ಚೀನಾದಲ್ಲಿರುವ ಗೂಗಲ್‌ನ ಪಿಕ್ಸೆಲ್‌ ಮೊಬೈಲ್ ಘಟಕ ಶೀಘ್ರದಲ್ಲೇ ಭಾರತಕ್ಕೆ ಆಗಮನ!

Date:

Advertisements

ವಿಶ್ವದ ನಂಬರ್ ಒನ್‌ ಸರ್ಚ್‌ ಇಂಜಿನ್‌ ಸಂಸ್ಥೆ ಗೂಗಲ್, ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಿಡಿಭಾಗಗಳ ಜೋಡಣಾ ಘಟಕವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಸಿದ್ಧತೆ ನಡೆಸುತ್ತಿದೆ.

ಭಾರತದಲ್ಲಿ ಪಿಕ್ಸೆಲ್ ಫೋನ್ ಉತ್ಪಾದನೆಗೆ ಸಂಭಾವ್ಯ ಪಾಲುದಾರರಾಗಿ ಫಾಕ್ಸ್ಕಾನ್ ಟೆಕ್ನಾಲಜೀ ಸ್ ಇಂಡಿಯಾ ಯೂನಿಟ್ ಭಾರತ್ ಎಫ್ಐಎಚ್ ಜತೆ ಗೂಗಲ್‌ ಸಂಸ್ಥೆ ಮಾತುಕತೆ ನಡೆಸಿದೆ. ಈ ಪ್ರಮುಖ ಬದಲಾವಣೆಗೆ ವಾಷಿಂಗ್ಟನ್ ಹಾಗೂ ಬೀಜಿಂಗ್ ನಡುವಿನ ರಾಜಕೀಯ ವೈಷಮ್ಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಭಾರತದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗೂಗಲ್ ಸಿಇಒ ಸುಂದರ ಪಿಚೈ ಅವರನ್ನು ಕ್ಯಾಲಿಫೋರ್ನಿಯಾದ ಮೌಂಟೈ ನ್ ವ್ಯೂದಲ್ಲಿರುವ ಕಂಪನಿಯ ಕಚೇರಿಯಲ್ಲಿ ಭೇಟಿ ಮಾಡಿದ್ದರು.

Advertisements

ಈ ಸುದ್ದಿ ಓದಿದ್ದೀರಾ? ಅನಾಮಿಕ ಸ್ಪ್ಯಾಮ್ ಕರೆಗಳಿಂದ ರಕ್ಷಣೆಗೆ ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್

ಭಾರತದಲ್ಲಿ ಉತ್ಪನ್ನಗಳ ತಯಾರಿಕೆ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಪಿಚೈ ಅವರಿಗೆ ಈ ಸಂದರ್ಭದಲ್ಲಿ ವಿವರಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಗೂಗಲ್‌ನ ಕೆಲ ಹಿರಿಯ ಅಧಿಕಾರಿಗಳು ಭಾರತ ಪ್ರವಾಸ ಕೈಗೊಂಡಿದ್ದಾರೆ. ಸ್ಥಳೀಯ ಸಂಪನ್ಮೂಲ, ತಯಾರಿಕಾ ವಾತಾವರಣ ಹಾಗೂ ಸೂಕ್ತ ಪಾಲುದಾರರಿಗೆ ಹುಡುಕಾಟ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಹಾಗೂ ವಿಯಟ್ನಾಂನಲ್ಲಿ ತಯಾರಿಕಾ ಘಟಕಗಳನ್ನು ಹೊಂದಿರುವ ಗೂಗಲ್, ಕಳೆದ ವರ್ಷ ಸುಮಾರು 9 ದಶಲಕ್ಷ ಪಿಕ್ಸೆಲ್ ಫೋನ್‌ಗಳನ್ನು ತಯಾರಿಸಿದೆ. ಫೋನುಗಳ ಬಿಡಿಭಾಗಗಳನ್ನು ಸ್ಥಳೀಯವಾಗಿ ಜೋಡಿಸುವ ಕಾರ್ಯ ಯಶಸ್ವಿಯಾದಲ್ಲಿ ಫೋನುಗಳ ಮಾರಾಟವೂ ಹೆಚ್ಚಾಗಲಿದೆ. ಜತೆಗೆ, ಗೂಗಲ್‌ನ ಇತರ ತಂತ್ರಜ್ಞಾನ ಆಧಾರಿತ ಉತ್ಪನ್ನಗಳೂ ಭಾರತದಲ್ಲೇ ತಯಾರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಷ್ಠಿತ ಆಪಲ್ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ತನ್ನ ಕೆಲವು ಐಫೋನ್ ಉತ್ಪಾದನೆ ಘಟಕಗಳನ್ನು ಭಾರತಕ್ಕೆ ವರ್ಗಾಯಿಸಿದೆ. ಈ ವರ್ಷದ ಮೊದಲಿನ ವರದಿಗಳ ಆಧಾರದ ಮೇಲೆ, ಆಪಲ್ 2025 ರ ವೇಳೆಗೆ ತನ್ನ ಒಟ್ಟು ಉತ್ಪಾದನೆಯಲ್ಲಿ ಶೇ 25 ರಷ್ಟು ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸಿದೆ. ಅಲ್ಲದೆ 2027ರ ವೇಳೆಗೆ ಶೇ 50ರಷ್ಟು ವಿಸ್ತರಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

bec00d331e7bcef3df5237e7aa47b1c5?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X