ಅನಾಮಿಕ ಸ್ಪ್ಯಾಮ್ ಕರೆಗಳಿಂದ ರಕ್ಷಣೆಗೆ ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್

Date:

Advertisements

ಅಪರಿಚಿತರ ಅನಾಮಿಕ ಸ್ಪ್ಯಾಮ್‌ ಕರೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ವಾಟ್ಸಾಪ್ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಈ ಪೀಚರ್‌ನಿಂದ ವಾಟ್ಸಾಪ್‌ ಬಳಕೆದಾರರು ಅಪರಿಚಿತ ಒಳಬರುವ ಕರೆಗಳು ಬಾರದಂತೆ ತಡೆಯಬಹುದಾಗಿದೆ. ಈ ಫೀಚರ್‌ ಈಗಾಗಲೇ ವಾಟ್ಸಾಪ್‌ಗೆ ಅಳವಡಿಸಲಾಗಿದ್ದು, ಸೆಟ್ಟಿಂಗ್‌ಗೆ ಹೋಗಿ ಈಗಲೇ ಚಾಲ್ತಿಗೊಳಿಸಿಕೊಳ್ಳಬಹುದು.

ವಾಟ್ಸಪ್‌, ಇಷ್ಟು ದಿನ ಈ ಫೀಚರ್‌ ಅನ್ನು ಟೆಸ್ಟಿಂಗ್‌ ಹಂತದಲ್ಲಿರಿಸಿತ್ತು. ಇದೀಗ ಅಂತಿಮವಾಗಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ದೊರಕುವಂತೆ ಮಾಡಲಾಗಿದೆ. ಇದನ್ನು ಪ್ರೈವೆಸಿ ಸೆಟ್ಟಿಂಗ್‌ ಮೆನುವಿನಲ್ಲಿ ಆನ್‌ ಮಾಡಿಕೊಳ್ಳಬಹುದು. ಈ ರೀತಿ ಆನ್‌ ಮಾಡಿದ ಬಳಿಕ ಅಪರಿಚಿತ ನಂಬರ್‌ಗಳಿಂದ ಬರುವ ಕರೆಗಳು ಸ್ವಯಂಚಾಲಿತವಾಗಿ ಬ್ಲಾಕ್‌ ಆಗಲಿವೆ. ನೀವು ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ಇತ್ತೀಚಿನ ವಾಟ್ಸಾಪ್‌ ಅಪ್‌ಡೇಟ್‌ ಮಾಡಿದ್ದರೆ. ಸುಲಭವಾಗಿ ಸೆಟ್ಟಿಂಗ್‌ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿದ್ದೀರಾ? ಸಂದೇಶಗಳನ್ನು ಎಡಿಟ್‌ ಮಾಡುವ ಆಯ್ಕೆ ಪರಿಚಯಿಸಿದ ವಾಟ್ಸ್‌ಆ್ಯಪ್‌

Advertisements
  • ಈ ಪೀಚರ್‌ ಅನ್ನು ಅಳವಡಿಸಿಕೊಳ್ಳುವ ವಿಧಾನ ಈ ರೀತಿಯಿದೆ.
  • ಮೊದಲಿಗೆ ವಾಟ್ಸಾಪ್ ಓಪನ್‌ ಮಾಡಿ.
  • ಮೇಲ್ಬಾಗದಲ್ಲಿ ಬಲಭಾಗದಲ್ಲಿರುವ ಮೂರು ಚುಕ್ಕಿಯ ಮೆನು ಬಟನ್‌ ಕ್ಲಿಕ್‌ ಮಾಡಿ
  • ತದನಂತರ ಸೆಟ್ಟಿಂಗ್ಸ್‌ ಆಯ್ಕೆ ಕ್ಲಿಕ್‌ ಮಾಡಿ
  • ಅನಂತರ ಪ್ರೈವೆಸಿ ಆಯ್ಕೆ ಕ್ಲಿಕ್‌ ಮಾಡಿ
  • ಆಮೇಲೆ ಕಾಲ್ಸ್‌ ಆಯ್ಕೆ ಕ್ಲಿಕ್ ಮಾಡಿ
  • Silence Unknown Callers ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಿ.

ಈ ರೀತಿ ಮಾಡಿದ ಬಳಿಕ ಸ್ಪ್ಮಾಮ್‌ ಕರೆಗಳು ವಾಟ್ಸಾಪ್‌ನಲ್ಲಿ ನಿಂತು ಹೋಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸೇವ್‌ ಮಾಡಿದ ನಂಬರ್‌ಗಳ ಕರೆಗಳನ್ನು ಮಾತ್ರ ಸ್ವೀಕರಿಸಬಹುದು.

whatsapp 4
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X