ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ರಿಚಾ ಘೋಷ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಶುಭಾರಂಭಗೈದಿದೆ.
ಡಬ್ಲ್ಯೂಪಿಎಲ್ 2025ರ ಮೊದಲ ಪಂದ್ಯದಲ್ಲಿ ಟಾಸ್ ಸೋತಿದ್ದರೂ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, 201 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆರ್‌ಸಿಬಿ ವನಿತೆಯರ ತಂಡ, 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದ ಬೀಗಿದೆ. ರಿಚಾ ಘೋಷ್ ಬಿರುಸಿನ ಅರ್ಧಶತಕ ಸಿಡಿಸುವ ಮೂಲಕ ಆರ್‌ಸಿಬಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
𝗠𝗼𝗺𝗲𝗻𝘁 𝗼𝗳 𝗕𝗿𝗶𝗹𝗹𝗶𝗮𝗻𝗰𝗲 👌👌
— Women's Premier League (WPL) (@wplt20) February 14, 2025
Richa Ghosh does it in style for #RCB 😍
This is also the highest successful run-chase in #TATAWPL history🔥
Scorecard👉 https://t.co/jjI6oXJcBI #GGvRCB | @RCBTweets pic.twitter.com/9Ea3gJ6JP1
ಗುಜರಾತ್ ಜೈಂಟ್ಸ್ ಮೊದಲು ಸ್ಫೋಟಕ ಬ್ಯಾಟಿಂಗ್ ನಡೆಸಿ 4 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ಗುಜರಾತ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಎಲಿಸಾ ಪೆರಿ ಹಾಗೂ ಮತ್ತು ರಿಚಾ ಘೋಷ್ ಅವರ ಅರ್ಧಶತಕದ ನೆರವಿನಿಂದ 18.3 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 9 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟುವ ಮೂಲಕ 6 ವಿಕೆಟ್‌ಗಳ ಜಯ ಸಾಧಿಸಿತು.
ಗುಜರಾತ್ ಪರ ನಾಯಕಿ ಆಶ್ಲೇ ಗಾರ್ಡ್ನರ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 213.51 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 79 ರನ್ ಗಳಿಸಿದರು. ಅವರಲ್ಲದೆ, ಬೆತ್ ಮೂನಿ ಕೂಡ ಅರ್ಧಶತಕ ಗಳಿಸಿದರು. ಮೂನಿ 42 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 52 ರನ್ ಗಳಿಸಿದರು.
Here are the winners of the #CurvvSuperStriker of the Match, #SintexSixesoftheMatch and #HerbalifeActiveCatchOfTheMatch awards 👌👌@TataMotors_Cars | @Sintex_BAPL_Ltd | #SintexTanks | @Herbalife pic.twitter.com/T6PPB0fLRB
— Women's Premier League (WPL) (@wplt20) February 14, 2025
ಕೊನೆಯಲ್ಲಿ ಡಿಯಾಂಡ್ರಾ ಡಾಟಿನ್ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 25 ರನ್‌ಗಳ ಕೊಡುಗೆ ನೀಡಿದರು. ಲಾರಾ ವೋಲ್ವಾರ್ಡ್ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರೆ, ದಯಾಲನ್ ಹೇಮಲತಾ 4 ರನ್ ಗಳಿಸಿ ಔಟಾದರು.
ಆರ್‌ಸಿಬಿ ಪರ ರೇಣುಕಾ ಸಿಂಗ್ 25 ರನ್‌ಗಳಿಗೆ 2 ವಿಕೆಟ್ ಪಡೆದರೆ, ಕನಿಕಾ ಅಹುಜಾ 19 ರನ್‌ಗಳಿಗೆ 1 ವಿಕೆಟ್ ಪಡೆದರು. ಪೆರಿ-ರಿಚಾ ಅಬ್ಬರ ಆರ್‌ಸಿಬಿ ಪರ ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್-ಹಾಡ್ಜ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಗುಜರಾತ್ ನಾಯಕಿ ಆಶ್ಲೇ ಗಾರ್ಡ್ನರ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು.
ಆರ್‌ಸಿಬಿ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಅವರು 2 ವಿಕೆಟ್‌ಗಳನ್ನು ಪಡೆದು ಆರಂಭಿಕ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಗಾರ್ಡ್ನರ್ ಮೊದಲು ಸ್ಮೃತಿ (9) ಮತ್ತು ನಂತರ ಹಾಡ್ಜ್ (4) ಔಟ್ ಮಾಡಿದರು. ಈ ಹಂತದಲ್ಲಿ ಆರ್‌ಸಿಬಿ 14 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಸಂಕಷ್ಟದಲ್ಲಿದ ಆರ್‌ಸಿಬಿಗೆ ನೆರವಾದ ಎಲ್ಲಿಸ್ ಪೆರಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 34 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 57 ರನ್‌ಗಳ ಅರ್ಧಶತಕ ಗಳಿಸಿದರೆ, ರಾಘವಿ ಬಿಸ್ಟ್ 25 ರನ್‌ಗಳ ಕೊಡುಗೆ ನೀಡಿ ತಂಡದ ಸ್ಕೋರ್ ಅನ್ನು 100 ರನ್‌ಗಳಿಗೆ ಕೊಂಡೊಯ್ದರು.
ಆರ್‌ಸಿಬಿ ತಂಡವು 109 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಎಲಿಸಾ ಅವರು ಔಟಾಗುತ್ತಿದ್ದಂತೆ ತಂಡದಲ್ಲಿ ಸೋಲಿನ ಛಾಯೆ ಕಂಡಿತ್ತು. ಆದರೆ, ಅದನ್ನು ದೂರ ಮಾಡುವಲ್ಲಿ ರಿಚಾ ಯಶಸ್ವಿಯಾದರು. ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ಬೌಲರ್‌ಗಳನ್ನು ಕಂಗೆಡಿಸಿದರು. ಅವರಿಗೆ ಕನಿಕಾ ಅಹುಜಾ (ಔಟಾಗದೇ 30;13 ಎಸೆತ) ಜೊತೆ ನೀಡಿದರು. 237ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ರಿಚಾ ಘೋಷ್, 201 ರನ್‌ಗಳ ಗುರಿಯನ್ನು ಬೆನ್ನಟ್ಟಿ ಆರ್‌ಸಿಬಿ ಪರ ರಿಚಾ ಫಿನಿಷರ್ ಪಾತ್ರ ನಿರ್ವಹಿಸಿದರು. ಆ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಗರಿಷ್ಢ ಮೊತ್ತದ ಗುರಿಯನ್ನು ತಲುಪಿದ ಕೀರ್ತಿಗೆ ಆರ್‌ಸಿಬಿ ಪಾತ್ರವಾಗಿದೆ.
Tough chase, but we are tougher than that! 💪
— Royal Challengers Bengaluru (@RCBTweets) February 14, 2025
🚨 Record broken in our 1️⃣st game of #WPL2025! 💀#PlayBold #ನಮ್ಮRCB #SheIsBold #GGvRCB pic.twitter.com/Z9gOZf3axc
27 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 64 ರನ್ ಬಾರಿಸಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಘೋಷ್, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತುಗೆ ಭಾಜನರಾದರು. ಗುಜರಾತ್ ಪರ ಅರ್ಧಶತಕ ಗಳಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಆಶ್ಲೇ ಗಾರ್ಡ್ನರ್, ಬೌಲಿಂಗ್ ಮಾಡಿ 2 ವಿಕೆಟ್ ಪಡೆದರು. ಸಯಾಲಿ ಹಾಗೂ ದೊಟ್ಟಿನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
