ಶಾಲಾ ವಿದ್ಯಾರ್ಥಿನಿಯರ ಸಮವಸ್ತ್ರ: ಸ್ಕರ್ಟ್‌ ಬದಲಿಗೆ ಚೂಡಿದಾರ ಕಡ್ಡಾಯಕ್ಕೆ ಕೆಎಸ್​​ಸಿಪಿಸಿಆರ್ ಪ್ರಸ್ತಾವನೆ

Date:

Advertisements

ಭದ್ರತೆ ಮತ್ತು ಹಿತದೃಷ್ಟಿಯಿಂದ​ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಸ್ಕರ್ಟ್​​​ ಬದಲು ಪ್ಯಾಂಟ್ ಅಥವಾ ಚೂಡಿದಾರ (ಸಲ್ವಾರ್ ಸೂಟ್‌) ಸಮವಸ್ತ್ರ ಕಡ್ಡಾಯಗೊಳಿಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದೆ.

“ಶಾಲೆಗಳಲ್ಲಿ ಸೂಚಿಸಲಾದ ಸಮವಸ್ತ್ರದ ನಿಯಮಗಳು ಮತ್ತು ನಿಬಂಧನೆಗಳನ್ನು ಮರುಪರಿಶೀಲಿಸಿ ಬಾಲಕಿಯರ ಒಟ್ಟಾರೆ ಅಭಿವೃದ್ಧಿಗಾಗಿ ಸಮವಸ್ತ್ರದ ನಿಯಮಗಳಲ್ಲಿ ಬದಲಾವಣೆ ಮಾಡಿ” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೇಳಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ಪ್ರಕಾರ, ಶೈಕ್ಷಣಿಕ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಶಿಫಾರಸು ಮಾಡಲು ಸ್ವತಂತ್ರವಾಗಿವೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಗಂಡುಮಕ್ಕಳಿಗೆ ಶರ್ಟ್, ಚಡ್ಡಿ (ಶಾರ್ಟ್ಸ್) ಅಥವಾ ಪ್ಯಾಂಟ್‌ಗಳನ್ನು ಸೂಚಿಸಿದರೆ, ಹೆಚ್ಚಿನ ಖಾಸಗಿ ಶಾಲಾ ಆಡಳಿತಗಳು ಹುಡುಗಿಯರಿಗೆ ಸ್ಕರ್ಟ್‌ಗಳನ್ನು ಸೂಚಿಸಿವೆ.

Advertisements

ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಚೂಡಿದಾರಗಳನ್ನು ಧರಿಸುವುದು ಕಡ್ಡಾಯವಾಗಿದೆ. ಎಲ್ಲ ಸರ್ಕಾರಿ, ಅನುದಾನಿತ ಮತ್ತು ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಧರಿಸುವುದು ಸಮವಸ್ತ್ರದ ಒಂದು ಭಾಗವಾಗಿದೆ. ಆದರೆ‌, ಅವರು ಬಸ್‌ಗಳಲ್ಲಿ ಪ್ರಯಾಣಿಸುವಾಗ, ಜನಸಂದಣಿಯಲ್ಲಿ ನಡೆಯುವಾಗ, ಸೈಕಲ್ ತುಳಿಯುವಾಗ ಮತ್ತು ಮೈದಾನದಲ್ಲಿ ಆಟವಾಡುವಾಗ ಅನಾನುಕೂಲತೆಯ ಅನುಭವವಾಗುತ್ತದೆ. ಈ ಬಗ್ಗೆ ಅವರು ನಮಗೆ ದೂರು ನೀಡಿದ್ದಾರೆ. ಹುಡುಗಿಯರ ಮೇಲೆ ಹಲವಾರು ರೀತಿಯ ಲೈಂಗಿಕ ಕಿರುಕುಳ ಪ್ರಕರಣಗಳನ್ನು ನಾವು ನೋಡಬಹುದು. ಹಾಗಾಗಿ, ಭದ್ರತೆ ಮತ್ತು ಹಿತದೃಷ್ಟಿಯಿಂದ ವಿದ್ಯಾರ್ಥಿನಿಯರು ಸ್ಕರ್ಟ್‌ಗಳ ಬದಲಿಗೆ ಪ್ಯಾಂಟ್ ಮತ್ತು ಚೂಡಿದಾರಗಳನ್ನು ಧರಿಸುವುದು ಉತ್ತಮ. ಇದು ಸಾರ್ವಜನಿಕ ಅಭಿಪ್ರಾಯವೂ ಹೌದು ಎಂದು ಕಲಬುರಗಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕೆಎಸ್‌ಸಿಪಿಸಿಆರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ನೀಡಿರುವ ಪ್ರಸ್ತಾವನೆಯನ್ನು ಕೆಎಸ್‌ಸಿಪಿಸಿಆರ್‌ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಡಿಎಸ್‌ಇಎಲ್‌ಗೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

“ವಿದ್ಯಾರ್ಥಿನಿಯರು ಕುಳಿತುಕೊಳ್ಳುವಾಗ, ಆಡುವಾಗ, ಸೈಕಲ್ ತುಳಿಯುವಾಗ ಮತ್ತು ಇತರ ಚಟುವಟಿಕೆಗಳಲ್ಲಿ ಸ್ಕರ್ಟ್ ಅಹಿತಕರವಾಗಿರುತ್ತದೆ. ಹದಿಹರೆಯದ ಗರ್ಭಧಾರಣೆ, ಹೆಣ್ಣುಮಕ್ಕಳ ಲೈಂಗಿಕ ಕಿರುಕುಳದ ಹಲವು ಪ್ರಕರಣಗಳನ್ನು ನಾವು ಶಾಲೆಯಲ್ಲಿ ಮತ್ತು ಅದರ ಹೊರಗೆ ನೋಡಬಹುದು. ಆದ್ದರಿಂದ, ನಾವು ಈ ವಿಷಯದ ಬಗ್ಗೆ ವಿದ್ಯಾರ್ಥಿನಿಯರ ಅಭಿಪ್ರಾಯವನ್ನು ಸಂಗ್ರಹಿಸಿದ್ದೇವೆ. ಸ್ಕರ್ಟ್​​​​ಗಿಂತ ಪ್ಯಾಂಟ್ ಅಥವಾ ಚೂಡಿದಾರ ಧರಿಸುವುದು ಉತ್ತಮ ಎಂದು ಹೆಚ್ಚಿನ ವಿದ್ಯಾರ್ಥಿನಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ನಾವು ಡಿಎಸ್‌ಇಎಲ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಕೆಎಸ್‌ಸಿಪಿಸಿಆರ್‌ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ಶಿಕ್ಷಕಿ ವರ್ಗಾವಣೆ: ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ

“ಶಾಲೆಯಲ್ಲಿ ಸ್ಕರ್ಟ್ ಧರಿಸಲು ನಮಗೆ ಯಾವುದೇ ತೊಂದರೆ ಇಲ್ಲ. ಇದು ಅಹಿತಕರವೆಂಬ ಭಾವನೆ ನಮಗೆ ಎಂದಿಗೂ ಬಂದಿಲ್ಲ. ನಾವು ಆಟ ಆಡುವಾಗ, ನಾವು ಕ್ರೀಡಾ ಉಡುಗೆ ಧರಿಸುತ್ತೇವೆ. ಹುಡುಗಿಯರಿಗೆ ಕಿರುಕುಳ ನೀಡಲು ಸ್ಕರ್ಟ್ ಧರಿಸುವುದು ಮಾತ್ರ ಕಾರಣವೆಂದು ನನಗೆ ಅನಿಸುವುದಿಲ್ಲ” ಎಂದು ಬೆಂಗಳೂರಿನ ಎಲೈಟ್ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸರ್ಕಾರವು ನಮಗೆ ಸಮವಸ್ತ್ರವಾಗಿ ಚೂಡಿದಾರಗಳನ್ನು ನೀಡುತ್ತಿದೆ. ಈ ಸಮವಸ್ತ್ರ ಧರಿಸಲು ತುಂಬಾ ಆರಾಮದಾಯಕವಾಗಿದೆ. ಹದಿಹರೆಯದ ಹುಡುಗಿಯರಿಗಾಗಿ, ಸುರಕ್ಷತೆ ಮತ್ತು ರಕ್ಷಣೆ ಪ್ರಮುಖ ಅಂಶಗಳಾಗಿವೆ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಾಲೆಯ ಬಾಲಕಿಯೊಬ್ಬರು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X