ತನ್ನ ಅಮೋಘ ಆಟದಿಂದ ಟೀಂ ಇಂಡಿಯಾದಲ್ಲಿ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಕಳೆದ ವರ್ಷ ಸ್ಥಾನ ಪಡೆದಿದ್ದಾರೆ.
ರಿಂಕು ಸಿಂಗ್ ಕಳೆದ ವರ್ಷದ ಐಪಿಎಲ್‌ನಲ್ಲಿ ಕೆಕೆಆರ್ ಪರ ಅಮೋಘ ಆಟ ಪ್ರದರ್ಶಿಸಿದ್ದರು. ಅಲ್ಲದೆ ತಾವು ಆಡಿರುವ 15 ಪಂದ್ಯಗಳ 11 ಇನಿಂಗ್ಸ್‌ನ ಟಿ20 ಪಂದ್ಯದಲ್ಲೂ ರಿಂಕು ಸಿಂಗ್ 89 ಸರಾಸರಿಯಂತೆ 356 ರನ್ ಬಾರಿಸಿದ್ದರು. ಇದರಲ್ಲಿ ಎರಡು ಅರ್ಧ ಶತಕಗಳು ಒಳಗೊಂಡಿದ್ದವು.
ರಿಂಕು ಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಕ್ರಿಕೆಟಿಗನಾಗಿ ಹೊರಹೊಮ್ಮಿದರೂ ಇವರ ತಂದೆ ಕಾನ್‌ಚೆಂದ್ ಸಿಂಗ್ ಯಾವುದೇ ಹಮ್ಮು ಬಿಮ್ಮು ಇಲ್ಲದೆ ತಮ್ಮ ಪಟ್ಟಣದಲ್ಲಿ ಸಿಲಿಂಡರ್ ಸಾಗಿಸುವ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ.
ಉತ್ತರ ಪ್ರದೇಶದ ಅಲಿಘಡದಲ್ಲಿ ತಮ್ಮ ಸಣ್ಣ ಟ್ರಕ್‌ನಲ್ಲಿ ಸಿಲಿಂಡರ್ ಸಾಗಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಗ ಟೀಂ ಇಂಡಿಯಾ ಕ್ರಿಕೆಟಿಗನಾದರೂ ಸಿಲಿಂಡರ್ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
ತಂದೆಯ ಉದ್ಯೋಗದ ಬಗ್ಗೆ ರಿಂಕು ಇತ್ತೀಚಿಗಷ್ಟೆ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ್ದರು, “ನಾನು ನಮ್ಮ ತಂದೆಗೆ ಸಿಲಿಂಡರ್ ಸಾಗಿಸುವ ಕೆಲಸ ನಿಲ್ಲಿಸುವಂತೆ ಹೇಳಿದ್ದೆ. ಆದರೆ ತಮ್ಮ ಕೆಲಸ ಪ್ರೀತಿಸುವ ಕಾರಣ ಅವರು ತಮ್ಮ ಕಾಯಕ ಮುಂದುವರೆಸುತ್ತಿದ್ದಾರೆ. ಯಾರಾದರೂ ತಮ್ಮ ಜೀವನದುದ್ದಕ್ಕೂ ಕೆಲಸ ಮಾಡಿದ್ದರೆ ಅವರೆ ತಮ್ಮ ಸ್ವಇಚ್ಛೆಯಿಂದ ಕೆಲಸ ಬಿಡದ ಹೊರತು ನಮ್ಮಿಂದ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಉತ್ತರ ಪ್ರದೇಶದ ಅಲಿಘಡದಲ್ಲಿ ಜನಿಸಿದ್ದ ರಿಂಕು ಅವರನ್ನು ಕೆಕೆಆರ್ ತಂಡ 55 ಲಕ್ಷ ರೂ. ನೀಡಿ ಖರೀದಿಸಿತ್ತು. 2024ರಲ್ಲೂ ಮರಳಿ ಪಡೆದಿತ್ತು.
ರಿಂಕು ಬಗ್ಗೆ ಮಾತನಾಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಖ್ಯಾತ ಆಟಗಾರ ಎಬಿಡಿ ವಿಲಿಯರ್ಸ್, “ರಿಂಕು ಅದ್ಭುತ ಆಟಗಾರ. ಪಂದ್ಯ ಗೆಲ್ಲಿಸುವವ. ನೀವು ಯಾವಾಗಲು ನಿಮ್ಮ ತಂಡವನ್ನು ಪಂದ್ಯ ಗೆಲ್ಲಿಸಲು ಪ್ರಯತ್ನಿಸುವ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು” ಎಂದು ಹೇಳಿದ್ದರು.
Rinku Singh's father is seen supplying gas cylinders, Even as Rinku plays for India, his father continues his work as a gas cylinder provider.
Hardworking family 👏 pic.twitter.com/pjOrXOwG1K
— Vipin Tiwari (@Vipintiwari952_) January 26, 2024