ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಮಣಿಪುರ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪುರದ ಮುಖ್ಯಮಂತ್ರಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
‘ಇದೇ ರೀತಿಯ ನೂರಾರು ಪ್ರಕರಣ ನಡೆದಿದೆ. ಅದಕ್ಕಾಗಿ ಇಂಟರ್ನೆಟ್ ಬಂದ್ ಮಾಡಿದ್ದೇವೆ’ ಎಂದು ಮಣಿಪುರ ಸಿಎಂ ಹೇಳಿಕೆ ನೀಡಿದ್ದಾರೆ.
ಮಹಿಳೆಯರ ನಗ್ನ ಮೆರವಣಿಗೆಯ ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡುವಂತೆ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ‘ಇಂಡಿಯಾ ಟುಡೆ’ ಸುದ್ದಿವಾಹಿನಿಯು ಸಂಪರ್ಕಿಸಿತ್ತು.
ಘಟನೆ ಕಳೆದ ಮೇ 4ರ ಘಟನೆಯ ಬಗ್ಗೆ ಮೇ 18ರಂದು ಎಫ್ಐಆರ್ ಆಗಿದೆ. ಓರ್ವ ಮುಖ್ಯಮಂತ್ರಿಯಾಗಿ ನಿಮಗೆ ಮಾಹಿತಿ ಇಲ್ಲವೇ? ಯಾಕೆ ಕ್ರಮ ಆಗಿಲ್ಲ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿರೇನ್ ಸಿಂಗ್, ‘ಇಲ್ಲಿ ಪ್ರತಿದಿನವೂ ಸಂಘರ್ಷ ನಡೆಯುತ್ತಿದೆ. ತುಂಬಾ ಮಂದಿ ಬಲಿಯಾಗಿದ್ದಾರೆ. ಇದೇ ರೀತಿಯ ಹಲವು ಎಫ್ಐಆರ್ ದಾಖಲಾದ ಬಗ್ಗೆ ಸಂದೇಶ ಬರುತ್ತಿದೆ. ಇಂತಹ ನೂರಾರು ಘಟನೆಗಳು ಮಣಿಪುರದಲ್ಲಿ ಎರಡು ತಿಂಗಳಲ್ಲಿ ನಡೆದಿದೆ. ಈ ವಿಡಿಯೋ ನಿನ್ನೆಯಷ್ಟೇ ಹೊರಗೆ ಬಂದಿದೆ. ಇಲ್ಲಿನ ‘ಗ್ರೌಂಡ್ ರಿಯಾಲಿಟಿ’ ನೋಡಿದ ಬಳಿಕ ನೀವು ಮಾತನಾಡಿ. ನಿಮ್ಮ ಆರೋಪಗಳನ್ನೆಲ್ಲ ಕೇಳಲು ನಾವು ತಯಾರಿಲ್ಲ. ಅದಕ್ಕಾಗಿಯೇ ನಾವು ಇಂಟರ್ನೆಟ್ ಸೇವೆಯನ್ನು ಇಲ್ಲಿ ಬಂದ್ ಮಾಡಿದ್ದೇವೆ. ಈ ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ಧೇವೆ. ಯಾರೆಲ್ಲ ಇದ್ದಾರೋ ಅವರನ್ನು ಬಂಧಿಸುತ್ತೇವೆ’ ಎಂದು ಹೇಳುತ್ತಲೇ ಮುಂದಿನ ಪ್ರಶ್ನೆಯನ್ನು ನಿರೂಪಕಿ ಕೇಳಿದಾಗ ಕರೆಯನ್ನು ಕಟ್ ಮಾಡಿದ್ದಾರೆ.
ಈ ವಿಡಿಯೋ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು, ಇವರು ಕೂಡ ಒಬ್ಬ ರಾಜ್ಯದ ಮುಖ್ಯಮಂತ್ರಿಯೇ? ನೂರಾರು ಘಟನೆಗಳು ನಡೆಯುತ್ತಿದೆ ಅಂತ ಅವರೇ ಒಪ್ಪಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾಕೆ ಅದನ್ನು ತಡೆಯುತ್ತಿಲ್ಲ. ಇನ್ನೂ ಕೂಡ ಅವರು ಆ ಸ್ಥಾನದಲ್ಲಿರಲು ಅರ್ಹರೇ? ಯಾಕೆ ಇನ್ನೂ ರಾಜೀನಾಮೆ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಹಿಂಸಾಚಾರವನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇಂಥಾ ಅಮಾನವೀಯ ಮತ್ತು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ,,,ವಿರೋಧ ಪಕ್ಷಗಳ ಸರ್ಕಾರ ಇರುವ ರಾಜ್ಯವಾಗಿದ್ದರೆ,, ನಕಲಿ ದೇಶಭಕ್ತರು ಹುಸಿ ರಾಷ್ಟ್ರವಾದಿಗಳು ಪುಂಗಿ ಊದುವ ಕೋಮುವ್ಯಾಧಿ ಪುರೋಹಿತಶಾಹಿ ಬಾಡಿಗೆ ಭಾಷಣಕಾರರು,, ಧರ್ಮದ ಗುತ್ತಿಗೆದಾರರು, ಸೋ ಕಾಲ್ಡ್ ಫೈರ್ ಬ್ರಾಂಡ್ ಗಳು,, ಬಹುಶಃ ಈ ದೇಶದ ಜನರನ್ನು ನೆಮ್ಮದಿಯಿಂದ ಇರಲು ಬಿಡದಷ್ಟು ಕಿರುಚಿರುವರು,,, ಅದ್ಯಾಕೆ ಇಡೀ ಕೇಂದ್ರ ಸರಕಾರವೇ ರೋಡ್ ಶೋ ಮಾಡಿರುವ ಸಾಧ್ಯತೆ ಇತ್ತು,,,ಈಗ ತಮ್ಮದೇ ಸರ್ಕಾರ ಇರುವ ಕಾರಣ ಯಾರೂ ತುಟಿ ಬಿಚ್ಚುತ್ತಿಲ್ಲ