- ಪಿಂಕ್ ವಾಟ್ಸಾಪ್ ಕ್ಲಿಕ್ ಮಾಡಿದರೆ, ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಳೆದುಕೊಳ್ಳಬಹುದು
- ಯೂಸರ್ ನೇಮ್, ಪಾಸ್ವರ್ಡ್ ಬಳಸಿ ಸಮಾಜಘಾತುಕ, ಕಾನೂನು ವಿರೋಧಿ ಚಟುವಟಿಕೆಗಳಿಗೆ ಬಳಸಬಹುದು
ಕೋಟ್ಯಂತರ ಬಳಕೆದಾರರೊಂದಿಗೆ ವಿಶ್ವದ ಅತ್ಯಂತ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮ ವಾಟ್ಸಾಪ್. ದಿನವೂ ಕೂಡ ವಾಟ್ಸಾಪ್ ಇಲ್ಲದೆ ಶುರುವಾಗುವುದಿಲ್ಲ. ಆದರೆ ಜನಪ್ರಿಯತೆ ಹೆಚ್ಚುತ್ತಿದಂತೆ ಸ್ಕ್ಯಾಮರ್ಗಳಿಗೆ ಆನ್ಲೈನ್ ವಂಚನೆ, ಮೋಸ ಇತ್ಯಾದಿಗಳ ತಾಣವಾಗಿ ವಾಟ್ಸಾಪ್ ಬದಲಾಗುತ್ತಿದೆ. ಈಗ ‘ಪಿಂಕ್ ವಾಟ್ಸಾಪ್’ ಎಂಬುದು ವಂಚನೆ ಪಟ್ಟಿಗೆ ಸೇರ್ಪಡೆಯಾಗಿದೆ.
ಆದರೆ ಇತ್ತೀಚಿಗೆ ವಾಟ್ಸಾಪ್ ಮೂಲಕ ವಂಚಕರು ‘ಪಿಂಕ್ ವಾಟ್ಸಾಪ್’ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ಅನ್ನು ಸ್ವೀಕರಿಸಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ. ಜನರನ್ನು ಮೋಸಗೊಳಿಸಲೆಂದೆ ಆನ್ಲೈನ್ ವಂಚಕರು ಪಿಂಕ್ ವಾಟ್ಸಾಪ್ ಲಿಂಕ್ ಕಳುಹಿಸುತ್ತಾರೆ.

ಈ ಲಿಂಕ್ಅನ್ನು ಕ್ಲಿಕ್ ಮಾಡಿದರೆ ಹೊಸ ವಾಟ್ಸಾಪ್ ಅಪ್ಡೇಟ್ಗಳು ನಿಮಗೆ ದೊರಕುತ್ತವೆ. ಲೊಗೊದ ಬಣ್ಣ ಬದಲಾಗುವುದಲ್ಲದೆ ಹಲವು ಫೀಚರ್ಗಳು ದೊರಕುತ್ತವೆ ಎಂದು ನಂಬಿಸುತ್ತಾರೆ.
ಹೊಸ ಫೀಚರ್ ಎಂದು ಪಿಂಕ್ ವಾಟ್ಸಾಪ್ ಲಿಂಕ್ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಹಣ ಮಾತ್ರವಲ್ಲ, ನಿಮ್ಮ ಮೊಬೈಲ್ನಲ್ಲಿರುವ ಫೋಟೋ, ವಿಡಿಯೋ ಒಳಗೊಂಡ ಎಲ್ಲ ದಾಖಲೆಗಳು ಮೋಸಗಾರರ ಕೈ ಸೇರುತ್ತದೆ.
ಈ ಸುದ್ದಿ ಓದಿದ್ದೀರಾ? ಎಚ್ಚರಿಕೆ, ಈ ನಂಬರ್ಗಳಿಂದ ವಾಟ್ಸ್ಆ್ಯಪ್ ಕರೆ, ಸಂದೇಶಗಳು ಬಂದರೆ ಸ್ವೀಕರಿಸಬೇಡಿ!
ಪಿಂಕ್ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿದರೆ ಏನೆಲ್ಲ ಅಪಾಯವಾಗಬಹುದು ಎಂಬುದನ್ನು ಮುಂಬೈ ಪೊಲೀಸರು ಇತ್ತೀಚಿಗೆ ಈ ರೀತಿ ಎಚ್ಚರಿಸಿದ್ದಾರೆ.
- ಸ್ಪ್ಯಾಮ್ ಮೆಸೆಜ್ಗಳನ್ನು ಕಳುಹಿಸಿ ನಿಮ್ಮ ಬ್ಯಾಂಕಿನಿಂದ, ಗೂಗಲ್ ಪೇ, ಫೋನ್ ಪೇಯಿಂದ ಹಣ ಕದಿಯಬಹುದು
- ನಿಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬಳಸಿ ಸಮಾಜಘಾತುಕ, ಕಾನೂನು ವಿರೋಧಿ ಚಟುವಟಿಕೆಗಳಿಗೆ ಬಳಸಬಹುದು
- ನಿಮ್ಮ ಸಹಿಯನ್ನು ದುರುಪಯೋಗಪಡಿಸಿಕೊಳ್ಳಬಹುದು
- ನಿಮ್ಮ ಮೊಬೈಲ್ನಲ್ಲಿರುವ ಸಂಪರ್ಕ ಸಂಖ್ಯೆಯನ್ನು ಕದಿಯಬಹುದು. ಇದನ್ನು ಕೆಟ್ಟ ಉದ್ದೇಶಗಳಿಗೆ ಅಥವಾ ಮಾರ್ಕೆಟಿಂಗ್ ಉದ್ದೇಶಗಳಿಗೆ ಬಳಸಬಹುದು
- ನಿಮ್ಮ ಗ್ಯಾಲರಿಯಲ್ಲಿರುವ ಫೋಟೊಗಳನ್ನು ಕದ್ದು ಕೆಟ್ಟ ಉದ್ದೇಶಗಳಿಗೆ ಬಳಸಬಹುದು
- ನಿಮ್ಮ ಮೊಬೈಲ್ ಮೇಲೆ ನಿಮಗೆ ನಿಯಂತ್ರಣ ಇಲ್ಲದಂತೆ ಮಾಡುವ ಸಾಧ್ಯತೆಯೂ ಇರುತ್ತದೆ

ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?
- ಮೊದಲನೆಯದಾಗಿ, ನಕಲಿ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿದ್ದರೆ ಅದನ್ನು ತಕ್ಷಣವೇ ಅನ್ಇನ್ಸ್ಟಾಲ್ ಮಾಡಿ.
- ಫೇಕ್ ಆ್ಯಪ್ಅನ್ನು ನಿಮ್ಮ ಮೊಬೈಲ್ ಫೋನ್ನಿಂದ ಅಳಿಸುವುದು ಸೂಕ್ತ. ಅದನ್ನು ಹೋಂ ಸ್ಕ್ರೀನ್ನಿಂದ ಡಿಲೀಟ್ ಮಾಡಿದ ತಕ್ಷಣ ಅದು ಫೋನ್ನಿಂದ ತಕ್ಷಣ ಹೋಗುವುದಿಲ್ಲ. ಪೂರ್ತಿಯಾಗಿ ಅಳಿಸಬೇಕಿದ್ದರೆ, ಸೆಟ್ಟಿಂಗ್ಗೆ ಹೋಗಿ ಆ್ಯಪ್ಸ್ ಎಂಬಲ್ಲಿಗೆ ಹೋಗಿ, ಪಿಂಕ್ ಬಣ್ಣದ ವಾಟ್ಸ್ಆ್ಯಪ್ ಲೋಗೋ ಇರುವ ಆ್ಯಪ್ ಕ್ಲಿಕ್ ಮಾಡಿ, ಅನ್ ಇನ್ಸ್ಟಾಲ್ ಎಂಬ ಬಟನ್ ಒತ್ತಬೇಕು.
- ಗೂಗಲ್ ಪ್ಲೇ ಸ್ಟೋರ್, ಐಒಎಸ್ ಆಪ್ ಸ್ಟೋರ್ನಿಂದ ಮಾತ್ರ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಅಪರಿಚಿತ ಮೂಲಗಳಿಂದ ಸ್ವೀಕರಿಸಿದ ಲಿಂಕ್ಗಳ ದೃಢೀಕರಣವನ್ನು ನೀವು ಪರಿಶೀಲಿಸದ ಹೊರತು ಅವುಗಳ ಮೇಲೆ ಕ್ಲಿಕ್ ಮಾಡಬೇಡಿ.
- ಸರಿಯಾದ ದೃಢೀಕರಣ ಅಥವಾ ಪರಿಶೀಲನೆ ಇಲ್ಲದೆ ಇತರರಿಗೆ ಯಾವುದೇ ಲಿಂಕ್ಗಳು ಅಥವಾ ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ.
- ಲಾಗಿನ್ ರುಜುವಾತುಗಳು, ಪಾಸ್ವರ್ಡ್ಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಮತ್ತು ಅದೇ ರೀತಿಯ ಮಾಹಿತಿಯನ್ನು ಆನ್ಲೈನ್ನಲ್ಲಿ ಯಾರೊಂದಿಗೂ ದುರುಪಯೋಗಪಡಿಸಿಕೊಳ್ಳಬಹುದಾದಂತಹ ನಿಮ್ಮ ವೈಯಕ್ತಿಕ ವಿವರಗಳು ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
- ಸೈಬರ್ ಅಪರಾಧಿಗಳ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಯಾವಾಗಲು ಜಾಗರೂಕರಾಗಿರಿ.
ಸೈಬರ್ ವಂಚನೆಗಳನ್ನು ಎಸಗಲು, ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಲು ಮೋಸಗಾರರು ಹಲವಾರು ಹೊಸ ತಂತ್ರಗಳು ಮತ್ತು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಬಳಕೆದಾರರು ಈ ರೀತಿಯ ವಂಚನೆಗಳ ಬಗ್ಗೆ ಜಾಗೃತರಾಗಿರಬೇಕು, ಎಚ್ಚರಿಕೆ ವಹಿಸಬೇಕು ಮತ್ತು ಗಮನಹರಿಸಬೇಕು ಮತ್ತು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಬೇಕು