ಸಾಲ ತೀರಿಸಲು ಎಳನೀರು ಕದ್ದು ಮಾರಾಟ ಮಾಡುತ್ತಿದ್ದ ಕಳನೊಬ್ಬನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಬಂಧಿತ ಆರೋಪಿ. ಈತ ಕಳೆದ ಮೂರು ತಿಂಗಳಿನಿಂದ ಎಳನೀರು ಕದ್ದು ಮಾರಾಟ ಮಾಡುತ್ತಿದ್ದನು. ಆದರೆ, ಇದುವರೆಗೂ ಯಾರು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ರಾಜಣ್ಣ ಎಂಬುವವರು ಮಾರಾಟ ಮಾಡಲು 12 ಸಾವಿರ ಎಳನೀರು ತಂದಿದ್ದರು. ಈ ಎಳನೀರು ಕಳ್ಳತನವಾದ ಬಳಿಕ ರಾಜಣ್ಣ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಮೋಹನ್ ಈ ಹಿಂದೆ ಎಳನೀರು ವ್ಯಾಪರಸ್ಥನಾಗಿದ್ದನು. ರಮ್ಮಿ ಆಟವಾಡಿ ಲಕ್ಷಾಂತರ ರೂಪಾಯಿ ಸಾಲವನ್ನು ತಲೆಯ ಮೇಲೆ ಹಾಕಿಕೊಂಡಿದ್ದನು. ಬಳಿಕ, ಸಾಲ ತೀರಿಸಲು ಬಾಡಿಗೆ ಕಾರ್ ತೆಗೆದುಕೊಂಡು ಓಡಿಸುತ್ತಿದ್ದನು. ಈ ವೇಳೆ, ರಸ್ತೆ ಪಕ್ಕ ಟಾರ್ಪಲ್ ಹಾಕಿ ಮುಚ್ಚಿದ ಎಳನೀರು ಮೋಹನ್ ಕಣ್ಣಿಗೆ ಬಿದ್ದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಆರೋಪ
ಈ ವೇಳೆ, ಆತ ಎಳನೀರು ಕದ್ದು ಹಣ ಮಾಡುವ ಯೋಜನೆ ಹಾಕಿದ್ದಾನೆ. ಸತತ ಮೂರು ತಿಂಗಳಿನಿಂದ ಆರೋಪಿ ಮೋಹನ್ ಬೆಂಗಳೂರಿನಲ್ಲಿ ನಿತ್ಯ 100 ಎಳನೀರು ಕಳ್ಳತನ ಮಾಡಿ ಕ್ಯಾಬ್‌ನಲ್ಲಿ ಹಾಕಿಕೊಂಡು ಹೋಗುತ್ತಿದ್ದನು. ಬಳಿಕ, ಹೊರಗಡೆ ಮಾರಾಟ ಮಾಡುತ್ತಿದ್ದನು.
ಬಂಧಿತನಿಂದ ಪೊಲೀಸರು ಕಳ್ಳತನಕ್ಕೆ ಬಳಸಿದ್ದ ಕಾರು, ಒಂದು ಎನ್ ಫೀಲ್ಡ್ ಬೈಕ್ ಸಹಿತ 8 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.