ಎಚ್ಚರಿಕೆ, ಈ ನಂಬರ್‌ಗಳಿಂದ ವಾಟ್ಸ್‌ಆ್ಯಪ್‌ ಕರೆ, ಸಂದೇಶಗಳು ಬಂದರೆ ಸ್ವೀಕರಿಸಬೇಡಿ!

Date:

Advertisements
  • ವಿದೇಶಗಳ ಸಂಖ್ಯೆಗಳ ರೀತಿಯಲ್ಲಿ ಬರುವ ಕರೆಗಳು
  • ಉದ್ಯೋಗ, ಬಹುಮಾನ ನೀಡುವುದಾಗಿ ಹೇಳಿ ವಂಚನೆ

ವಿಶ್ವದ ಜನಪ್ರಿಯ ಹಾಗೂ ಅತಿ ಹೆಚ್ಚು ಬಳಕೆದಾರರನ್ನ ಹೊಂದಿರುವ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್‌. ಆದರೆ ತಂತ್ರಜ್ಞಾನ ಮುಂದುವರೆದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿರುವವರು ದಿನೇ ದಿನೆ ಹೆಚ್ಚಾಗುತ್ತಿದ್ದಾರೆ. ನಿತ್ಯವೂ ಒಂದಲ್ಲ ಒಂದು ದೇಶಗಳಲ್ಲಿ ನೂರಾರು ಪ್ರಕರಣಗಳು ದಾಖಲಾಗುತ್ತಿವೆ.

ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ದೇಶಗಳ ಕೋಡ್‌ಗಳಿಂದ ಬರುವ ಸಂಖ್ಯೆಗಳಿಂದ ವಾಟ್ಸ್‌ಆ್ಯಪ್‌ ಕರೆ ಹಾಗೂ ಸಂದೇಶದ ಮೂಲಕ ವಂಚಿಸುತ್ತಿರುವ ದೂರುಗಳು ಹೆಚ್ಚಾಗುತ್ತಿರುವ ಬಗ್ಗೆ ನೂರಾರು ದೂರುಗಳು ದಾಖಲಾಗುತ್ತಿವೆ. ಉದ್ಯೋಗಿಗಳು ಹಾಗೂ ವ್ಯವಹಾರ ಮಾಡುತ್ತಿರುವವರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಲಕ್ಷಾಂತರ ರೂ. ದೋಚುತ್ತಿದ್ದಾರೆ. 

ಈ ಸುದ್ದಿಯ ಬಗ್ಗೆ ಮಾತನಾಡಿದ ಕಲಾ ಮಾಧ್ಯಮ ನಿರೂಪಕರು

Advertisements

ವಾಟ್ಸ್‌ಆ್ಯಪ್‌ ಮೂಲಕ ಗ್ರಾಹಕರನ್ನು ಬಲಿಪಶು ಮಾಡುತ್ತಿರುವ ವಂಚಕರು ಇಥಿಯೋಪಿಯಾ (+ 251), ಮಲೇಷ್ಯಾ (+ 60), ಇಂಡೋನೇಷ್ಯಾ (+ 62), ಕೀನ್ಯಾ (+ 254), ವಿಯೆಟ್ನಾಂ (+ 84) ಮತ್ತು ಇತರ ಕೋಡ್‌ನೊಂದಿಗೆ ಪ್ರಾರಂಭವಾಗುವ ಅಂತರರಾಷ್ಟ್ರೀಯ ನಂಬರ್‌ಗಳಿಂದ ಕರೆ ಮಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹೊಸ ಫೀಚರ್‌ ‘ಕೀಪ್ ಇನ್ ಚಾಟ್’ ಸೇರಿ ಹಲವು ಆಯ್ಕೆಗಳನ್ನು ಪರಿಚಯಿಸಲಿರುವ ವಾಟ್ಸ್‌ಆ್ಯಪ್‌

ಮೇಲಿನ ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಈ ಕರೆಗಳನ್ನು ಸಾರ್ವಜನಿಕರು ಅಂತರರಾಷ್ಟ್ರೀಯ ಕರೆಗಳೆಂದು ಭಾವಿಸಬಾರದು. ವಾಸ್ತವವಾಗಿ ಇಂತಹ ಕರೆಗಳು ಇಂಟರ್ನೆಟ್ ಮೂಲಕ ರವಾನೆಯಾಗುವ ಕರೆಗಳಾಗಿವೆ. ನೀವಿರುವ ನಗರದಲ್ಲಿಯೇ ಕುಳಿತು ಕೆಲ ಕಿಡಿಗೇಡಿಗಳು ವಾಟ್ಸ್‌ಆ್ಯಪ್‌ ಕರೆಗಳಿಗಾಗಿ ಅಂತರರಾಷ್ಟ್ರೀಯ ಸಂಖ್ಯೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ.

ಸೆಲ್ಯುಲಾರ್ ಕರೆಗಳಿಗೆ ಅನ್ವಯವಾಗುವಂತೆ ಯಾವುದೇ ಅಂತರರಾಷ್ಟ್ರೀಯ ಕರೆ ಶುಲ್ಕಗಳ ಬಗ್ಗೆ ಚಿಂತಿಸದೆ ಅಂತಹ ಸಂಖ್ಯೆಯಿಂದ ಕರೆ ಮಾಡಬಹುದು ಎನ್ನಲಾಗಿದೆ. ಇಂತಹ ಕರೆಗಳು ಗ್ರಾಹಕರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡುವ ಕೆಲಸ ಮಾಡುತ್ತಿವೆ. 

ಕರೆ ಮಾಡುವ ವಂಚಕರು, ಪೂರ್ಣಕಾಲಿಕ, ಅರೆಕಾಲಿಕ ಕೆಲಸ ನೀಡುವುದಾಗಿಯೋ, ಸಂದರ್ಶನಕ್ಕೆ ಕರೆಯುವುದಾಗಿಯೋ, ಉಚಿತ ಕೂಪನ್ ಕೊಡುವುದಾಗಿಯೋ, ಬಹುಮಾನ ನೀಡುವುದಾಗಿಯೋ ಅಥವಾ ವ್ಯವಹಾರ ಆರಂಭಿಸುವುದಾಗಿಯೋ ಹೇಳಿ ಮೋಸ ಮಾಡುತ್ತಾರೆ.

ಸಾರ್ವಜನಿಕರು ಇಂತಹ ಕರೆಗಳು ಬಂದರೆ ಬ್ಲಾಕ್‌ ಮಾಡಬೇಕು, ಇಲ್ಲವೆ ಪೊಲೀಸರಿಗೆ ದೂರು ನೀಡಬೇಕು. ಆದರೆ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸುವ ಮೋಸದ ಜಾಲಕ್ಕೆ ಮರುಳಾಗಬಾರದು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X