- ಬಳಕೆದಾರರು ಮರೆಯಾಗುವ ಸಂದೇಶವನ್ನು ಇರಿಸಿಕೊಳ್ಳುವ ಆಯ್ಕೆ
- ‘ಬುಕ್‌ಮಾರ್ಕ್’ ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಲಭ್ಯವಿರುವ ಆಯ್ಕೆ
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆಯ್ಕೆಗಳನ್ನು ಆರಂಭಿಸುತ್ತಾ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ‘ವಾಟ್ಸ್‌ಆ್ಯಪ್’ ಈಗ ಹೊಸ ಫೀಚರ್‌ಗಳನ್ನು ಪರಿಚಯಿಸಲು ಮುಂದಾಗಿದೆ.
ಇದೀಗ ಡಿಸಪಿಯರಿಂಗ್ (ಮರೆಯಾಗುವ) ಮೆಸೇಜ್‌ಗಳನ್ನು ಕಳುಹಿಸುವವರಿಗೆ ಅವರು ಕಳುಹಿಸುವ ಸಂದೇಶದ ಕೆಲವು ಸಂದೇಶವನ್ನು ಉಳಿಸಿಕೊಳ್ಳುವ ಫೀಚರ್ ‘ಕೀಪ್ ಇನ್ ಚಾಟ್’ ಅನ್ನು ವಾಟ್ಸಪ್ ಪರಿಚಯಿಸಲಿದೆ. ಸಂಬಂಧಿತ ಬಳಕೆದಾರ ಡಿಸಪಿಯರಿಂಗ್ ಮೆಸೇಜಸ್ ಫೀಚರ್ ಅನ್ನು ಆನ್ ಮಾಡಿದರೆ ಈ ಹೊಸ ಫೀಚರ್ ಲಭ್ಯವಾಗಲಿದೆ.
ಒಂದು ಗ್ರೂಪಿನಲ್ಲಿ ಯಾರಾದರೂ ಡಿಸಪಿಯರಿಂಗ್ ಮೆಸೇಜ್ ಅನ್ನು ಇರಿಸಿಕೊಂಡರೆ, ಅದನ್ನು ಕಳುಹಿಸಿದವರಿಗೆ ಸೂಚನೆ ಹೋಗುತ್ತದೆ ಮತ್ತು ಅವರು ಈ ನಿರ್ಧಾರವನ್ನು ವಿರೋಧಿಸಬಹುದಾಗಿದೆ. ಇತರರು ತಾವು ಕಳುಹಿಸಿದ ಡಿಸಪಿಯರಿಂಗ್ ಮೆಸೇಜ್‌ಗಳನ್ನು ಇರಿಸಿಕೊಳ್ಳಬಾರದು ಎಂದು ಕಳುಹಿಸಿದವರು ನಿರ್ಧರಿಸಿದರೆ ಆ ನಿರ್ಧಾರವೇ ಅಂತಿಮವಾಗುತ್ತದೆ.
ಇದರರ್ಥ ಯಾರೂ ಈ ಸಂದೇಶ ಉಳಿಸಿಕೊಳ್ಳುವ ಹಾಗಿಲ್ಲ ಹಾಗೂ ನಿರ್ದಿಷ್ಟ ಅವಧಿಯ ನಂತರ ಆ ಸಂದೇಶ ಮಾಯವಾಗುತ್ತದೆ. ಆದರೆ ನೂತನ ಫೀಚರ್ ‘ಕೀಪ್ ಇನ್ ಚಾಟ್’ ಅನ್ನು ಬಳಕೆದಾರರು ಕಳುಹಿಸುವವರ ಅನುಮತಿಯೊಂದಿಗೆ ಯಾವುದೇ ಸಂದೇಶವನ್ನು ಇರಿಸಿಕೊಂಡರೆ ಅವುಗಳನ್ನು ‘ಬುಕ್ ಮಾರ್ಕ್’ ಐಕಾನ್‌ನೊಂದಿಗೆ ಲೇಬಲ್ ಮಾಡಲಾಗುವುದು ಹಾಗೂ ‘ಕೆಪ್ಟ್ ಮೆಸೇಜ್’ ಫೀಚರ್‌ನಲ್ಲಿ ಅವುಗಳನ್ನು ಕಾಣಬಹುದು.
ಈ ನಡುವೆ, ವಾಟ್ಸಪ್ ಡಿಸಪಿಯರಿಂಗ್ ಸಂದೇಶಗಳ ವಿಭಾಗಕ್ಕೆ ಕೆಲವು ದಿನಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಸೇರಿಸಲಿದೆ. ಪ್ರಸ್ತುತ ಬಳಕೆದಾರರು ಡಿಸಪಿಯರಿಂಗ್ ಆಯ್ಕೆಯಲ್ಲಿ 24 ಗಂಟೆ, 7 ದಿನ ಹಾಗೂ 90 ದಿನಗಳವರೆಗೆ ಮಾತ್ರ ಹೊಂದಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ 15 ಹೊಸ ಆಯ್ಕೆಗಳು ಲಭ್ಯವಿದ್ದು, 1 ವರ್ಷ, 180 ದಿನ, 60 ದಿನ, 30 ದಿನ, 21 ದಿನ, 14 ದಿನ, 6 ದಿನ, 5 ದಿನ, 4 ದಿನ, 3 ದಿನ, 2 ದಿನ, 12 ಗಂಟೆ, 6 ಗಂಟೆ, 3 ಗಂಟೆ ಹಾಗೂ 1 ಗಂಟೆಯ ಅವಧಿಯನ್ನು ಹೊಂದಿಸಿಕೊಳ್ಳಬಹುದು.