ಯುವತಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೇಕು ಬೇಕು ಅಂತಲೇ ಟಚ್ ಮಾಡಿ ವಿಕೃತಿ ಮೆರೆಯುತ್ತಿದ್ದ ಕಾಮುಕ ಯುವಕರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ವಿಜಯನಗರದ ನಮ್ಮೂಟ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.
ವಿಜಯನಗರ ಆರ್ಪಿಸಿ ಲೇಔಟ್ನಲ್ಲಿರುವ ನಮ್ಮೂಟ ಹೋಟೆಲ್‌ನಲ್ಲಿ 2023 ಡಿಸಂಬರ್ 30 ರ ಸಂಜೆ 7.30 ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನವರಿ 10 ರಂದು ಈ ಘಟನೆಗೆ ಸಂಬಂಧಿಸಿದಂತೆ, ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಹೋಟೆಲ್ ಬಳಿ ಇದ್ದ ಯುವತಿಗೆ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದಾರೆ. ಬೇಕು ಬೇಕಂತಲೇ ಯುವತಿಯರನ್ನು ಟಚ್ ಮಾಡಿ ವಿಕೃತಿ ಮೆರೆದಿದ್ದಾರೆ.
ಹೋಟೆಲ್ ಗೆ ಬಂದ ಮೂವರು ಹುಡುಗರು ದೋಸೆ ತಿನ್ನುತ್ತ ಅಲ್ಲಿಯೇ ನಿಂತು ಹರಟೆ ಹೊಡೆಯುತ್ತಿದ್ದರು. ಯುವತಿಯನ್ನ ಟಚ್ ಮಾಡೋ ಮೊದಲು ಮೂವರು ಕಾಮುಕರು ಪ್ಲಾನ್ ಮಾಡಿದ್ದಾರೆ. ಒಬ್ಬ ಟಚ್ ಮಾಡೋ ಉದ್ದೇಶದಿಂದ ಹೋಗುತ್ತಾನೆ. ಯುವತಿಯ ಹಿಂಬದಿಗೆ ಕೈನಿಂದ ಹೊಡೆದು ಅನುಚಿತ ವರ್ತನೆ ತೋರಿದ್ದಾನೆ. ಇನ್ನಿಬ್ಬರು ದೂರ ನಿಂತು ವಾಚ್ ಮಾಡಿದ್ದಾರೆ. ಹೊಟೇಲ್‌ಗೆ ಬಂದ ಯುವತಿಯನ್ನು ಟಚ್ ಮಾಡಿ ಬಳಿಕ ಗಲಾಟೆ ಮಾಡುತ್ತಾರೆ. ಯುವತಿ ಯುವಕರ ಜೊತೆ ಗಲಾಟೆ ಮಾಡಿ ಕೂಗಾಡಿದ್ದು, ಸ್ಥಳೀಯರೆಲ್ಲರೂ ಜಮಾಯಿಸಿದ್ದಾರೆ ಬೇಕು ಬೇಕಂತಲೇ ಟಚ್ ಮಾಡಿ ಯುವಕರ ಪುಂಡಾಟ ಮೆರೆದಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನ ಸೇರುತ್ತಿದ್ದಂತೆ ಮೂವರು ಯುವಕರು ಪರಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಜ.19ರಂದು ಪ್ರಧಾನಿ ಮೋದಿ ಆಗಮನ; ಸಂಚಾರ ಮಾರ್ಗ ಬದಲಾವಣೆಯ ವಿವರ ಇಲ್ಲಿದೆ
ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.