ಐಪಿಎಲ್‌ನಲ್ಲಿ ಸತತ 17ನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಲು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಿದ್ದಾರೆ. ಅಂದಹಾಗೆ ಸರಣಿಯ ಮೊದಲ ಪಂದ್ಯದಲ್ಲೇ ತಮ್ಮ ವೃತ್ತಿಜೀವನದ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(21) ಕಡಿಮೆ ಮೊತ್ತಕ್ಕೆ ಗಳಿಸಿದರೂ ಕೂಡ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದು, T20 ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
First Indian to reach the 12000 T20 runs milestone 🫡#PlayBold #ನಮ್ಮRCB #IPL2024 #CSKvRCB #ViratKohli pic.twitter.com/Dh5rCn6nzl
— Royal Challengers Bengaluru (@RCBTweets) March 22, 2024
ವಿರಾಟ್ ಕೊಹ್ಲಿ, ಕೇವಲ 6 ರನ್ ಗಳಿಸುತ್ತಿದ್ದಂತೆ, T20 ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಈ ಸ್ವರೂಪದಲ್ಲಿ ಅತಿ ಹೆಚ್ಚು ರನ್ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14,562 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ 377ನೇ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 12000 ರನ್‌ಗಳಲ್ಲಿ 8 ಶತಕ ಮತ್ತು 91 ಅರ್ಧ ಶತಕಗಳೂ ಸೇರಿವೆ. ಜೊತೆಗೆ 1074 ಬೌಂಡರಿ ಮತ್ತು 371 ಸಿಕ್ಸರ್ ಕೂಡ ಇದೆ. ಕೊಹ್ಲಿ ಗಳಿಸಿರುವ 12,000 ರನ್‌ಗಳಲ್ಲಿ ಅವರು ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಮತ್ತು ಚಾಂಪಿಯನ್ಸ್ ಲೀಗ್ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಗಳಿಸಿದ ರನ್ ಸಹ ಸೇರಿದೆ.
Milestone unlocked 🔓
Virat Kohli has now completed 1000 IPL runs against the formidable #CSK 👍 👍
Follow the match ▶️ https://t.co/4j6FaLF15Y #TATAIPL | #CSKvRCB | @imVkohli | @RCBTweets pic.twitter.com/HTciu3qZHW
— IndianPremierLeague (@IPL) March 22, 2024
426 ಪಂದ್ಯಗಳಲ್ಲಿ 11,156 ರನ್ ಗಳಿಸಿರುವ ರೋಹಿತ್ ಶರ್ಮಾ, 329 ಪಂದ್ಯಗಳಲ್ಲಿ 9,645 ರನ್ ಗಳಿಸಿರುವ ಶಿಖರ್ ಧವನ್ ಟೀಮ್ ಇಂಡಿಯಾದ ಪರವಾಗಿ ನಂತರದ ಸ್ಥಾನದಲ್ಲಿದ್ದಾರೆ. ಇದೇ ವೇಳೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1,000 ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ.
T20 ಕ್ರಿಕೆಟ್‌ನಲ್ಲಿ 12 ಸಾವಿರಕ್ಕಿಂತಲೂ ಹೆಚ್ಚು ರನ್ ಪೂರೈಸಿದ ಇತರೆ ಬ್ಯಾಟರ್‌ಗಳು
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 463 ಪಂದ್ಯಗಳು – 14,562 ರನ್
- ಶೋಯೆಬ್ ಮಲಿಕ್ (ಪಾಕಿಸ್ತಾನ)-542 ಪಂದ್ಯಗಳು- 13,360 ರನ್
- ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್)- 660 ಪಂದ್ಯಗಳು- 12,900 ರನ್
- ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)- 449 ಪಂದ್ಯಗಳು- 12,319 ರನ್
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 370 ಪಂದ್ಯಗಳು- 12,319 ರನ್
- ವಿರಾಟ್ ಕೊಹ್ಲಿ (ಭಾರತ)- 376 ಪಂದ್ಯಗಳು- 12,015* ರನ್
