ್ದಾರಿ ನನ್ನ ಮೇಲಿದೆ” ಎಂದು ನಿರ್ಧರಿಸುತ್ತಾನೆ.

ಮಾರನೇ ದಿನ ಬೆಳಿಗ್ಗೆ, ಕಣ್ಣೀರನ್ನು ಒರೆಸಿಕೊಂಡು, ತನ್ನ ತಂದೆಯ ಸಾವಿನ ಶೋಕವನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡು ಆ ಹುಡುಗ ನೇರವಾಗಿ ಕ್ರಿಕೆಟ್ ಮೈದಾನಕ್ಕೆ ಬರುತ್ತಾನೆ. ಕರ್ನಾಟಕ ತಂಡದ ವಿರುದ್ಧ ಅಸಾಧಾರಣವಾಗಿ ಬ್ಯಾಟ್ ಬೀಸಿ 90 ರನ್‌ಗಳನ್ನು(238 ಎಸೆತಗಳು, 16 ಬೌಂಡರಿಗಳು) ಕಲೆಹಾಕುವ ಮೂಲಕ, ದೆಹಲಿ ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಿ, ಪಂದ್ಯ ಡ್ರಾ ಆಗುವಂತೆ ಮಾಡುತ್ತಾನೆ. ಆ ಒಂದು ಅದ್ಭುತ ಇನಿಂಗ್ಸ್ ಮುಗಿಸಿದ ನಂತರವಷ್ಟೇ ಆತ ನೇರವಾಗಿ ಹೋಗಿ ತನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುತ್ತಾರೆ. ಇದೊಂದು ತ್ಯಾಗ ಹಾಗೂ ಸಮರ್ಪಣಾ ಭಾವಕ್ಕೆ ಜ್ವಲಂತ ಉದಾಹರಣೆ.

ಇದನ್ನು ಓದಿದ್ದೀರಾ? ಇದು IPL ಇತಿಹಾಸದ ಅತ್ಯುತ್ತಮ ಕ್ಯಾಚ್; ಶ್ರೇಯಸ್ ಕ್ಯಾಚ್ ಕಂಡು ಕಕ್ಕಾಬಿಕ್ಕಿಯಾದ ರೋಹಿತ್, ಸೂರ್ಯ

ಕೊಹ್ಲಿ ಅವರ ತಂದೆ ಪ್ರೇಮ್‌ನಾಥ್ ಕೊಹ್ಲಿ ತೀರಿಕೊಂಡಿದ್ದು ಡಿಸೆಂಬರ್ 18ರಂದು. ಆಗ ಕೊಹ್ಲಿ ವಯಸ್ಸು ಕೂಡ 18 ವರ್ಷ. ತನ್ನ ತಂದೆ ಯಾವಾಗಲೂ ತನ್ನ ಬೆನ್ನ ಹಿಂದೆಯೇ ಇದ್ದಾರೆ ಎಂಬ ಭಾವನೆಯಿಂದ, ಅವರ ಸವಿನೆನಪಿಗಾಗಿ ತನ್ನ ಜರ್ಸಿಯ ಹಿಂದೆ ’18’ನೇ ನಂಬರ್ ಅನ್ನು ಹಾಕಿಸಿಕೊಳ್ಳುತ್ತಾರೆ ವಿರಾಟ್ ಕೊಹ್ಲಿ.

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ ಅಷ್ಟು ಎತ್ತರಕ್ಕೆ ಬೆಳೆದರು, ತಮ್ಮ ಜೀವನದ ಅತ್ಯಂತ ನೋವಿನ ಘಳಿಗೆಯಲ್ಲೂ ಜವಾಬ್ದಾರಿಯನ್ನು ಮರೆಯದೆ ತಂದೆಯ ಕನಸನ್ನು ಹೇಗೆ ನನಸು ಮಾಡಿದರು ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಜರ್ಸಿ ನಂಬರ್ 18 ಕೇವಲ ಒಂದು ಅಂಕಿ ಅಲ್ಲ, ಅದು ಒಬ್ಬ ಮಗನ ಪ್ರೀತಿ, ತ್ಯಾಗ ಹಾಗೂ ದೃಢ ನಿರ್ಧಾರದ ಸಂಕೇತ. ಆ ದಾರಿಯಲ್ಲಿ ನಡೆದು ಸಾಧನೆ ಮಾಡುವತ್ತ ಯುವಜನತೆ ಹೆಜ್ಜೆ ಹಾಕಬೇಕಿದೆ. ಅಂದಿನ ಅವರ ದೃಢ ನಿರ್ಧಾರದ ಫಲವಾಗಿಯೇ, ಇಂದು ಅವರು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕೊಹ್ಲಿ ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 9,230 ರನ್ (30 ಶತಕ, 31 ಅರ್ಧಶತಕ) ಹಾಗೂ ಏಕದಿನ ಪಂದ್ಯಗಳಲ್ಲಿ 14,797 ರನ್ (54 ಶತಕ, 77 ಅರ್ಧಶತಕ) ಸಿಡಿಸಿದ್ದಾರೆ. ಈ ಎರಡೂ ಅಂತಾರಾಷ್ಟ್ರೀಯ ಮಾದರಿಗಳಲ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಐಪಿಎಲ್ ಟೂರ್ನಿಯಲ್ಲಿ (8,908 ರನ್, 8 ಶತಕ, 65 ಅರ್ಧಶತಕ) ಅವರು ಇಂದಿಗೂ ತಮ್ಮ ಅಬ್ಬರದ ಆಟವನ್ನು ಮುಂದುವರೆಸಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 4,188 ರನ್ (1 ಶತಕ, 38 ಅರ್ಧಶತಕ) ಕಲೆಹಾಕಿರುವ ಅವರು, ಆ ಚುಟುಕು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾತ್ರ ಈಗಾಗಲೇ ವಿದಾಯ ಹೇಳಿದ್ದಾರೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...