ಕಾಸರಗೋಡು | ಬಸ್‌ ನಿಲ್ಲಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು

Date:

Advertisements

ಬಸ್‌ ನಿಲ್ಲಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಒಟ್ಟಾಗಿ ಪ್ರತಿಭಟಿಸಿದ್ದ ವಿಡಿಯೋವೊಂದನ್ನು ತಪ್ಪಾಗಿ ಹಂಚಿಕೊಂಡು, ಬಲಪಂಥೀಯರು ಸೋಷಿಯಲ್ ಮೀಡಿಯಾದಲ್ಲಿ ಕೋಮು ಬಣ್ಣ ಹಚ್ಚಿ, ವೈರಲ್ ಮಾಡುತ್ತಿದ್ದಾರೆ.

“ಕೇರಳದಲ್ಲಿ ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಇತರ ಸಮುದಾಯದ ಮಹಿಳೆಯರನ್ನು ಬಸ್‌ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರ ವಿಷಯ ಏನೆಂದರೆ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಬಸ್‌ನೊಳಗೆ ನಡೆದ ಜಗಳವೊಂದರ ನಡೆಯುವ ವಿಡಿಯೋವೊಂದನ್ನು ಬಲಪಂಥೀಯರು ಹಂಚಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿರುವ ಫ್ಯಾಕ್ಟ್‌ ಚೆಕ್ ವೆಬ್‌ಸೈಟ್ ಆಲ್ಟ್‌ ನ್ಯೂಸ್, ‘ಬಲಪಂಥೀಯರು ಆರೋಪಿಸಿ ಹಂಚುತ್ತಿರುವ ವಿಡಿಯೋ ಸುಳ್ಳು. ಅದು ವಿದ್ಯಾರ್ಥಿಗಳು ಬಸ್ ನಿಲ್ಲಿಸದಿದ್ದಕ್ಕೆ ಪ್ರತಿಭಟನೆ ನಡೆಸಿದ ವೇಳೆ ಬಸ್‌ನೊಳಗೆ ಇದ್ದ ಸೀರೆಯುಟ್ಟ ಮಹಿಳೆ ವಿದ್ಯಾರ್ಥಿಗಳ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಬಸ್ ನಿಲ್ಲಿಸದೇ ಇರುವುದರಿಂದ ತಾವು ಅನುಭವಿಸುತ್ತಿರುವ ಕಷ್ಟವನ್ನು ಮಹಿಳೆಗೆ ವಿವರಿಸಿದ್ದಾರೆ. ಈ ವೇಳೆ ವಾಗ್ವಾದವಾಗಿದೆ ಅಷ್ಟೇ. ಬುರ್ಖಾ ಇಲ್ಲದ್ದಕ್ಕೆ ಅಥವಾ ಬುರ್ಖಾ ಧರಿಸುವಂತೆ ಒತ್ತಾಯಿಸಿಲ್ಲ’ ಎಂದು ವರದಿ ಮಾಡಿದೆ.

Advertisements

ಅಷ್ಟಕ್ಕೂ ಆಗಿದ್ದೇನು?
ಕೇರಳದ ಕಾಸರಗೋಡಿನ ಕುಂಬಳೆ-ಮುಳ್ಳೇರಿಯಾ ಭಾಗದಲ್ಲಿರುವ ಮಹಿಳಾ ಕಾಲೇಜು ಬಳಿ ಹೊಸದಾಗಿ ಬಸ್ ನಿಲ್ದಾಣವೊಂದನ್ನು ನಿರ್ಮಿಸಲಾಗಿತ್ತು. ಅಕ್ಟೋಬರ್ 22ರಂದು ಭಾಸ್ಕರ ನಗರದಲ್ಲಿ ಬಸ್‌ ನಿಲ್ಲಿಸದ ವಿಚಾರಕ್ಕೆ ನಡೆದ ಘಟನೆ.

ಭಾಸ್ಕರ ನಗರದಲ್ಲಿ ಹೊಸದಾಗಿ ಬಸ್ ನಿಲ್ದಾಣವನ್ನು ಕೇರಳ ಸಾರಿಗೆ ಇಲಾಖೆಯು ಅನುಮೋದಿಸಿದೆ. ಆದರೂ ಕೆಲ ಖಾಸಗಿ ಬಸ್‌ಗಳು ನಿಲ್ಲಿಸದೇ ಇದ್ದುದ್ದರಿಂದ ಸಮೀಪದ ಖನ್ಸ ಕಾಲೇಜು ವಿದ್ಯಾರ್ಥಿಗಳು ಎರಡು ಬಸ್‌ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ಬಸ್ ಒಳಗಿದ್ದ ಹಿಂದೂ ಮಹಿಳೆಯೊಬ್ಬರು ತನಗೆ ತಡವಾಗುತ್ತಿದೆ ಎಂದು ದೂರುತ್ತಾ, ಬಸ್ ತಡೆದು ಪ್ರತಿಭಟನೆ ನಡೆಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಹಾಗಾಗಿ ಅಲ್ಲಿದ್ದ ವಿದ್ಯಾರ್ಥಿನಿಯರು ಆ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಮಕ್ಕಳಿಗೂ ಇದೇ ರೀತಿ ಬಸ್ ನಿಲ್ಲಿಸದೇ ಇದ್ದಿದ್ದರೆ ನೀವು ಸುಮ್ಮನಿರುತ್ತೀರಾ? ಎಂದು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಬುರ್ಖಾದ ವಿಷಯವೇ ಪ್ರಸ್ತಾಪವಾಗಿರಲಿಲ್ಲ.

ಅಲ್ಲದೇ, ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯ ಅಧಿಕಾರಿಗಳು ಕೂಡ ಸ್ಪಷ್ಟೀಕರಣ ನೀಡಿದ್ದು, ‘ಬಸ್ ನಿಲ್ಲಿಸದ ವಿಚಾರಕ್ಕೆ ಪ್ರತಿಭಟನೆ ನಡೆದಿದೆ. ಬಸ್‌ನೊಳಗಿದ್ದ ಮಹಿಳೆ ಅದರಿಂದ ಕಿರಿಕಿರಿ ಮಾಡಿದ್ದಾರೆ. ಉಳಿದ ವಿದ್ಯಾರ್ಥಿನಿಯರು ಅದು ಸರಿಯಲ್ಲ ಎಂದು ವಾದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಮತ್ತು ಯಾವುದೇ ದೂರು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

news file

ಆದರೆ ಬಲಪಂಥೀಯರು ಇದಕ್ಕೆ ಕೋಮು ಆಯಾಮ ನೀಡಿ, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಇದನ್ನೇ ನಂಬಿಕೊಂಡು, ವಿಡಿಯೋವನ್ನು ಪರಿಶೀಲನೆ ನಡೆಸದೆ ಕೆಲವೊಂದು ಗೋದಿ ಮಾಧ್ಯಮಗಳೂ ಅದೇ ರೀತಿ ಸುದ್ದಿ ಪ್ರಕಟಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಿಗೆ ಸಂಪುಟದಿಂದ ಉಚ್ಚಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ...

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X