ಸಂದೇಶಗಳನ್ನು ಎಡಿಟ್‌ ಮಾಡುವ ಆಯ್ಕೆ ಪರಿಚಯಿಸಿದ ವಾಟ್ಸ್‌ಆ್ಯಪ್‌

Date:

Advertisements
  • ವಾಟ್ಸ್‌ಆ್ಯಪ್‌ ಸಂದೇಶ ಸೆಂಡ್‌ ಮಾಡಿದ ಬಳಿಕವೂ ಎಡಿಟ್‌
  • ಆಂಡ್ರಾಯ್ಡ್ ಹಾಗೂ ಐಒಎಸ್ ಆವೃತ್ತಿಯಲ್ಲಿ ಆಯ್ಕೆ ಸಕ್ರಿಯ

ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಎಡಿಟ್‌ ಮಾಡುವ ಹೊಸ ಆಯ್ಕೆಯನ್ನು ಪರಿಚಯಿಸಿದೆ.

ಬಳಕೆದಾರರು ಇನ್ನು ಮುಂದೆ ತಾವು ಕಳುಹಿಸಿದ ವಾಟ್ಸ್‌ಆ್ಯಪ್‌ ಸಂದೇಶವನ್ನು ಸೆಂಡ್‌ ಮಾಡಿದ ಬಳಿಕವೂ ತಿದ್ದುಪಡಿ (ಎಡಿಟ್) ಮಾಡಲು ಸಾಧ್ಯವಾಗಲಿದೆ. ಆದರೆ ಕಳುಹಿಸಿದ 15 ನಿಮಿಷದೊಳಗೆ ತಿದ್ದುಪಡಿ ಮಾಡಬೇಕು. ಪ್ರಸ್ತುತ ಈ ಆಯ್ಕೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಅಪ್ಲಿಕೇಶನ್‌ ಆವೃತ್ತಿಯಲ್ಲಿ ಸಕ್ರಿಯಗೊಳಿಸಲಾಗಿದೆ. ಈ ಮೊದಲು ಆ್ಯಪಲ್ ಐಫೋನ್‌ಗಳಲ್ಲಿನ ಐಮೆಸೇಜ್‌ ತಂತ್ರಾಂಶದಲ್ಲಿ ಈ ಸೌಲಭ್ಯ ಪರಿಚಯಿಸಲಾಗಿತ್ತು. ಈಗ ಆಂಡ್ರಾಯ್ಡ್ ಹಾಗೂ ಐಒಎಸ್ ಅಪ್ಲಿಕೇಶನ್‌ ಆವೃತ್ತಿ ಫೋನ್‌ಗಳಲ್ಲಿ ಪರಿಚಯಿಸಲಾಗಿದೆ.

ಹೊಸ ಆಯ್ಕೆಯನ್ನು ಪಡೆಯಲು ಬಯಸುವವರು ಗೂಗಲ್‌ ಪ್ಲೇಸ್ಟೋರ್‌ನಿಂದ ಆಂಡ್ರಾಯ್ಡ್ ಬಿಟಾ 2.23.10.13 ವರ್ಷನ್‌ಅನ್ನು ಅಪ್ಡೇಟ್​ ಮಾಡಿಕೊಳ್ಳಿ. 

Advertisements

ಈ ಸುದ್ದಿ ಓದಿದ್ದೀರಾ? ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿದ ಇಲಾನ್ ಮಸ್ಕ್

ಸಂದೇಶ ಬದಲಿಸಲು ಕೇವಲ 15 ನಿಮಿಷಗಳ ಸಮಯ ನೀಡಿರುವ ಕಾರಣವನ್ನು ತಿಳಿಸಿರುವ ವಾಟ್ಸ್‌ಆ್ಯಪ್‌, ಹೆಚ್ಚು ಸಮಯ ನೀಡಿದರೆ ಪರಿಚಿತರ ಕೈಗೆ ಮೊಬೈಲ್‌ ಬದಲಾಗುವ ಸಂದರ್ಭದಲ್ಲಿ ಎಡಿಟ್‌ ಆಯ್ಕೆಯಿಂದ ಸಂದೇಶವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ ಎಂದಿದೆ.

whatsapp edit

ಬಳಕೆದಾರರು ಮೆಸೆಜ್​ಗಳನ್ನು ಮಾತ್ರ ಎಡಿಟ್ ಮಾಡಬಹುದು. ಯಾವುದಾದರೂ ಇಮೋಜಿಯನ್ನು ಅಥವಾ ಝಿಪ್​ ಫೈಲ್​ ಇದ್ದರೆ ಅದನ್ನು ಬದಲಿಸಲು​ ಸಾದ್ಯವಿಲ್ಲ.

ಇತ್ತೀಚೆಗಷ್ಟೆ ಒಂದೇ ವಾಟ್ಸ್‌ಆ್ಯಪ್‌ ಖಾತೆಯನ್ನು 4 ಮೊಬೈಲ್‌ಗಳಲ್ಲಿ ಏಕಕಾಲದಲ್ಲಿ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಮೊದಲು ಒಂದು ವಾಟ್ಸ್‌ಆ್ಯಪ್‌ ಖಾತೆಯನ್ನು ಒಂದು ಫೋನ್ ಜೊತೆಗೆ ಕಂಪ್ಯೂಟರ್‌ನಲ್ಲಿ ಲಾಗಿನ್ ಮಾಡಲು ಮಾತ್ರ ಅವಕಾಶವಿತ್ತು. ಎರಡು ಫೋನ್‌ಗಳಲ್ಲಿ ಏಕಕಾಲದಲ್ಲಿ ಒಂದೇ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X