- ಬೆಳಗ್ಗೆ 6.30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ
- ಸಿಂಗಾಪುರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಏಜೆನ್ಸಿಗಳ ಅಗತ್ಯತೆ ಪೂರೈಸಲು ವಿನ್ಯಾಸ
ಎರಡು ವಾರದ ಹಿಂದೆ ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
‘ವಾಣಿಜ್ಯ ಮಿಷನ್’ನ ಭಾಗವಾಗಿ ಪಿಎಸ್ಎಲ್ವಿ-ಸಿ 56/ಡಿಎಸ್-ಎಸ್ಎಆರ್ ಮತ್ತು ಸಿಂಗಾಪುರದ ಏಳು ರಾಕೆಟ್ಗಳ ಉಡ್ಡಯನವನ್ನು ಭಾನುವಾರ(ಜು.30) ಬೆಳಗ್ಗೆ ಯಶಸ್ವಿಯಾಗಿ ನಡೆಸಿದ್ದು, ಉಪಗ್ರಹಗಳನ್ನು ನಿಖರವಾಗಿ ಅವುಗಳ ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ಸಫಲವಾಗಿದೆ.
ಪ್ರಮುಖ ಉಪಗ್ರಹ 360 ಕೆ.ಜಿ ತೂಕ ಹೊಂದಿದ್ದ ಡಿಎಸ್-ಎಸ್ಎಆರ್ ಮತ್ತು ಉಳಿದ ಆರು ಉಪಗ್ರಹಗಳನ್ನು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್ ಪ್ಯಾಡ್ನಿಂದ ಬೆಳಗ್ಗೆ 6.30ಕ್ಕೆ ಯಶಸ್ವಿಯಾಗಿ ಉಡ್ಡಯನಗೈದಿದೆ.
ಸಿಂಗಾಪುರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಏಜೆನ್ಸಿಗಳ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಎಸ್ಟಿ ಇಂಜಿನಿಯರಿಂಗ್ ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು ಮಾದರಿ ಮತ್ತು ಹೈ ರೆಸಲ್ಯೂಶನ್ ಚಿತ್ರಣ ಹಾಗೂ ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಈ ಉಪಗ್ರಹವನ್ನು ಬಳಸುತ್ತದೆ ಎಂದು ಇಸ್ರೋ ಹೇಳಿದೆ.
ಇದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಭಿವೃದ್ಧಿಪಡಿಸಿದ ಎಸ್ಎಆರ್ ಪೇಲೋಡ್ ಅನ್ನು ಹೊತ್ತೊಯ್ದಿದೆ. ಎಲ್ಲ ಎಲ್ಲಾ ಹವಾಗುಣದಲ್ಲಿ ಹಗಲು- ರಾತ್ರಿಯ ಸೇವೆಯನ್ನು ಸಕ್ರಿಯವಾಗಿ ಒದಗಿಸುತ್ತದೆ ಮತ್ತು ಪೂರ್ಣ ಧ್ರುವೀಯತೆಯಲ್ಲಿ 1 ಎಂ ರೆಸಲ್ಯೂಶನ್ನಲ್ಲಿ ‘ಇಮೇಜಿಂಗ್’ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.