ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್ ವಿರುದ್ಧ ವಾಗ್ವಾದ ನಡೆಸಿದ್ದಕ್ಕಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗೆ ಪಂದ್ಯದ ಶುಲ್ಕದ ಶೇ.50 ರಷ್ಟು ದಂಡವನ್ನು ವಿಧಿಸಲಾಗಿದೆ.
ಕೊಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದರು. ಬಾಲ್ ಸೊಂಟಕ್ಕಿಂತ ಮೇಲೆ ಬಂದ ಕಾರಣ ನೋಬಾಲ್ ಕೊಡಬೇಕಿತ್ತು ಎಂದು ಅಂಪೈರ್ ಜೊತೆ ಕೊಹ್ಲಿ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು.
ಹಾವ್ಕ್ ಐ ಪದ್ಧತಿಯ ಮೂಲಕ ಟಿವಿ ಅಂಪೈರ್ ಮೈಖಲ್ ಗಫ್ ಚೆಂಡು ಸೊಂಟದ ಮೇಲಿನಿಂದ ಹೆಚ್ಚು ದಾಟಿರಲಿಲ್ಲ,ಎಸೆತವು ಸಮಾಧಾನಕರವಾದ ಕಾರಣ ಕೊಹ್ಲಿ ಔಟ್ ಎಂದು ತೀರ್ಪು ಪ್ರಕಟಿಸಿದರು. ಇದಲ್ಲದೆ ಕೊಹ್ಲಿ ಮೈದಾನದಿಂದ ತೆರಳಿದ ನಂತರವೂ ಅಂಪೈರ್ ಜೊತೆ ಮಾತನಾಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ದಾರೆ, ಆದರೆ ಮೋದಿ ಅಲೆ ಇಲ್ಲ
ವಿರಾಟ್ ಕೊಹ್ಲಿ ಅವರು ಕೊಲ್ಕತ್ತ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣ ಅವರ ಪಂದ್ಯದ ಶುಲ್ಕದ ಶೇ.50 ರಷ್ಟು ಭಾಗವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಐಪಿಎಲ್ ನೀತಿ ಸಂಹಿತೆಯ ಸಂವಿಧಾನ 2.8ರಡಿಯ ಹಂತ 1ರ ಅಪರಾಧಕ್ಕೆ ಕೊಹ್ಲಿ ಬದ್ಧರಾಗಿರುತ್ತಾರೆ. ಇವರು ತಾವು ಮಾಡಿದ ತಪ್ಪನ್ನು ಮ್ಯಾಚ್ ರೆಫ್ರಿ ಅವರೊಂದಿಗೆ ಒಪ್ಪಿಕೊಂಡಿರುತ್ತಾರೆ.ನೀತಿ ಸಂಹಿತೆ ಉಲ್ಲಂಘನೆಯ ಹಂತ 1ರ ಪ್ರಕಾರ ಮ್ಯಾಚ್ ರೆಫ್ರಿ ನಿರ್ಧಾರವು ಅಂತಿಮವಾಗಿರುತ್ತದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆಯ ಸಂವಿಧಾನ 2.8ರಡಿಯ ಹಂತ 1 ಅಂಪೈರ್ ನಿರ್ಧಾರದೊಂದಿಗಿನ ನಡವಳಿಕೆಯನ್ನು ತೋರಿಸುತ್ತದೆ.
ಈ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್ ವಿರುದ್ಧ 1 ರನ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು.
