ಮುಂಬೈ | ಆಕಸ್ಮಿಕವಾಗಿ ಪತ್ನಿಯನ್ನು ಸ್ಪರ್ಶಿಸಿದ ವ್ಯಕ್ತಿಗೆ ಬಾರಿಸಿದ ಪತಿ; ರೈಲ್ವೆ ಟ್ರ್ಯಾಕ್‌ಗೆ ಬಿದ್ದವ ಅಪ್ಪಚ್ಚಿ!

Date:

Advertisements
  • ಮುಂಬೈನ ಸಿಯಾನ್ ರೈಲ್ವೇ ನಿಲ್ದಾಣದಲ್ಲಿ ಆ.13ರಂದು ನಡೆದ ಆಘಾತಕಾರಿ ಘಟನೆ
  • ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಕೊಲೆ ಆರೋಪದಡಿ ದಂಪತಿ ಬಂಧಿಸಿದ ಪೊಲೀಸರು

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೇ ಎಂಬ ನಾಣ್ಣುಡಿಯೊಂದು ನಮ್ಮ ನಡುವೆ ಚಾಲ್ತಿಯಲ್ಲಿದೆ. ಅದೇ ರೀತಿ ಅಕಸ್ಮಾತ್ ಪತ್ನಿಗೆ ತಾಗಿದ್ದ ವ್ಯಕ್ತಿಯೋರ್ವನ ಕೆನ್ನೆಗೆ ಬಾರಿಸಿದ ಪತಿರಾಯನಿಂದಾಗಿ, ದಂಪತಿ ಈಗ ಜೈಲು ಕಂಬಿ ಎಣಿಸಬೇಕಾದ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಮುಂಬೈ ಸಮೀಪ ನಡೆದಿದೆ.

ಕಳೆದ ಆಗಸ್ಟ್ 13ರಂದು ಮುಂಬೈನ ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುಂಬೈನ ಸಿಯಾನ್ ರೈಲ್ವೆ ನಿಲ್ದಾಣದಲ್ಲಿ ಅವಿನಾಶ್ ಮತ್ತು ಶೀತಲ್ ದಂಪತಿ ರೈಲಿಗಾಗಿ ಪ್ಲಾಟ್‌ಫಾರಂನಲ್ಲಿ ಕಾಯುತ್ತಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ದಿನೇಶ್‌ ಎಂಬಾತ ಅಚಾತುರ್ಯದಿಂದ ಶೀತಲ್‌ಗೆ ತಾಗಿದ್ದಾನೆ.

Advertisements

ಮೊದಲು ಆಕೆ ತನ್ನ ಛತ್ರಿಯಿಂದ ಆತನಿಗೆ ಬಡಿಯಲು ಯತ್ನಿಸಿದ್ದಾಳೆ. ಇದೇ ವೇಳೆ ಅನತಿ ದೂರದಲ್ಲಿ ನಿಂತಿದ್ದ ಆಕೆಯ ಪತಿರಾಯ ದಿನೇಶ್‌ ಕೆನ್ನೆಗೆ ರಭಸದಿಂದ ಬಾರಿಸಿದ್ದಾನೆ. ಈ ವೇಳೆ ಆಯತಪ್ಪಿದ ದಿನೇಶ್, ರೈಲ್ವೆ ಟ್ರ್ಯಾಕ್‌ಗೆ ಬಿದ್ದಿದ್ದಾನೆ. ಅದೇ ವೇಳೆ ಬಂದ ರೈಲು ದಿನೇಶ್ ಮೇಲೆ ಹರಿದಿದೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಗಿರುವುದು ಇಷ್ಟು ಘಟನೆ. ಈಗ ದಂಪತಿ ಜೈಲು ಪಾಲಾಗಿದ್ದಾರೆ.

‘ಆಗಸ್ಟ್ 13ರಂದು ಸಿಯೋನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ -1ರಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆಗೆ ದಂಪತಿಗಳು ಜಗಳವಾಡಿದ್ದಾರೆ. ನಂತರ ಆತನ ಕೆನ್ನೆಗೆ ಪತಿ ಬಾರಿಸಿದ್ದಾರೆ. ಈ ಹೊಡೆತದ ರಭಸಕ್ಕೆ ಹಳಿ ಮೇಲೆ ಬಿದ್ದಿದ್ದು, ಬಳಿಕ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ದಂಪತಿ ಸ್ಥಳದಿಂದ ಪರಾರಿಯಾಗಿದ್ದರು. ಆ ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ದಂಪತಿಯನ್ನು ಪತ್ತೆ ಹಚ್ಚಿದ್ದು, ಬಂಧಿಸಲಾಗಿದೆ’ ಎಂದು ದಾದರ್ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ದಂಪತಿಯನ್ನು ಅವಿನಾಶ್ ಮಾನೆ (31) ಮತ್ತು ಶೀತಲ್ ಮಾನೆ (30) ಎಂದು ಗುರುತಿಸಲಾಗಿದೆ. ಇವರು ಕೊಲ್ಹಾಪುರ ಮೂಲದವರು. ಮನ್ಖುರ್ದ್‌ನಲ್ಲಿ ಪತ್ತೆಹಚ್ಚಿ, ಬಂಧಿಸಲಾಗಿದೆ. ಮೃತಪಟ್ಟವನನ್ನು ದಿನೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಘನ್ಸೋಲಿ ಪ್ರದೇಶದ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮದ್ಯದ ಅಮಲಿನಲ್ಲಿದ್ದ ರಾಥೋಡ್, ಶೀತಲ್ ಅನ್ನು ಸ್ಪರ್ಶಿಸಿದ್ದಾನೆ. ಆ ಬಳಿಕ ಅವಿನಾಶ್ ಕೆನ್ನೆಗೆ ಬಾರಿಸಿದ್ದರಿಂದ ಈ ಘಟನೆ ನಡೆದಿದೆ. ಚಲಿಸುವ ರೈಲಿಗೆ ಸಿಲುಕಿ ಸಾಯಬಹುದು ಎಂದು ತಿಳಿದಿದ್ದರೂ ಕೂಡ ರಾಥೋಡ್‌ನನ್ನು ರಕ್ಷಿಸಲು ದಂಪತಿಗಳು ಸಹಾಯ ಮಾಡಲಿಲ್ಲ. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ್ದೇವೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಸಾಮಾನ್ಯ ಉದ್ದೇಶದ ಅಪರಾಧವಲ್ಲದ ನರಹತ್ಯೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ದಂಪತಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಿಗೆ ಸಂಪುಟದಿಂದ ಉಚ್ಚಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ...

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X