ಎಲಾನ್ ಮಸ್ಕ್‌ ಒಡೆತನದ ಬಳಿಕ ಗಣನೀಯವಾಗಿ ಕಡಿಮೆಯಾಗುತ್ತಿರುವ ಟ್ವಿಟ್ಟರ್ ಬಳಕೆದಾರರ ಸಂಖ್ಯೆ!

Date:

Advertisements
  • ಸಿಎನ್‌ಬಿಸಿಯ ಜೂಲಿಯಾ ಬೋರ್‌ಸ್ಟಿನ್ ಅವರೊಂದಿಗಿನ ಸಂದರ್ಶನದ ವೇಳೆ ಮಾಹಿತಿ ನೀಡಿದ ಸಿಇಒ
  • ಈ ಹಿಂದೆ ‘200 ರಿಂದ 250 ಮಿಲಿಯನ್ ದೈನಂದಿನ ಬಳಕೆದಾರ ಉಲ್ಲೇಖಿಸಿದ್ದ ಲಿಂಡಾ ಯಾಕರಿನೊ

ಎಲಾನ್ ಮಸ್ಕ್‌ ಒಡೆತನದ ಬಳಿಕ ಟ್ವಿಟ್ಟರ್‌ನ ದೈನಂದಿನ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ವಿಚಾರವನ್ನು ಈಗಿನ ‘ಎಕ್ಸ್‌’ ಸಂಸ್ಥೆಯ(ಹಿಂದಿನ ಟ್ವಿಟ್ಟರ್) ಸಿಇಒ ಲಿಂಡಾ ಯಾಕರಿನೊ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ವೋಕ್ಸ್ ಮೀಡಿಯಾದ ಕೋಡ್ 2023 ಕಾರ್ಯಕ್ರಮದಲ್ಲಿ ಸಿಎನ್‌ಬಿಸಿಯ ಜೂಲಿಯಾ ಬೋರ್‌ಸ್ಟಿನ್ ಅವರೊಂದಿಗಿನ ಸಂದರ್ಶನದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಲಿಂಡಾ, ‘ಈ ಹಿಂದೆ ನಾನು ಸಿಎನ್‌ಬಿಸಿಗೆ ನೀಡಿದ್ದ ಸಂದರ್ಶನದಲ್ಲಿ 250 ಮಿಲಿಯನ್ ದೈನಂದಿನ ಬಳಕೆದಾರರು ಇದ್ದ ಬಗ್ಗೆ ತಿಳಿಸಿದ್ದೆ. ಕಂಪನಿಯು ಪ್ರಸ್ತುತ 225 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತಿಂಗಳಿಗೆ ಸುಮಾರು 540 ಮಿಲಿಯನ್ ಬಳಕೆದಾರರು ಇದ್ದಾರೆ” ಎಂದು ತಿಳಿಸಿದ್ದಾರೆ.

ಆ ಮೂಲಕ ಟ್ವಿಟರ್ ಅನ್ನು ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳುವ ಮೊದಲು ಇದ್ದ ಹತ್ತಾರು ಮಿಲಿಯನ್ ಬಳಕೆದಾರರಲ್ಲಿ ಕುಸಿತವಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

Advertisements
x ceo lynda

ಸುಮಾರು 45 ನಿಮಿಷಗಳ ಸುದೀರ್ಘ ಸಂದರ್ಶನ ನೀಡಿರುವ ‘ಎಕ್ಸ್‌’ ಸಿಇಒ ಲಿಂಡಾ ಯಾಕರಿನೊ, 2024ರಲ್ಲಿ ಸಂಸ್ಥೆಗೆ ಲಾಭದಾಯಕ ವರ್ಷವಾಗಲಿದೆ. ಅದನ್ನು ಸಾಧಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ. ನಾವು ಈಗ ಅದೇ ವ್ಯವಹಾರದಲ್ಲಿ ಮುಳುಗಿದ್ದೇವೆ. 2024ರ ಆರಂಭದಲ್ಲಿ ಅದರ ಸೂಚನೆ ಸಿಗಲಿದೆ” ಎಂದು ಕೋಡ್ ಕಾನ್ಫರೆನ್ಸ್‌ನ ವೇದಿಕೆಯಲ್ಲಿ ಸಿಇಒ ಲಿಂಡಾ ಯಾಕರಿನೊ ತಿಳಿಸಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಸರಣಿ ಟ್ವೀಟ್‌ಗಳ ಮೂಲಕ ಪ್ರತಿದಿನದ ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಸ್ವತಃ ಪೋಸ್ಟ್ ಮಾಡಿದ್ದ ಎಲಾನ್ ಮಸ್ಕ್, ‘ಟ್ವಿಟರ್ 254.5 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ” ಎಂದಿದ್ದರು.

ಆದಾಗ್ಯೂ, ಕಂಪನಿಯು ತನ್ನ ಸ್ವಾಧೀನದ ನಂತರ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಎಷ್ಟು ಬೆಳವಣಿಗೆ ನಡೆದಿದೆ ಎಂಬುದನ್ನು ಎಲ್ಲೂ ವಿವರ ಲಭ್ಯವಾಗಿಲ್ಲ.

ಟ್ವಿಟ್ಟರ್ ಅನ್ನು 2022ರ ಅಕ್ಟೋಬರ್‌ನಲ್ಲಿ ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಟೆಸ್ಲಾ ಕಂಪೆನಿಯ ಮಾಲೀಕ ಎಲಾನ್ ಮಸ್ಕ್, ಮೈಕ್ರೋಬ್ಲಾಗಿಂಗ್ ಫ್ಲ್ಯಾಟ್‌ಫಾರ್ಮ್​ನಲ್ಲಿ ಹಲವು ಬದಲಾವಣೆ ಮಾಡುತ್ತಿದ್ದಾರೆ.

ಈ ಹಿಂದೆ ಟ್ವಿಟ್ಟರ್​ನಲ್ಲಿದ್ದ ನೀಲಿ ಹಕ್ಕಿಯ ಲೋಗೋ ಈಗ ಇಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಎಂದು ಬರೆದಿರುವ ಲೋಗೋ ಹಾಗೂ ಟ್ವಿಟರ್ ಟ್ವಿಟರ್ ಬದಲು ‘ಎಕ್ಸ್’ ಎಂದು ಮರುನಾಮಕರಣ ಮಾಡಿದ್ದರು.

“ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ” ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿ ತಿಳಿಸಿದ್ದ ಬೆನ್ನಲ್ಲೇ ಲೋಗೋ ಹಾಗೂ ಬ್ರಾಂಡ್ ಹೆಸರು ಬದಲಾಯಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X