ಕ್ರಿಕೆಟ್ಗೆ ಸಂಬಂಧಿಸಿ ಇಂಗ್ಲಿಷ್ನಲ್ಲಿ ‘catches win matches’ ಎಂಬ ಮಾತೊಂದಿದೆ. ಒಂದು ವೇಳೆ ಅದು ಈ ಬಾರಿಯ ವಿಶ್ವಕಪ್ಗೆ ಸಂಬಂಧಿಸಿ ಹೇಳುವುದಾದರೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ V/s ಅಫ್ಘಾನಿಸ್ತಾನ ತಂಡದ ಮಧ್ಯೆ ಇಂದು(ನ.7 ಮಂಗಳವಾರ) ನಡೆದ ಪಂದ್ಯಕ್ಕೆ ಅನ್ವಯಿಸಬೇಕು.
ಐಸಿಸಿ ಏಕದಿನ ವಿಶ್ವಕಪ್ನ ಮಹತ್ವದ 39ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಲು ಹೊರಟಿದ್ದ ಅಫ್ಘಾನಿಸ್ತಾನಕ್ಕೆ ನಿರಾಸೆಯಾಗಿದೆ.
An exceptional double ton from an injured Glenn Maxwell helps Australia to a famous victory 🔥@mastercardindia Milestones 🏏#AUSvAFG pic.twitter.com/sBUfzcHAdY
— ICC Cricket World Cup (@cricketworldcup) November 7, 2023
ಅಫ್ಘಾನಿಸ್ತಾನ ನೀಡಿದ್ದ 292 ರನ್ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ, 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಈ ವೇಳೆ ಕ್ರೀಸ್ನಲ್ಲಿದ್ದ ಗ್ಲೆನ್ ಮ್ಯಾಕ್ಸ್ವೆಲ್ಗೆ ಜೊತೆಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 202 ರನ್ಗಳ ಜೊತೆಯಾಟ ನಡೆಸುವ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದಲ್ಲದೇ, ಸೆಮಿಫೈನಲ್ ತಲುಪಿದರು. 128 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್, ಆಸ್ಟ್ರೇಲಿಯಾಗೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಆಸೀಸ್, 46.5 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 293 ರನ್ ಗಳಿಸಿತು.
AfghanAtalan just couldn’t hold their nerves and let Australia recover from 91/7 to win the game by 3 wickets. 💔#AfghanAtalan | #CWC23 | #AFGvAUS | #WarzaMaidanGata pic.twitter.com/YLN7VmqQM8
— Afghanistan Cricket Board (@ACBofficials) November 7, 2023
ಕುಸಿದ ಆಸ್ಟ್ರೇಲಿಯಾಗೆ ಆಸರೆಯಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್, ಸ್ಪಿನ್ನರ್ ನೂರ್ ಓವರ್ನಲ್ಲಿ ನೀಡಿದ್ದ ಸುಲಭ ಕ್ಯಾಚ್ ಅನ್ನು ಹಿಡಿಯುವಲ್ಲಿ ಫೀಲ್ದರ್ ಮುಜೀಬ್ ವಿಫಲರಾದರು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಬಲಗೈ ಬ್ಯಾಟರ್ ಮ್ಯಾಕ್ಸ್ವೆಲ್ ನಾಯಕ ಕಮ್ಮಿನ್ಸ್ ಜೊತೆಗೆ ಬೃಹತ್ ಜೊತೆಯಾಟ ನಡೆಸಿದ್ದಲ್ಲದೇ, ರೋಚಕ ಗೆಲುವನ್ನು ತಂದುಕೊಟ್ಟರು.
ಕೊನೆಯಲ್ಲಿ ಮ್ಯಾಕ್ಸ್ವೆಲ್ ಔಟಾಗದೆ 201(128 ಎಸೆತ, 21 ಬೌಂಡರಿ, 10 ಸಿಕ್ಸ್), ಪ್ಯಾಟ್ ಕಮ್ಮಿನ್ಸ್ 12 ರನ್ ಗಳಿಸಿ ಔಟಾಗದೆ ಉಳಿದರು. ಗಾಯಗೊಂಡಿ
ಸಂಘಟಿತ ಬೌಲಿಂಗ್ ದಾಳಿ ನಡೆಸಿದ್ದ ಅಫ್ಘಾನಿಸ್ತಾನ
ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ನಲುಗಿದ್ದ ಆಸೀಸ್ ಬ್ಯಾಟರ್ಗಳು ಅಫ್ಘಾನಿಸ್ತಾನದ ಸಂಘಟಿತ ಬೌಲಿಂಗ್ಗೆ ತರಗೆಲೆಗಳಂತೆ ವಿಕೆಟ್ ಒಪ್ಪಿಸಿದ್ದರು.
ನವೀನ್ ಉಲ್ ಹಕ್ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಟ್ರಾವಿಸ್ ಹೆಡ್ (0) ಪಡೆಯುವ ಮೂಲಕ ಅಫ್ಘಾನಿಸ್ತಾನ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಬಳಿಕ ನವೀನ್ ಉಲ್ ಹಕ್ ಎಸೆದ 6ನೇ ಓವರ್ನ 4ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು, 11 ಎಸೆತಗಳಲ್ಲಿ 24 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ವಿಕೆಟ್ ಒಪ್ಪಿಸಿದರು.
— Afghanistan Cricket Board (@ACBofficials) November 7, 2023
ಅಝ್ಮತ್ ಒಮರ್ಝಾಹಿ ಎಸೆದ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್(18) ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರೆ, ಬಳಿಕ ಕ್ರೀಸ್ಗೆ ಬಂದ ಜೋಶ್ ಇಂಗ್ಲಿಸ್ (0) ಮುಂದಿನ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ, ನಿರ್ಗಮಿಸಿದರು.
15ನೇ ಓವರ್ನಲ್ಲಿ ರನ್ ಕದಿಯುವ ಯತ್ನದಲ್ಲಿ ವಿಫಲರಾದ ಮಾರ್ನಸ್ ಲಾಬೂಶೈನ್, ರಹಮತ್ ಶಾ ಅತ್ಯುತ್ತಮ ಫೀಲ್ಡಿಂಗ್ಗೆ ರನೌಟ್ಗೆ ಬಲಿಯಾದರು. ಲಾಬೂಶೈನ್ 14 ರನ್ ಗಳಿಸಿ ಔಟಾದರು. 15 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 73 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು.
ಬಳಿಕ ದಾಳಿಗಿಳಿದ ರಶೀದ್ ಖಾನ್ ಎಸೆದ 17ನೇ ಓವರ್ನಲ್ಲಿ ಮಾರ್ಕಸ್ ಸ್ಟೋಯಿನಿಸ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. 7 ಎಸೆತಗಳಲ್ಲಿ 6 ರನ್ ಬಾರಿಸಿದ್ದ ಸ್ಟೋಯಿನಿಸ್ ಪೆವಿಲಿಯನ್ ಪರೇಡ್ ನಡೆಸಿದರು.
ಬಳಿಕ ಕ್ರೀಸ್ಗೆ ಬಂದಿದ್ದ ಮಿಚೆಲ್ ಸ್ಟಾರ್ಕ್, 19ನೇ ಓವರ್ನಲ್ಲಿ ಅಫ್ಘಾನ್ ವಿಕೆಟ್ ಕೀಪರ್ ಇಕ್ರಮ್ ಅಲಿಖಿಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಈ ವೇಳೆ ಆಸ್ಟ್ರೇಲಿಯಾ 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು.