- ವಾಟ್ಸ್‌ಆ್ಯಪ್ ಸಂದೇಶ ಸೆಂಡ್ ಮಾಡಿದ ಬಳಿಕವೂ ಎಡಿಟ್
- ಆಂಡ್ರಾಯ್ಡ್ ಹಾಗೂ ಐಒಎಸ್ ಆವೃತ್ತಿಯಲ್ಲಿ ಆಯ್ಕೆ ಸಕ್ರಿಯ
ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್ ಸಂದೇಶಗಳನ್ನು ಎಡಿಟ್ ಮಾಡುವ ಹೊಸ ಆಯ್ಕೆಯನ್ನು ಪರಿಚಯಿಸಿದೆ.
ಬಳಕೆದಾರರು ಇನ್ನು ಮುಂದೆ ತಾವು ಕಳುಹಿಸಿದ ವಾಟ್ಸ್‌ಆ್ಯಪ್ ಸಂದೇಶವನ್ನು ಸೆಂಡ್ ಮಾಡಿದ ಬಳಿಕವೂ ತಿದ್ದುಪಡಿ (ಎಡಿಟ್) ಮಾಡಲು ಸಾಧ್ಯವಾಗಲಿದೆ. ಆದರೆ ಕಳುಹಿಸಿದ 15 ನಿಮಿಷದೊಳಗೆ ತಿದ್ದುಪಡಿ ಮಾಡಬೇಕು. ಪ್ರಸ್ತುತ ಈ ಆಯ್ಕೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಅಪ್ಲಿಕೇಶನ್ ಆವೃತ್ತಿಯಲ್ಲಿ ಸಕ್ರಿಯಗೊಳಿಸಲಾಗಿದೆ. ಈ ಮೊದಲು ಆ್ಯಪಲ್ ಐಫೋನ್‌ಗಳಲ್ಲಿನ ಐಮೆಸೇಜ್ ತಂತ್ರಾಂಶದಲ್ಲಿ ಈ ಸೌಲಭ್ಯ ಪರಿಚಯಿಸಲಾಗಿತ್ತು. ಈಗ ಆಂಡ್ರಾಯ್ಡ್ ಹಾಗೂ ಐಒಎಸ್ ಅಪ್ಲಿಕೇಶನ್ ಆವೃತ್ತಿ ಫೋನ್‌ಗಳಲ್ಲಿ ಪರಿಚಯಿಸಲಾಗಿದೆ.
ಹೊಸ ಆಯ್ಕೆಯನ್ನು ಪಡೆಯಲು ಬಯಸುವವರು ಗೂಗಲ್ ಪ್ಲೇಸ್ಟೋರ್‌ನಿಂದ ಆಂಡ್ರಾಯ್ಡ್ ಬಿಟಾ 2.23.10.13 ವರ್ಷನ್‌ಅನ್ನು ಅಪ್ಡೇಟ್ ಮಾಡಿಕೊಳ್ಳಿ.
ಈ ಸುದ್ದಿ ಓದಿದ್ದೀರಾ? ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿದ ಇಲಾನ್ ಮಸ್ಕ್
ಸಂದೇಶ ಬದಲಿಸಲು ಕೇವಲ 15 ನಿಮಿಷಗಳ ಸಮಯ ನೀಡಿರುವ ಕಾರಣವನ್ನು ತಿಳಿಸಿರುವ ವಾಟ್ಸ್‌ಆ್ಯಪ್, ಹೆಚ್ಚು ಸಮಯ ನೀಡಿದರೆ ಪರಿಚಿತರ ಕೈಗೆ ಮೊಬೈಲ್ ಬದಲಾಗುವ ಸಂದರ್ಭದಲ್ಲಿ ಎಡಿಟ್ ಆಯ್ಕೆಯಿಂದ ಸಂದೇಶವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ ಎಂದಿದೆ.
ಬಳಕೆದಾರರು ಮೆಸೆಜ್ಗಳನ್ನು ಮಾತ್ರ ಎಡಿಟ್ ಮಾಡಬಹುದು. ಯಾವುದಾದರೂ ಇಮೋಜಿಯನ್ನು ಅಥವಾ ಝಿಪ್ ಫೈಲ್ ಇದ್ದರೆ ಅದನ್ನು ಬದಲಿಸಲು ಸಾದ್ಯವಿಲ್ಲ.
ಇತ್ತೀಚೆಗಷ್ಟೆ ಒಂದೇ ವಾಟ್ಸ್‌ಆ್ಯಪ್ ಖಾತೆಯನ್ನು 4 ಮೊಬೈಲ್‌ಗಳಲ್ಲಿ ಏಕಕಾಲದಲ್ಲಿ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಮೊದಲು ಒಂದು ವಾಟ್ಸ್‌ಆ್ಯಪ್ ಖಾತೆಯನ್ನು ಒಂದು ಫೋನ್ ಜೊತೆಗೆ ಕಂಪ್ಯೂಟರ್‌ನಲ್ಲಿ ಲಾಗಿನ್ ಮಾಡಲು ಮಾತ್ರ ಅವಕಾಶವಿತ್ತು. ಎರಡು ಫೋನ್‌ಗಳಲ್ಲಿ ಏಕಕಾಲದಲ್ಲಿ ಒಂದೇ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ.